ನಟ ಗುರುಪ್ರಸಾದ್ ಅವರ ಕೊನೆಯ ಆಡಿಯೋದಲ್ಲಿನ ಸಂಭಾಷಣೆ ಹಾಗೂ ಪತ್ನಿ ಸುಮಿತ್ರಾ ಅವರ ಸ್ಪಷ್ಟನೆ ಇಲ್ಲಿದೆ. ನಮ್ಮ ಗಂಡ-ಹೆಂಡತಿ ವೈಯಕ್ತಿಕ ವಿಚಾರದ ಆಡಿಯೋ ರಿಲೀಸ್ ಮಾಡಿದ ನೀಚ ಮಾವನ ಬಗ್ಗೆಯೂ ಮಾತನಾಡಿದ್ದಾರೆ. 

ನನಗೆ ಮಾಡಿರುವ ನಷ್ಟದ ಊಹೆಯೂ ನಿನಗಿಲ್ಲ. ನಿನಗೆ ಮಗಳಿಗೆ ಒಂದಷ್ಟು ಮಾಡಿಟ್ಟು ಸಾಯುತ್ತೇನೆ. ಎಲ್ಲ ಮುಗಿಸಿ ನಾನು ಸತ್ತರೆ ಸಾಕಾಗಿದೆ. ಊಟಕ್ಕೆ ಗತಿ ಇಲ್ಲದೇ ನಾನು ಬದುಕುತ್ತಿದ್ದೇನೆ ಎಂದು ನಟ, ನಿರ್ದೇಶಕ ಗುರುಪ್ರಸಾದ್ ಅವರು ತಮ್ಮ 2ನೇ ಹೆಂಡತಿ ಸುಮಿತ್ರಾ ಅವರೊಂದಿಗೆ ಮಾತನಾಡಿದ್ದ ಆಡಿಯೋ ಇದಾಗಿದೆ. ಈ ಬಗ್ಗೆ ಸುಮಿತ್ರಾ ಏನು ಹೇಳಿದ್ದಾರೆ ಕೂಡ ಹಲವು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಜೊತೆಗೆ, ನನ್ನ ಗಂಡನ ಚಿಕ್ಕಪ್ಪನೇ ಈ ವಿಡಿಯೋ ರಿಲೀಸ್ ಮಾಡಿದ ನೀಚ ಎಂದು ಹೇಳಿದ್ದಾರೆ.

ಜೂ.20ರಂದು ನಡೆದ ಘಟನೆ ಇದು. ಇದು ಈಗ ಆಡಿಯೋ ರಿಲೀಸ್ ಮಾಡಿರುವ ವ್ಯಕ್ತಿ ನನ್ನ ಗಂಡನ ಚಿಕ್ಕಪ್ಪ. ನನಗೆ ಮಾವ ಆಗಬೇಕು. ಇವರಿಬ್ಬರ ನಡುವೆ ತುಂಬಾ ಮನಸ್ತಾಪ ಇತ್ತು. ಆಮೇಲೆ ನಮಗೆ ಮದುವೆಯಾಗಿ ಮಗುವಾದ ನಂತರ ಅವರೂ ಬಂದು ಮಗಳ ಮೇಲೆ ಪ್ರೀತಿ ತೋರಿಸುತ್ತಾರೆ. ಆಗ ನಾವು ಬಂಧುಗಳು ಆಗಿದ್ದರಿಂದ ಗೌರವ ಕೊಡುತ್ತಿದ್ದೆವು. ಆದರೆ, ಗಂಡನೊಂದಿಗೆ ಮಾತನಾಡಿದ ವಿಡಿಯೋವನ್ನು ಅವರು ಇದೀಗ ರಿಲೀಸ್ ಮಾಡಿದ್ದು, ಆತ್ಮಹತ್ಯೆಗೆ ನಾನೇ ಪ್ರಚೋದನೆ ಮಾಡಿದ್ದೇನೆ ಎಂಬ ಆರೋಪ ಹೊರಿಸಲು ಮುಂದಾಗಿದ್ದಾರೆ ಎಂದು ಹೇಳಿದರು.

