'For Regn' ಚಿತ್ರದ ಮೂಲಕ ಒಂದಾದ ಸೆನ್ಸೇಷನ್ ಸ್ಟಾರ್ಸ್. ಇವರಿಬ್ಬರು ಬದುಕಿರುವುದ ನೋಡಿ ನೆಟ್ಟಿಗರು ಶಾಕ್...
2020ರಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ 'ಲವ್ ಮಾಕ್ಟೀಲ್' ನಿಧಿ ಹಾಗೂ 'ದಿಯಾ' ಚಿತ್ರದ ಆದಿ ಒಂದಾಗಿ ತೆರೆ ಹಂಚಿಕೊಳ್ಳುತ್ತಿರುವ ಸಂತಸ ವಿಚಾರವನ್ನು ಈ ಹಿಂದೆಯೇ ಹಂಚಿಕೊಂಡಿದ್ದರು. ಆ ನಂತರದ ದಿನಗಳಲ್ಲಿ ಚಿತ್ರಕ್ಕೆ 'For Regn'ಎಂಬ ಶೀರ್ಷಿಕೆ ನೀಡಲಾಗಿದ್ದು, ಮುಹೂರ್ತದ ದಿನ ನಟ ನಿಖಿಲ್ ಕುಮಾರಸ್ವಾಮಿ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ.
'ಫಾರ್ ರಿಜಿಸ್ಪ್ರೇಷನ್' ಚಿತ್ರಕ್ಕೆ ಕ್ಲಾಪ್ ಮಾಡಿದ ನಿಖಿಲ್ ಕುಮಾರಸ್ವಾಮಿ; ಇದು ಪೃಥ್ವಿ- ಮಿಲನಾ ಸಿನಿಮಾ!
ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲವಾದರೂ, ನಾಯಕ ನಟಿ ಮಿಲನಾ ನಾಗರಾಜ್ ಚಿತ್ರೀಕರಣದ ಪೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಆದಿ ಹಾಗೂ ನಿಧಿ ಇಬ್ಬರೂ ಕ್ಯಾಮೆರಾ ಹಿಡಿದು ಕಡಲ ತೀರದಲ್ಲಿ ನಿಂತಿದ್ದಾರೆ. ಚಿತ್ರದ ಟೈಟಲ್ ಬರೆದು ನಿಧಿ ಹಾಕಿರುವ ಫೋಟೋಗೆ ನೆಟ್ಟಿಗರು ನಾನ್ ಸ್ಟಾಪ್ ಕಮೆಂಟ್ ಮಾಡುತ್ತಿದ್ದಾರೆ.
![]()
ಲೋಕಿ ಎಂಬುವವರು 'ವಾವ್ ನೀವಿಬ್ಬರೂ ಬದುಕಿದ್ದೀರಾ?' ಎಂದರೆ, 'ಮತ್ತೊಂದು ಹಿಟ್ ಜೋಡಿ ರೆಡಿಯಾಗುತ್ತಿದೆ..' ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಇದೇನಪ್ಪ ಹೀಗೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ ಅಂತ ಶಾಕ್ ಆಗಬೇಡಿ ಇದಕ್ಕೂ ಒಂದು ಕಾರಣವಿದೆ.
ಮೈಕ್ ಹಿಡಿದು ಹಾಡ್ತಿದ್ದಾರೆ ಲೈಫ್ ಈಸ್ ಬ್ಯೂಟಿಫುಲ್ ಹೀರೋ
ಲವ್ ಮಾಕ್ಟೀಲ್ ಚಿತ್ರದಲ್ಲಿ ನಿಧಿ ಕ್ಯಾನ್ಸರ್‌ನಿಂದ ಹಾಗೂ ದಿಯಾ ಚಿತ್ರದಲ್ಲಿ ಆದಿ ಲವ್ ಫೆಲ್ಯೂರ್‌ನಿಂದ ರೈಲಿಗೆ ಅಡ್ಡ ನಿಂತು ಪ್ರಾಣ ಕಳೆದುಕೊಳ್ಳುತ್ತಾರೆ. ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡ ಈ ಪಾತ್ರಗಳು ಈ ರೀತಿ ಅಂತ್ಯವಾಗಿದ್ದಕ್ಕೆ ನೆಟ್ಟಿಗರು ಬೇಸರಗೊಂಡಿದ್ದರು. ಆದರೀಗ ಈ ಜೋಡಿಯೇ ಒಂದಾಗಿ ಸಿನಿಮಾ ಮಾಡುತ್ತಿದೆ. ಆಯಾ ಪಾತ್ರಗಳು ಚಿತ್ರದಲ್ಲಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದವು. ಇದೀಗ ಈ ಜೋಡಿಯನ್ನೇ ತೆರೆ ಮೇಲೆ ಕಾಣಲು ಸ್ಯಾಂಡಲ್‌ವುಡ್ ಪ್ರೇಮಿಗಳು ಕುತೂಹಲಿಗಳಾಗಿದ್ದಾರೆ.
