ಶುರುವಾಯ್ತು ದಿಗ್ಗಿ-ಆ್ಯಂಡಿ ಮೋಜು ಮಸ್ತಿ; ಬೀಚಲ್ಲಿ ಹೊಸ ಕೋರ್ಸ್‌ಗೆ ಸೇರಿಕೊಂಡ ಜೋಡಿ!
ಮತ್ತೊಂದು ಸಾಹಸಕ್ಕೆ ಕೈ ಹಾಕಿದ ತಾರಾ ಜೋಡಿ. ದಿಗ್ಗಿ-ಆ್ಯಂಡಿ ಕ್ರೇಜಿ ಡ್ರೀಮ್ ಗೋಲ್‌ಗಳ ಬಗ್ಗೆ ಗೊತ್ತಾ?
ಸ್ಯಾಂಡಲ್‌ವುಡ್ ಡೆಡ್ಲಿ ಕಾಂಬಿನೇಷನ್ ಜೋಡಿ ಅಂದ್ರೆ ದಿಗ್ಗಿ- ಆ್ಯಂಡಿ. ಈ ಚಾಕೋಲೆಟ್ ಕಪಲ್ ಬಿಡುವಿದ್ದಾಗಲೆಲ್ಲಾ ಏನಾದರೂ ಡಿಫರೆಂಟ್ ಸಾಹಸಗಳಿಗೆ ಕೈ ಹಾಕುತ್ತಾರೆ. ಅದರಲ್ಲಿಯೂ 2020 ಈ ಜೋಡಿಗೆ ತುಂಬಾನೇ ಥ್ರಿಲ್ ನೀಡಿದೆ....
ಸ್ಯಾಂಡಲ್‍ವುಡ್ ಕ್ಯೂಟ್ ಕಪಲ್ ದಿಗಂತ್-ಐಂದ್ರಿತಾ ಜಾಲಿ ಟ್ರಿಪ್: ಇದು ಯಾವ ಸ್ಥಳ ಹೇಳಿ..?
ಇತ್ತೀಚಿಗೆ ಎರಡನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಜೋಡಿ ಮಂಗಳೂರಿನ ಬೀಚ್‌ನಲ್ಲಿ ಎಂಜಾಯ್ ಮಾಡುತ್ತಿದೆ. ಈ ಸಮಯದಲ್ಲಿ ಇಬ್ಬರು ಅಲ್ಲಿಯೇ ಸರ್ಫಿಂಗ್ ಕೋರ್ಸ್‌ಗೆ ಸೇರಿಕೊಂಡಿದ್ದಾರೆ. ಇಬ್ಬರೂ ಟ್ರೇನಿಂಗ್ ಪಡೆಯುತ್ತಿರುವ ಫೋಟೋ ಹಾಗೂ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇದೀಗ ಮಂಗಳೂರಿನ ಮುಲ್ಕಿಯಲ್ಲಿದ್ದಾರೆ. ಸರ್ಫ್ ಮಾಡುವ ಬೋರ್ಡ್ ಹಿಡಿದು ಪುಷಪ್ ಮಾಡಿದ್ದಾರೆ 'ಎಲ್ಲಿ ಬೇಕಾದರೂ ಎಷ್ಟೊತ್ತಿಗೆ ಬೇಕಾದರೂ..ಮುಲ್ಕಿಯಲ್ಲಿ...' ಎಂದು ದಿಗಂತ್ ಬರೆದಿದ್ದಾರೆ. ಜೊತೆಗೆ ಸ್ನೇಹಿತನ ಜೊತೆ ದಿಗಂತ್ ಮುಲ್ಕಿ ಬ್ರಿಡ್ಜ್‌ನಿಂದ ನೀರಿಗೆ ಧುಮುಕಿದ್ದಾರೆ.
ತುಸು ಸಿಲ್ಲಿ ಕೆಲಸ ಮಾಡೋಣ..ಐಂದ್ರಿತಾ ಬಹಿರಂಗ ಆಹ್ವಾನ!
'ನಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ನನ್ನ ಸ್ವೀಟ್‌ಹಾರ್ಟ್ ಗಂಡ ದಿಗಂತ್ ನನಗೆ ಸ್ಟ್ಯಾಂಡಪ್ ಪ್ಯಾಡಲ್ ಹಾಗೂ ಸರ್ಫ್ ಪಾಠ ಹೇಳಿಕೊಟ್ಟಿದ್ದಾರೆ,' ಎಂದು ಆ್ಯಂಡಿ ಪೋಸ್ಟ್ ಮಾಡಿದ್ದಾರೆ.
ದಿಗಂತ್ ಹಾಗೂ ಐಂದ್ರಿತಾ ತುಂಬಾನೇ ಅಡ್ವೆಂಚರ್ಸ್. ಅದರಲ್ಲೂ ಲಾಕ್‌ಡೌನ್ ನಂತರ ಸ್ಪೋರ್ಟ್ಸ್, ಸೈಕ್ಲಿಂಗ್, ರಾಕ್ ಕ್ಲೈಂಬಿಂಗ್ ಎಂದು ಬ್ಯುಸಿಯಾಗಿದ್ದಾರೆ. ಈಗ ಆ ಲಿಸ್ಟ್‌ಗೆ ಸರ್ಫಿಂಗ್ ಸೇರ್ಪಡೆಯಾಗಿದೆ. ಡ್ರಗ್ ಕೇಸಿನಲ್ಲಿ ಈ ಜೋಡಿಯನ್ನು ಸಿಸಿಬಿ ಒಮ್ಮೆ ವಿಚಾರಣೆಗೆ ಕರೆದಿತ್ತು. ಈ ಬಗ್ಗೆ ಸಾಕಷ್ಟು ಅನುಮಾನಗಳೂ ಹುಟ್ಟಿಕೊಂಡಿದ್ದವು. ಆದರೀಗ ಎಲ್ಲವಕ್ಕೂ ಬ್ರೇಕ್ ಬಿದ್ದಿದ್ದು, ತಮ್ಮದೇ ಲೋಕದಲ್ಲಿ ವಿಹರಿಸುತ್ತಿದೆ ಈ ಜೋಡಿ.