ನನ್ನ ಮಗಳನ್ನು ನಾನು ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದೆ. ಕೆಮ್ಮು, ನೆಗಡಿ, ಜ್ವರದಿಂದ ಮಗು ಬಳಲುತ್ತಿತ್ತು. ಈ ಬಗ್ಗೆ ಮಾತನಾಡಿದ ದಾಖಲೆ ನನ್ನ ಮೊಬೈಲ್‌ನಲ್ಲಿ ಡಿಲೀಟ್ ಮಾಡಿದ್ದರೂ ಅವರ ಮೊಬೈಲ್‌ನಲ್ಲಿ ಇದ್ದೇ ಇರುತ್ತದೆ. ಅದು ಪೊಲೀಸರ ರೆಕಾರ್ಡ್‌ನಲ್ಲಿಯೂ ಇರುತ್ತದೆ. ಅದನ್ನು ಅವರೇನು ಸಾಮಾನ್ಯವಾಗಿ ಸುಮ್ಮನೆ ಬಿಡುವುದಿಲ್ಲ. ನಾನೇನು ನಮ್ಮ ಗಂಡನಿಗೆ ಆತ್ಮಹತ್ಯೆಗೆ ಪ್ರಚೋದನೆ ಮಾಡಿಲ್ಲ, ನಮ್ಮಿಬ್ಬರ ನಡುವೆ ಯಾವುದೇ ಜಗಳವೂ ಕೂಡ ಇರಲಿಲ್ಲ. ಅವರು ನನಗೆ ಹೆಸರಿಡಿದೂ ಕರೆದಂತಹ ವ್ಯಕ್ತಿ ಅಲ್ಲ. ರೋ ಹೋಗ್ರೀ..ಎಂದು ಮರ್ಯಾದೆ ಕೊಟ್ಟು ಕರೆಯುತ್ತಿದ್ದರು. ಅವರು ತುಂಬಾ ಪ್ರೀತಿಯನ್ನು ಕೂಡ ಕೊಡುತ್ತಿದ್ದರು ಎಂದರು.

ನಾವು ಮಾತನಾಡಿದ್ದು ಏನೆಂದರೆ, ಮಗುವಿಗೆ ಹುಷಾರಿಲ್ಲ, ನಾನು ಮನೆಗೆ ಬಂದೆ. ನೀವು ಮಗು ನೋಡಿಲ್ಲ, ಅಡ್ಮಿಟ್ ಮಾಡಿದ್ದೀನಿ ಎಂದು ಹೆಂಡತಿ ಕೇಳೋದು ತಪ್ಪಾ? ಅದಕ್ಕೆ ಅವರು ಕೋಪದಲ್ಲಿ ಏನೇನೋ ಉದಾಹರಣೆ ಕೊಟ್ಟು ಮಾತನಾಡಿದ್ದಾರೆ. ಅವರಿಗೆ ಇದ್ದ ಸಿನಿಮಾದ ಒತ್ತಡದಿಂದಾಗಿ ಅವರು ನನಗೆ ಒಂದು ಮಾತನ್ನು ಹೇಳುತ್ತಾರೆ. ಆಗ ನನಗೆ ತುಂಬಾ ಕಷ್ಟ ಇದೆ, ನೀವೇ ಸ್ವಲ್ಪ ನೋಡಿ ದೀಕ್ಷಿತರೇ ಎಂದು ಪರ್ಸನಲ್ ಆಗಿ ಒಂದು ಆಡಿಯೋವನ್ನು ಕಳಿಸುತ್ತೇನೆ. 

ಇದನ್ನೂ ಓದಿ: 'ಎದ್ದೇಳು ಮಂಜುನಾಥ 2' ಚಿತ್ರಕ್ಕೆ ಗುರುಪ್ರಸಾದ್‌ ಪತ್ನಿಯಿಂದಲೇ ತಡೆ; ಸಾಯೋ ಹಿಂದಿನ ದಿನ ಪತ್ನಿ ಜೊತೆ ಗುರು ಜಗಳದ ಆಡಿಯೋ ವೈರಲ್

