ನಾಗಭೂಷಣ್ ಮತ್ತು ಮಲೈಕಾ ಅಭಿನಯದ 'ವಿದ್ಯಾಪತಿ' ಸಿನಿಮಾ ಏಪ್ರಿಲ್ 10ಕ್ಕೆ ಬಿಡುಗಡೆಯಾಗಲಿದೆ. ಚಿತ್ರದ ಕಾರ್ಯಕ್ರಮಕ್ಕೆ ಧ್ರುವ ಸರ್ಜಾ ಆಗಮಿಸಿ, ನಾಗಭೂಷಣ್ ಅಭಿನಯವನ್ನು ಹೊಗಳಿದರು. ಧನಂಜಯ್ ಅವರ ಒಳ್ಳೆಯ ಗುಣಗಳನ್ನು ಶ್ಲಾಘಿಸಿದರು. 'ವಿದ್ಯಾಪತಿ' ಟ್ರೈಲರ್ ಚೆನ್ನಾಗಿದೆ ಎಂದು ಹೇಳಿ, ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡುವಂತೆ ಪ್ರೇಕ್ಷಕರಲ್ಲಿ ವಿನಂತಿಸಿದರು. ಧ್ರುವ, ಪತ್ನಿ ಪ್ರೇರಣಾ ಜೊತೆ ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ.

ನಟ ನಾಗಭೂಷಣ್ ಮತ್ತು ಮಲೈಕಾ ಜೋಡಿಯಾಗಿ ನಟಿಸಿರುವ ವಿದ್ಯಾಪತಿ ಸಿನಿಮಾ ಇದೇ ಏಪ್ರಿಲ್ 10ರಂದು ಬಿಡುಗಡೆಯಾಗುತ್ತಿದೆ. ಚಿತ್ರದ ವಿಶೇಷ ಕಾರ್ಯಕ್ರಮಕ್ಕೆ ನಟ ಧ್ರುವ ಸರ್ಜಾ ಆಗಮಿಸಿದ್ದರು. ಈ ವೇಳೆ ದೋಸ್ತನ ಕಾಲೆಳೆದಿರುವುದು ಎಲ್ಲೆಡೆ ವೈರಲ್ ಆಗುತ್ತಿದೆ.

'ನಾಗಭೂಷಣ್ ನಟನೆಯ ಎಲ್ಲಾ ಸಿನಿಮಾಗಳನ್ನು ನೋಡಿದ್ದೀನಿ. ವಿಶೇಷವಾಗಿ ಹನಿಮೂನ್ ಸಿನಿಮಾ ಇಷ್ಟವಾಗುತ್ತದೆ...ಅದನ್ನು ನೋಡಿದಾಗೆಲ್ಲಾ ಯಾವಾಗ ಹನಿಮೂನ್ 2 ಮಾಡುತ್ತಾರೆ ಅನಿಸುತ್ತದೆ. ನಾನು ಕೇಳುತ್ತಿದ್ದೀನಿ ಆದರೆ ಏನೂ ಹೇಳುತ್ತಿಲ್ಲ. ಇಕ್ಕಟ್ ಹಾಗೂ ಟಗರು ಪಲ್ಯಾ ಸಿನಿಮಾ ನೋಡಿದ್ದೀನಿ ತುಂಬಾ ಚೆನ್ನಾಗಿ ನಟಿಸಿದ್ದಾರೆ. ವಿದ್ಯಾಪತಿ ಟ್ರೈಲರ್ ನೋಡಿದ್ದೀನಿ ತುಂಬಾ ಚೆನ್ನಾಗಿ ಬಂದಿದೆ. ಕೆಆರ್‌ಜಿ ಸಂಸ್ಥೆ ಕೈಯಲ್ಲಿ ಇರುವುದರಿಂದ ಥಿಯೇಟರ್‌ಗಳು ತುಂಬಾನೇ ಪ್ರಾಮಿಸಿಂಗ್ ಆಗಿದೆ' ಎಂದು ವೇದಿಕೆ ಮೇಲೆ ಧ್ರುವ ಸರ್ಜಾ ಮಾತನಾಡಿದರು. 

ಪುನೀತ್ ರಾಜ್‌ಕುಮಾರ್ ಬಳಸುತ್ತಿದ್ದ ದುಬಾರಿ ಸೈಕಲ್‌ನ ಆಂಕರ್ ಅನುಶ್ರೀಗೆ ಗಿಫ್ಟ್‌ ಕೊಟ್ಟ ಅಶ್ವಿನಿ!

'ಖುಷಿ ವಿಚಾರ ಏನೆಂದರೆ ನನಗೆ ನಮ್ಮ ಅಂಕಲ್ ಮತ್ತು ರವಿಚಂದ್ರನ್ ಸರ್‌ ಅವರ ವ್ಯಕ್ತಿತ್ವದ ವಿಚಾರದಲ್ಲಿ ತುಂಬಾ ನೆನಪಾಗುತ್ತಾರೆ. ಸಿನಿಮಾದಲ್ಲಿ ದುಡಿದು ಸಿನಿಮಾಗೆ ಚಲ್ಲುತ್ತಿರುವುದು ಅವರು..ನಮ್ಮ ಪೀಳಿಗೆಯಲ್ಲಿ ಅವರಂತೆ ಇರುವುದು ಧನಂಜಯ್ ಅವರು. ಒಳ್ಳೆಯ ಮನಸ್ಸು ಇರುವ ಸ್ನೇಹಿತ ಅಂದ್ರೆ ಧನಂಜಯ್. ಕನ್ನಡ ದಯವಿಟ್ಟು ಸಿನಿಮಾವನ್ನು ಚಿತ್ರಮಂದಿರಲ್ಲಿ ನೋಡಿ. ಇಕ್ಕಟ್ ಸಿನಿಮಾ ನಾನು ನೋಡಿದ ಮೇಲೆ ನನ್ನ ಹೆಂಡತಿಗೆ ಒತ್ತಾಯ ಮಾಡಿ ತೋರಿಸಿದೆ. ಬಿಡುಗಡೆ ದಿನವಾಗದಿದ್ದರೂ 13ರಂದು ಪತ್ನಿ ಪ್ರೇರಣಾ ಜೊತೆ ಪ್ರೇರಣಾ ಪತಿಯಾಗಿ ಸಿನಿಮಾ ನೋಡುತ್ತೀನಿ' ಎಂದು ಧ್ರುವ ಸರ್ಜಾ ಹೇಳಿದ್ದಾರೆ. ಎಲ್ಲರೊಟ್ಟಿಗೆ ಮಾತನಾಡಿದ ಮೇಲೆ 'ಆಮೇಲೆ ಎಲ್ಲಾ ಆಯ್ತಾ?' ಎಂದು ಧನಂಜಯ್ ಕಡೆ ಮುಖ ಮಾಡುತ್ತಾರೆ. ಅವರಿಬ್ಬರಿಗೂ ಈ ಮಾತಿನಲ್ಲಿ ಏನೋ ಆರ್ಥವಾಗಿದೆ ಹೀಗಾಗಿ ತಬ್ಬಿಕೊಂಡು ನಕ್ಕಿ ಸುಮ್ಮನಾಗಿದ್ದಾರೆ. 

ನಟಿ ಶರಣ್ಯ ಶೆಟ್ಟಿ ಹೆಸರು ಬಳಸಿ ವಾಟ್ಸಪ್‌ನಲ್ಲಿ ಹಣ ಪೀಕುತ್ತಿದ್ದ ಖದೀಮರು!