‘ನಮ್ಮ ಸಿನಿಮಾ ಬಹಳ ಜನರಿಗೆ ಕನೆಕ್ಟ್‌ ಆಗಿದೆ. ಬಂದವರೇ ಮತ್ತೆ ಮತ್ತೆ ಥೇಟರಿಗೆ ಬರುವ ಜೊತೆ ಫ್ಯಾಮಿಲಿಯನ್ನೂ ಕರೆತಂದಿದ್ದಾರೆ. ನಮ್ಮೂರು ಸುಳ್ಯ, ಪುತ್ತೂರು ಮೊದಲಾದೆಡೆ ಚಿತ್ರ ಹೌಸ್‌ಫುಲ್‌ ಪ್ರದರ್ಶನ ಕಂಡಿದೆ. ಬಾಯಿಮಾತಿನ ಪ್ರಚಾರವೇ ಸಿನಿಮಾವನ್ನು ಗೆಲ್ಲಿಸಿದೆ’ ಎಂದು ನಿರ್ದೇಶಕ ಮಯೂರ್‌ ಅಂಬೆಕಲ್ಲು ತಿಳಿಸಿದ್ದಾರೆ. 

‘ನಮ್ಮ ಸಿನಿಮಾ ಬಹಳ ಜನರಿಗೆ ಕನೆಕ್ಟ್‌ ಆಗಿದೆ. ಬಂದವರೇ ಮತ್ತೆ ಮತ್ತೆ ಥೇಟರಿಗೆ ಬರುವ ಜೊತೆ ಫ್ಯಾಮಿಲಿಯನ್ನೂ ಕರೆತಂದಿದ್ದಾರೆ. ನಮ್ಮೂರು ಸುಳ್ಯ, ಪುತ್ತೂರು ಮೊದಲಾದೆಡೆ ಚಿತ್ರ ಹೌಸ್‌ಫುಲ್‌ ಪ್ರದರ್ಶನ ಕಂಡಿದೆ. ಬಾಯಿಮಾತಿನ ಪ್ರಚಾರವೇ ಸಿನಿಮಾವನ್ನು ಗೆಲ್ಲಿಸಿದೆ’ ಎಂದು ನಿರ್ದೇಶಕ ಮಯೂರ್‌ ಅಂಬೆಕಲ್ಲು ತಿಳಿಸಿದ್ದಾರೆ. ಮಯೂರ್‌ ಅಂಬೆಕಲ್ಲು ಹಾಗೂ ತೇಜಸ್‌ ಕಿರಣ್‌ ನಿರ್ದೇಶನ, ನಿರ್ಮಾಣದ ‘ಭಾವತೀರ ಯಾನ’ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಮಾತನಾಡಿರುವ ನಿರ್ದೇಶಕ ಮಯೂರ್‌, ‘ಸಿನಿಮಾ ಬಿಡುಗಡೆಗೆ ಮೊದಲು ಆತಂಕ ಇದ್ದೇ ಇತ್ತು. ನಾವು ಹೇಳಹೊರಟಿರುವ ಈ ಸೂಕ್ಷ್ಮ ಎಮೋಶನಲ್‌ ವಿಚಾರ ಜನರಿಗೆ ಕನೆಕ್ಟ್ ಆಗುತ್ತಾ ಇಲ್ವಾ, ಜನ ಈ ಬಗೆಯ ಸಿನಿಮಾವನ್ನು ಸ್ವೀಕರಿಸುತ್ತಾರಾ ಎಂದೆಲ್ಲ ಗೊಂದಲ ಇತ್ತು. ಆದರೆ ಈಗ ಒಂದು ಬಗೆಯ ನಿರಾಳತೆ ಇದೆ. ಪ್ರೇಕ್ಷಕರು ನಮಗಿಂತ ಬಹಳ ಬುದ್ಧಿವಂತರು. ಸಿನಿಮಾಕ್ಕೆ ಉತ್ತಮ ಬೆಂಬಲ ನೀಡಿದ್ದಾರೆ. ಇದು ಜನರಿಗೆ ಅರ್ಥ ಆಗೋದು ಕಷ್ಟ ಇದೆ ಅಂದುಕೊಂಡ ವಿಚಾರವನ್ನೂ ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡು ಮೆಚ್ಚಿಕೊಂಡಿದ್ದಾರೆ. ಇವೆಲ್ಲ ನಮ್ಮಲ್ಲಿ ಹುಮ್ಮಸ್ಸು ತುಂಬುತ್ತವೆ’ ಎಂದಿದ್ದಾರೆ.

‘ಸಿನಿಮಾ ಖರೀದಿ ಬಗ್ಗೆ ಓಟಿಟಿ ಜೊತೆ ಮಾತುಕತೆ ನಡೆಯುತ್ತಿದೆ. ಆದರೂ ಈ ಸಿನಿಮಾವನ್ನು ಥೇಟರ್‌ ಸೆಟಪ್‌ನಲ್ಲಿ ನೋಡಿದರೆ ಆ ಸೌಂಡ್‌, ಅದ್ಭುತ ವಿಶುವಲೈಸೇಶನ್‌ ಮನಸ್ಸಿಗೆ ಹತ್ತಿರವಾಗುತ್ತದೆ. ಬೆಂಗಳೂರಿನ ಜೊತೆಗೆ ನಮ್ಮೂರು ಮಂಗಳೂರಿನಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪುತ್ತೂರಿನ ಭಾರತ್‌ ಥೇಟರ್‌ನಲ್ಲಿ ಹಲವು ಹೌಸ್‌ಫುಲ್‌ ಶೋಗಳನ್ನು ಕಂಡ ಮೊದಲ ಸಿನಿಮಾ ಅನ್ನೋ ಹೆಗ್ಗಳಿಕೆಗೆ ನಮ್ಮ ಚಿತ್ರ ಪಾತ್ರವಾಗಿದೆ’ ಎಂದು ವಿವರಿಸಿದ್ದಾರೆ.

BIFFES 2025: ಆಸ್ಕರ್‌ ಪಟ್ಟಿಯಲ್ಲಿರುವ ಸಿನಿಮಾ ಪ್ರದರ್ಶನಕ್ಕೆ ಕಿಕ್ಕಿರಿದ ಜನಸಂದಣಿ

‘ಇದಲ್ಲದೇ ನನ್ನ ಸಂಗೀತ ನಿರ್ದೇಶನಕ್ಕೆ ಒಳ್ಳೊಳ್ಳೆ ಬ್ಯಾನರ್‌ಗಳಿಂದ ಆಫರ್‌ ಬರುತ್ತಿದೆ. ಸದ್ಯದಲ್ಲೇ ಒಂದು ಸಿನಿಮಾ ಅನೌನ್ಸ್‌ ಆಗಲಿದೆ. ಜೊತೆಗೆ ನಮ್ಮ ಈ ಟೀಮ್‌ನಿಂದ ಹೊಸ ಸಬ್ಜೆಕ್ಟ್‌ನಲ್ಲಿ ಸಿನಿಮಾ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ನಿರ್ಮಾಪಕರಿಗೆ ಎದುರು ನೋಡುತ್ತಿದ್ದೇವೆ. ಸಿಗದಿದ್ದರೆ ನಮ್ಮ ಬ್ಯಾನರ್‌ ಮೂಲಕವೇ ನಿರ್ಮಾಣವನ್ನೂ ಮಾಡುತ್ತೇವೆ’ ಎಂದೂ ಮಯೂರ್‌ ತಿಳಿಸಿದ್ದಾರೆ.