ರಚಿತಾ ರಾಮ್, 'ಬುಲ್ ಬುಲ್' ಚಿತ್ರದ ಮೂಲಕ ೨೦೧೩ರಲ್ಲಿ ಚಿತ್ರರಂಗ ಪ್ರವೇಶಿಸಿ, ಸೈಮಾ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ದರ್ಶನ್ ಅವರ ಬೆಂಬಲದಿಂದ ಯಶಸ್ಸು ಗಳಿಸಿದ ರಚಿತಾ, ಈಗ 'ಭರ್ಜರಿ ಬ್ಯಾಚುಲರ್ಸ್' ನಲ್ಲಿ ತೀರ್ಪುಗಾರರಾಗಿದ್ದಾರೆ. ರವಿಚಂದ್ರನ್ ಅವರು ರಚಿತಾ ಅವರ ಮದುವೆ ಸುದ್ದಿಯನ್ನು ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಸ್ಯಾಂಡಲ್‌ವುಡ್ ಬುಲ್ ಬುಲ್, ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಸದ್ಯಕ್ಕೆ ಬೇಡಿಯ ಲಿಸ್ಟ್‌ನಲ್ಲಿ ಮೊದಲ ಸ್ಥಾನ ಪಡೆದಿರುವ ನಟಿ. 2013ರಲ್ಲಿ ತೆರೆಕಂಡ 'ಬುಲ್‌ಬುಲ್' ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದ ರಚಿತಾ ಕೈಯಲ್ಲಿ ಈಗ ಅನೇಕ ಚಿತ್ರಗಳಿವೆ. ಪ್ರಥಮ ಚಿತ್ರ ಬುಲ್ಬುಲ್ನಲ್ಲಿಯೇ ತಮ್ಮ ಡೈಲಾಗ್ ಡೆಲಿವರಿ ಸ್ಟೈಲ್ ಮತ್ತು ನಟನೆಯಿಂದ ಮನ ಗೆದ್ದ ಬೆಡಗಿ ಈಕೆ. ಇದರ ಯಶಸ್ಸಿನ ಬೆನ್ನಲ್ಲೇ ಅಂಬರೀಶ್, `ದಿಲ್ ರಂಗೀಲಾ', `ರನ್ನ', `ರಥಾವರ', `ಚಕ್ರವ್ಯೂಹ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವಾರು ಖ್ಯಾತ ಚಿತ್ರನಟರ ಜೊತೆ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ. ಕನ್ನಡದ ಬಹುಬೇಡಿಕೆಯ ನಟಿಯಾಗಿರೋ ರಚಿತಾ ಅವರಿಗೆ ರನ್ನ ಚಿತ್ರದ ಅಭಿನಯಕ್ಕಾಗಿ ಸೈಮಾ ಉತ್ತಮ ನಟಿ ಪ್ರಶಸ್ತಿ ಮತ್ತು ಫಿಲ್ಮಫೇರ್ ಸೌತ್ ಪ್ರಶಸ್ತಿ ಕೂಡ ಲಭಿಸಿದೆ.
