ವಿಶೇಷ ಅಂದರೆ ಮಧ್ಯ ರಾತ್ರಿ ಟೀಸರ್‌ ಬಿಡುಗಡೆ ಮಾಡುವುದಕ್ಕೆ ಆಗಮಿಸುತ್ತಿರುವುದು ನಟ ಉಪೇಂದ್ರ. ‘ಓಂ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಭೂಗತ ಲೋಕವನ್ನು ಪರಿಚಯಿಸಿದ ಕೀರ್ತಿ ಉಪೇಂದ್ರ ಅವರದ್ದು. ಈಗ ದುನಿಯಾ ವಿಜಯ್‌ ಕೂಡ, ಭೂಗತ ಲೋಕದ ಕತೆಯನ್ನು ಒಳಗೊಂಡ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಉಪ್ಪಿ ಟೀಸರ್‌ ಬಿಡುಗಡೆ ಮಾಡುತ್ತಿದ್ದಾರೆ.

'ಸಲಗ' ಚಿತ್ರದಲ್ಲಿ 'ಸೂರಿಯಣ್ಣ' ಸಾಂಗ್‌ಗೆ ಧ್ವನಿಯಾದ ಆಂಟೋನಿ ದಾಸನ್!

ಜ.19ರಂದು ರಾತ್ರಿ ವಿಜಯ್‌ ಅವರು ತಮ್ಮ ಅಭಿಮಾನಿಗಳ ಜತೆಗೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಹೀಗಾಗಿ ಅದೇ ದಿನ ಚಿತ್ರದ ಟೀಸರ್‌ ಬಿಡುಗಡೆ ನಡೆಯುತ್ತಿದೆ. ಹೊಸಕೆರೆಹಳ್ಳಿಯಲ್ಲಿರುವ ವಿಜಯ್‌ ನಿವಾಸದ ಮುಂದೆಯೇ ಅಭಿಮಾನಿಗಳ ಜತೆಗೆ ಹುಟ್ಟುಹಬ್ಬ ಸಂಭ್ರಮ ಹಾಗೂ ಟೀಸರ್‌ ಬಿಡುಗಡೆ ನಡೆಯಲಿದೆ.

ಸಲಗ ಆಡಿಯೋ ಚಾತ್ರೆ; ಕ್ವಾರ್ಟರ್‌ ಸೂರಿ ಅಣ್ಣ ಬಲು ಫೇಮಸ್‌ ಅಣ್ಣ!

"