ಥೂ.. ಏನ್ರಿ ಕರ್ಮ ಇದು ಎಂದು ಅವರು ನನಗೆ ಮೆಸೇಜ್‌ನಲ್ಲಿ ರಿಪ್ಲೈ ಮಾಡ್ತಾರೆ. ಆಗ ಫೋನ್ ಮಾಡಿ ನಾವಿಬ್ಬರೂ ಮಾತನಾಡ್ತೀವಿ. ಆದರೆ, ನಾವಿಬ್ಬರೂ ಸಂಸಾರದ ಬಗ್ಗೆ ಮಾತನಾಡಿದ್ದ ಆಡಿಯೋವನ್ನು ಕೊಟ್ಟಿಲ್ಲ ಅವರು. ಆದರೆ, ಈ ತರಹ ಗಂಡ ಹೆಂಡತಿ ಕಷ್ಟ ಬಂದಾಗ ಮಾತನಾಡಿಕೊಂಡ ಆಡಿಯೋ, ವಿಡಿಯೋವನ್ನು ಕೊನೆಯದಾಗಿ ಮಾತನಾಡಿದ ಆಡಿಯೋ ಎಂದು ವೈರಲ್ ಮಾಡುತ್ತಿರುವ ನೀಚರನ್ನು ಏನಂದು ಕರೆಯಬೇಕು ಗೊತ್ತಾಗುತ್ತಿಲ್ಲ. ಇದು ನಮ್ಮ ಪರ್ಸನಲ್ ವಿಚಾರ. ಯಾರ ಮನೆಯಲ್ಲಿಯೂ ನಡೆಯದಿರುವ ಮಾತುಕತೆ ಏನಲ್ಲ ಎಂದು ಹೇಳಿದರು.

ಆಡಿಯೋದಲ್ಲಿ ದುಡ್ಡಿನ ಸಮಸ್ಯೆ ಎಂದು ಅವರು ಹೇಳುತ್ತಾರೆ. ಇಡೀದ ಬಿಡುಗಡೆ ಮಾಡಿರುವ ಆಡಿಯೋ ಕೇಳಿದರೆ ನಿಮಗೆ ಗೊತ್ತಾಗುತ್ತದೆ. ನಾನು ಅವರ ಬಳಿ ದುಡ್ಡು ಕೇಳುವುದಕ್ಕೆ ಕರೆ ಮಾಡಿಲ್ಲ. ನನ್ನ ಎಲ್ಲ ಮೆಸೇಜ್ ತೆಗೆದು ನೊಡಿದರೂ, ಅವರು ದುಡ್ಡಿನ ವಿಚಾರವನ್ನು ಹೇಳುತ್ತಾರೆ ಹೊರತು ನಾವು ಹಣ ಕೇಳಿಲ್ಲ. ಮಗುವಿಗೆ ಹುಷಾರಿಲ್ಲ ಎಂದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಬೇಕಾದದ್ದು ಅವರ ಕರ್ತವ್ಯ. ನಾನು ಅದನ್ನೂ ಕೇಳಿಲ್ಲ ಸರ್, 'ಮಗು ನಿಮ್ಮನ್ನು ನೆನಪು ಮಾಡಿಕೊಂಡು ಕೊರಗುತ್ತಿದೆ.. ನೋಡಿ ಬಂದು ಅಟೆಂಡ್ ಮಾಡಿ' ಎಂದು ಹೇಳಿದ್ದೇನೆ ಎಂದರು.