ಇದೀಗ ನಟಿ, ಜೀ ಕನ್ನಡದ ಭರ್ಜರಿ ಬ್ಯಾಚುಲರ್ಸ್ನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ನಟಿ ಸಿನಿ ಪಯಣಕ್ಕೆ ಕಾಲಿಟ್ಟು 12 ವರ್ಷಗಳೇ ಆಗಿವೆ. ಭರ್ಜರಿ ಬ್ಯಾಚುಲರ್ಸ್ನಲ್ಲಿ ಈ ವಿಶೇಷ ದಿನವನ್ನು ವಿಶೇಷ ರೀತಿಯಲ್ಲಿ ಸೆಲಬ್ರೇಟ್ ಮಾಡಲಾಗಿದೆ. ನಟಿ ನಟಿಸಿರುವ ಕೆಲವು ಸಿನಿಮಾ ತುಣುಕುಗಳನ್ನು ಇದರಲ್ಲಿ ತೋರಿಸಲಾಗಿದೆ. ಈ ಸಂದರ್ಭದಲ್ಲಿ, ನಟಿ, ನಟ ದರ್ಶನ್ ಅವರನ್ನು ನೆನಪಿಸಿಕೊಂಡಿದ್ದಾರೆ. ‘ಬುಲ್ ಬುಲ್’ 2013ರ ಮೇ 10ರಂದು ರಿಲೀಸ್ ಆಯಿತು. ಅವರಿಗೆ ಅವಕಾಶ ನೀಡಿದ್ದು ದರ್ಶನ್. ಆ ಸಿನಿಮಾ ಹಿಟ್ ಆಗಿ ರಚಿತಾ ಅವರು ಸಾಕಷ್ಟು ಜನಪ್ರಿಯತೆ ಪಡೆದರು. ಅವರನ್ನು ಎಲ್ಲರೂ ‘ಬುಲ್ ಬುಲ್’ ಎಂದೇ ಕರೆಯೋಕೆ ಆರಂಭಿಸಿದರು. ಅಷ್ಟು ಖ್ಯಾತಿಯನ್ನು ಈ ಸಿನಿಮಾ ತಂದುಕೊಟ್ಟಿತು. ನನ್ನ ಉಸಿರು ಇರೋವವರೆಗೂ ಒಂದು ಹೆಸರನ್ನು ನೆನಪಿಸಿಕೊಳ್ಳುತ್ತೇನೆ. ನಾನು ಎಲ್ಲೇ ಹೋದರು ಜನರು ನನ್ನ ಹೆಸರು ಕೂಗುತ್ತಾರೆ. ಇದಕ್ಕೆ ಕಾರಣ ಆಗಿದ್ದು ದರ್ಶನ್ ಸರ್’ ಎಂದರು.
ಗುಳಿಕೆನ್ನೆ ಚೆಲುವೆ ರಚಿತಾ ಮದ್ವೆ ಫಿಕ್ಸ್ ಆಗೋಯ್ತು? ರವಿಮಾಮಾ ಮಾತಿಗೆ ಹುಡುಗರ ಹಾರ್ಟ್ ಬ್ರೇಕಾಗೋಯ್ತು!
ಅಷ್ಟರಲ್ಲಿಯೇ ದರ್ಶನ್ ಅವರ ಧ್ವನಿ ಅಲ್ಲಿಂದ ಕೇಳಿ ಬಂತು. ನಮ್ಮ ಬುಲ್ ಬುಲ್ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಮಾಡ್ತಾ ಇರಲಿ ಎಂದು ಹಾರೈಸಿದಾಗ ರಚಿತಾ ಭಾವುಕರಾದರು. ಅಷ್ಟಕ್ಕೂ ರಚಿತಾ ರಾಮ್ ಅವರು ಕಿರುತೆರೆಯಲ್ಲಿ ಪರಿಚಯವಾದದ್ದು ಬಿಂದಿಯಾ ರಾಮ್ ಎಂದು. ಅದು ಅವರ ಮೊದಲ ಹೆಸರು ಕೂಡ. ಆದರೆ `ಹಳ್ಳಿಮೇಷ್ಟ್ರು' ಮತ್ತು `ರಾಯರು ಬಂದರು ಮಾವನ ಮನೆಗೆ' ಚಿತ್ರಗಳಲ್ಲಿ ಖ್ಯಾತಿ ಪಡೆದ ಬಳಿಕ ಈಕೆ ಬಿಂದಿಯಾಳಿಂದ ರಚಿತಾ ಆದರು. ಆದರೆ ಈಕೆಯ ಮೂಲ ತಿಳಿದವರು ಈಗಲೂ ನಟಿಯನ್ನು ಬಿಂದಿಯಾ ಎಂದೇ ಕರೆಯುವುದುಂಟು. ರಚಿತಾ ರಾಮ್, ಚಿತ್ರ ನಿರ್ಮಾಣದಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಶ್ರೀ ಮಹಾದೇವ ಮತ್ತು ಪ್ರಜ್ವಲ್ ದೇವರಾಜ್‌ರ ಪತ್ನಿ ರಾಗಿಣಿ ಚಂದ್ರನ್ (Ragini Chandran) ಅಭಿನಯದ `ರಿಷಭಪ್ರಿಯ' ಎಂಬ ಡಾಕ್ಯುಮೆಂಟರಿ ನಿರ್ಮಿಸಿದ್ದಾರೆ. ಮ್ಯೂಸಿಕಲ್ ಕಿರುಚಿತ್ರವಾಗಿದ್ದು ಸೈಮಾ ಕಿರುಚಿತ್ರ ಸ್ಫರ್ಧೆಯಲ್ಲಿ ಮೂರು ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.
