ಪಿಚ್ಚಕಾರನ್‌ ನಟನ ಜತೆಗೆ ದಿಯಾ ಚಿತ್ರದ ನಾಯಕ ಪೃಥ್ವಿ. ಡಾಲಿ ಧನಂಜಯ್‌ ಕೂಡ ಇರಲಿದ್ದಾರಂತೆ.  

ಕ್ಯೂಟ್ ಸ್ಮೈಲ್‌ನಿಂದ ಹೊಸ ರೀತಿಯ ಲವ್ ಸ್ಟೋರಿ ಕ್ರಿಯೇಟ್ ಮಾಡಿದ ನಟ ಪೃಥ್ವಿ ಅಂಬರ್‌ಗೆ ತಮಿಳು ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ವಿಜಯ್‌ ಆ್ಯಂಟನಿ ನಟನೆಯ, ವಿಜಯ್‌ ಮಿಲ್ಟನ್‌ ನಿರ್ದೇಶನದ ಚಿತ್ರದಲ್ಲಿ ಪೃಥ್ವಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. 

ಶಿವರಾಜ್‌ಕುಮಾರ್‌ ನಟನೆಯ ‘ಬೈರಾಗಿ’ ಚಿತ್ರಕ್ಕೆ ವಿಜಯ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಆ ಚಿತ್ರದಲ್ಲಿ ಪೃಥ್ವಿ ಹಾಗೂ ಧನಂಜಯ್‌ ಪ್ರತಿಭೆ ನೋಡಿದ ನಿರ್ದೇಶಕರು ಇಬ್ಬರು ಕಲಾವಿದರನ್ನು ತಮಿಳು ಸಿನಿಮಾದಲ್ಲಿ ನಟಿಸುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ಡಾಲಿ ಧನಂಜಯ್‌ ಕೂಡ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ 'ಪುಷ್ಪಾ' ಚಿತ್ರದ ಮೂಲಕ ಡಾಲಿ ಕಾಲಿವುಡ್‌ಗೆ ಈಗಾಗಲೇ ಎಂಟ್ರಿ ಕೊಟ್ಟಿದ್ದಾರೆ. 

ಕಡಲ ತೀರದಲ್ಲಿ ನಿಧಿ-ಆದಿ ಒಟ್ಟಾಗಿ ಕಂಡು ನೆಟ್ಟಿಗರು ಶಾಕ್; ನೀವಿನ್ನೂ ಬದುಕಿದ್ದೀರಾ?

ಇದೊಂದು ಆ್ಯಕ್ಷನ್‌ ಆಧರಿತ ಸಿನಿಮಾ ಆಗಿದ್ದು, ವಿಜಯ್‌ ಮಿಲ್ಟನ್‌ ಅವರೇ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಆಗಸ್ಟ್‌ ತಿಂಗಳಲ್ಲಿ ಈ ಚಿತ್ರಕ್ಕೆ ಶೂಟಿಂಗ್‌ ಶುರುವಾಗಲಿದೆ. ಪೃಥ್ವಿ ನಟನೆಯ ಹಲವು ಸಿನಿಮಾಗಳು ರಿಲೀಸ್‌ಗೆ ಕಾಯುತ್ತಿವೆ. ಲೋಹಿತ್ ನಿರ್ದೇಶನ ಲೈಫ್‌ ಇಸ್ ಬ್ಯೂಟಿಫುಲ್ ಸಿನಿಮಾ, ಶಶಿಧರ್ ನಿರ್ದೇಶನದ ಶುಗರ್ ಫ್ಯಾಕ್ಟರಿ, ನವೀನ್ ದ್ವಾರಕನಾಥ್ ನಿರ್ದೇಶನ Regn., ದರ್ಶನ್ ಅಪೂರ್ವ ನಿರ್ದೇಶನ ಹೆಸರಿಡದ ಚಿತ್ರ ರಿಲೀಸ್‌ಗೆ ಸಿದ್ಧವಾಗಿವೆ.