35 ಕೋಟಿ ದಾಟಲಿದೆ

ಆಂಧ್ರ ಹಾಗೂ ತೆಲಂಗಾಣದಲ್ಲಿ 300 ಚಿತ್ರಮಂದಿರಗಳಲ್ಲಿ ಪೊಗರು ಬಿಡುಗಡೆಯಾಗಿದ್ದು, ಎರಡು ದಿನಕ್ಕೆ 3 ಕೋಟಿ ರು. ಗಳಿಕೆ ಮಾಡಿದೆ. ತಮಿಳುನಾಡಿನಲ್ಲಿ 250 ಚಿತ್ರಮಂದಿರಗಳಲ್ಲಿ ತೆರೆಕಂಡು, ಎರಡು ದಿನದಲ್ಲಿ 1.5 ಕೋಟಿ ರು. ಗಳಿಕೆ ದಾಖಲಿಸಿದೆ. ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರ- ತೆಲಂಗಾಣದಲ್ಲಿ ಮೂರು ದಿನದ ಗಳಿಕೆ 35 ಕೋಟಿ ರು. ದಾಟುವ ನಿರೀಕ್ಷೆ ಇದೆ ಎನ್ನುತ್ತಾರೆ ನಿರ್ಮಾಪಕರು. ‘ನಮ್ಮ ಸಿನಿಮಾ ಈ ಮಟ್ಟಕ್ಕೆ ಗಳಿಕೆ ಮಾಡುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಮೊದಲ ದಿನವೇ ಕನ್ನಡದಲ್ಲಿ 10 ಕೋಟಿ ದಾಟಿದೆ. ಇದೇ ಮೊದಲ ಬಾರಿಗೆ ಹುಬ್ಬಳ್ಳಿಯ ಅಪ್ಸರಾ ಚಿತ್ರಮಂದಿರದಲ್ಲಿ ಮೊದಲ ದಿನವೇ 10 ಲಕ್ಷ ಕಲೆಕ್ಷನ್‌ ಆಗಿದೆ. ಮಹಾರಾಷ್ಟ್ರ ಭಾಗದಲ್ಲಿ ಪ್ರತಿ ದಿನ 40 ಪ್ರದರ್ಶನ ಕಾಣುತ್ತಿದೆ. ಕನ್ನಡ, ತೆಲುಗು, ತಮಿಳಿನಲ್ಲಿ ಸೋಮವಾರದವರೆಗೂ ಹೀಗೆ ಕಲೆಕ್ಷನ್‌ ಮುಂದುವರಿದರೆ 35 ಕೋಟಿ ರು. ದಾಟಲಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ದೊಡ್ಡ ಮೊತ್ತದ ಗಳಿಕೆಯೇ’ ಎನ್ನುತ್ತಾರೆ ನಿರ್ಮಾಪಕ ಬಿ ಕೆ ಗಂಗಾಧರ್‌.

ಪೊಗರು ನೋಡಲು ನಿರ್ದೇಶಕ ಕೊಟ್ಟ 10 ಕಾರಣಗಳು! 

"

ಡಬ್ಬಿಂಗ್‌ ಹಾಗೂ ಟೀವಿ ರೈಟ್ಸ್‌

ಸಿನಿಮಾ ಒಳ್ಳೆಯ ಕಲೆಕ್ಷನ್‌ ಮಾಡುತ್ತಿರುವಾಗಲೇ ಇತ್ತ ‘ಪೊಗರು’ ಚಿತ್ರದ ಡಿಜಿಟಲ್‌ ಮಾರುಕಟ್ಟೆಯ ವ್ಯಾಪಾರವೂ ಜೋರಾಗಿ ನಡೆಯುತ್ತಿದೆ. ಈಗಾಗಲೇ ಹಿಂದಿ ಡಬ್ಬಿಂಗ್‌ ರೈಟ್ಸ್‌ ಅನ್ನು 7.20 ಕೋಟಿ ರು. ಗೆ ಮಾರಾಟ ಮಾಡಲಾಗಿದೆ. ತೆಲುಗು ಹಾಗೂ ತಮಿಳಿನಲ್ಲಿ ಟೀವಿ ಪ್ರಸಾರ ಹಕ್ಕುಗಳಿಗೆ ಭಾರೀ ಬೇಡಿಕೆ ಬರುತ್ತಿದೆ. ಕನ್ನಡದಲ್ಲಿ ಸ್ಯಾಟಲೈಟ್‌ ಹಕ್ಕುಗಳನ್ನು 6.30 ಕೋಟಿ ರು.ಗೆ ಮಾರಾಟ ಮಾಡಲಾಗಿದೆ. ಥಿಯೇಟರ್‌ ಹಾಗೂ ಡಿಜಿಟಲ್‌ ಮಾರಾಟದಿಂದ ‘ಪೊಗರು’ ಬ್ಯುಸಿನೆಸ್‌ ಸುಮಾರು 50 ಕೋಟಿ ರು. ಆಗಲಿದೆ ಎನ್ನುವ ಲೆಕ್ಕಾಚಾರ ಚಿತ್ರತಂಡದ್ದು.

ಕೆಜಿಎಫ್‌ ನಂತರ ತೆಲುಗು, ತಮಿಳಿನಲ್ಲಿ ಹಿಟ್ ಆಗಿದ್ದು ಪೊಗರು ಚಿತ್ರನೇ!