ಕೆಲ ದಿನಗಳ ಹಿಂದೆ ಬ್ಯಾಚುಲರ್ಸ್ ಪಾರ್ಟಿ ರಿಯಾಲಿಟಿ ಷೋನಲ್ಲಿ, ತೀರ್ಪುಗಾರರಾಗಿರುವ ರವಿಚಂದ್ರನ್ ಅವರು ರಚಿತಾ ರಾಮ್ ಮದುವೆಯ ವಿಷಯ ರಿವೀಲ್ ಮಾಡಿದ್ದರು. ಅಷ್ಟಕ್ಕೂ ಆಗಿದ್ದು ಏಕೆಂದರೆ, ಡಾಲಿ ಧನಂಜಯ್ ನಿರ್ಮಾಣದ, ನಾಗಭೂಷಣ, ಧನಂಜಯ್, ಮಲೈಕಾ ವಸುಪಾಲ್ ನಟನೆಯ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವರೆಲ್ಲಾ ಚಿತ್ರದ ಪ್ರೊಮೋಷನ್ಗಾಗಿ ಈ ಷೋಗೆ ಬಂದಿದ್ದರು. ಈ ಸಮಯದಲ್ಲಿ ಈಚೆಗೆ ಮದ್ವೆಯಾದ ನಟ ಡಾಲಿ ಧನಂಜಯ್ ಬ್ಯಾಚುಲರ್ ಲೈಫಿನ ಬಗ್ಗೆ ಮಾತನಾಡುತ್ತಿದ್ದರು. ಆ ಸಮಯದಲ್ಲಿ ಮದ್ವೆಗೂ ಮುನ್ನ, ಮದ್ವೆ ಆದ್ಮೇಲೆ ಹೇಗಿದೆ ಜೀವನ ಕೇಳಿದಾಗ ಅವರು, ‘ಮದುವೆ ಮೊದಲು ನಾಗ ಸಿಕ್ಕರೆ ಅಲ್ಲೇ ಸೆಟಲ್, ನಿರಂಜನ್ ಸಿಕ್ಕರೆ ಅಲ್ಲೇ ಸೆಟಲ್. ಈಗ ಮನೆಗೆ ಹೋಗಬೇಕು’ ಎಂದು ತಮಾಷೆಯಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಡಾಲಿ ಅವರು, ರಚಿತಾ ರಾಮ್ ಇನ್ನೂ ಬ್ಯಾಚುಲರ್ ಆಗಿರೋದು ನೋಡಿ ಹೊಟ್ಟೆ ಉರಿಯುತ್ತಿದೆ’ ಎಂದಾಗಿ ಒಗಟಾಗಿ ರವಿಚಂದ್ರನ್ ಅವರು ಇದೇ ವರ್ಷ ಅವರ ಮದುವೆಯಾಗುತ್ತದೆ ಎಂದುಬಿಟ್ಟರು. ಇದು ಹೇಳುತ್ತಿದ್ದಂತೆಯೇ ಯುವಕರ ಹಾರ್ಟ್ ಬ್ರೇಕ್ ಆಗಿ ಹೋಗಿದೆ! ರವಿಚಂದ್ರನ್ ಹೇಳಿರುವ ಹಿಂದಿನ ಅರ್ಥವೇನು ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.
ಮಳೆ ಅಂದ್ರೆ ಇಷ್ಟ ಎಂದ ರಚಿತಾ, ಹನಿ ಬಿದ್ರೆ ಯಾಕ್ ಓಡ್ತೀರಾ, ಹುಷಾರು ಶೀತವಾಗುತ್ತೆಂದ ಫ್ಯಾನ್ಸ್