'ನಟ, ನಿರ್ದೇಶಕ ಹೆಂಡತಿ ಸುಮಿತ್ರಾ ಜೊತೆ ಮಾತನಾಡಿದ ಆಡಿಯೋ'
'ನನಗಿರುವ ಒತ್ತಡ ನಿಮಗೆ ಕಲ್ಪನೆ ಇಲ್ಲ ಎಂದು ನಿಮಗೆ ಆವತ್ತೇ ಹೇಳಿದ್ದೇನೆ. ನನ್ನ ಜೊತೆಗೆ ಇದ್ರಿ, ಮನೆಗೂ ಬಂದಾಯ್ತು. ಯಾರೋ ಸತ್ತರು ಎಂದು ನಿಮ್ಮನೆಗೆ ಹೋದ್ರಿ. ನಾನು ಕೂಲಿ ತರ ಇಲ್ಲಿ ಸಾಯ್ತಿದೀನಿ. ಇಷ್ಟರಲ್ಲೇ ಮಗುಗೆ ಹುಷಾರಿಲ್ಲ ಎಂದು ಸಮಸ್ಯೆ ಸೃಷ್ಟಿಸಿ ನೀವು ಬಂದೇ ಬರ್ತಾರೆ ಎಂದು ನನಗೆ ಗೊತ್ತಿತ್ತು. ನಾನು ದರ್ಶನ್, ಅವರಿವರ ಹಂಗಿಲ್ವೇ? ನನ್ನ ಬಳಿ ದುಡ್ಡಿಲ್ಲ. ದುಡ್ಡಿದ್ದರೂ ನಾನು ಹಂಗೆಲ್ಲ ಮಾಡೊಲ್ಲ. ನಾನು ಸರಿಯಾಗಿ ಯೋಚನೆ ಮಾಡ್ತೀನಿ, ಸರಿಯಾಗಿ ಹೇಳ್ತೀನಿ ತಾಳ್ಮೆ ಬೇಕು ಇಂತಹ ಟೈಮಲ್ಲಿ ಅಂತ. ನೀವು ಇದುವರೆಗೆ ನಮಗೆ ಎಷ್ಟು ಲಾಸ್ ಮಾಡಿದ್ದೀರಿ ಎಂದು ನಿಮಗೆ ಕಲ್ಪನೆಯೂ ಇಲ್ಲ.

ಇದನ್ನೂ ಓದಿ: ಗುರುಪ್ರಸಾದ್ ಕೊನೆಯ ಚಿತ್ರ 'ಎದ್ದೇಳು ಮಂಜುನಾಥ-2' ರಿಲೀಸ್‌ಗೆ ಸಿದ್ಧ; ಮಾಡುತ್ತಾ ಮ್ಯಾಜಿಕ್?

ನನ್ನ ಮೊಬೈಲ್ ಸೇರಿದಂತೆ ಎಲ್ಲವನ್ನೂ ಇಟ್ಟುಕೊಂಡು ನನ್ನನ್ನು ಕಂಟ್ರೋಲ್ ತೆಗೆದುಕೊಳ್ಳಬೇಕು ಎಂದುಕೊಂಡಿದ್ದೀರಿ. ನನ್ನನ್ನು ಕಂಟ್ರೋಲ್‌ಗೆ ತೆಗೆದುಕೊಳ್ಳೋಕೆ ಆಗೊಲ್ಲ. ಇದ್ದರೆ ನಾನು ಸಾಯುವುದರೊಳಗೆ ಒಂದಷ್ಟು ಮಾಡಿ ಕೊಟ್ಟುಬಿಟ್ಟು ಸತ್ತರೆ ಸಾಕಾಗಿದೆ. ಮುಂದೆ ಏನು ಮಾಡಬೇಕು ಎಂದುಕೊಂಡಿದ್ದೀರಿ ಹೇಳಿ ನೀವು. ನನಗೆ ಊಟಕ್ಕೂ ಗತಿಯಿಲ್ಲ. ಏನೇನೋ ಮಾಡಿಕೊಂಡು ಇಲ್ಲಿ ಕೂತಿದೀನಿ. ನನ್ನ ಕೆಲಸ ಮಗಿಸಿ, ಕೊಡೋರಿಗೆ ಕೊಟ್ಟುಬಿಟ್ಟು, ಒಂದಷ್ಟು ಉಳಿಸಿಬಿಟ್ಟು, ನಿಮಗೆ-ಮಗಳಿಗೆ ಒಂದಷ್ಟು ದುಡ್ಡುಕೊಟ್ಟು ಅವತ್ತು ರಾತ್ರಿಯೇ ಸಾಯಬೇಕು ಎಂದುಕೊಂಡಿರೋದೇ ನನ್ನ ಆಸೆ. ಇದು ಗೊತ್ತಿದ್ದರೆ ನೀವು ಏನೇನೋ ಟೆಕ್ನಿಕ್ ಮಾಡೊಲ್ಲ' ಎಂದು ಮಾತನಾಡಿದ್ದಾರೆ.