ದಾವಣಗೆರೆ, (ಫೆ.14): ನಟ ಧ್ರುವ ಸರ್ಜಾ ಹಾಗೂ ನಿರ್ದೇಶಕ ನಂದ ಕಿಶೋರ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರೋ ಬಹು ನಿರೀಕ್ಷಿತ ಪೊಗರು ಸಿನಿಮಾದ ಟೈಟಲ್ ಸಾಂಗ್ ರಿಲೀಸ್ ಆಗಿದೆ.

ಇಂದು (ಭಾನುವಾರ) ದಾವಣಗೆರೆಯ ಸರ್ಜಾರಿ ಹೈಸ್ಕೂಲ್ ಗ್ರೌಂಡ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಗರು ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದ್ದು, ಈ ಹಾಡಿನಲ್ಲಿ ಧ್ರುವ ಸರ್ಜಾ ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ.ಅಲ್ಲದೇ ಸ್ಟೆಪ್ ಕೂಡ ಎಲ್ಲರ ಗಮನಸೆಳೆದಿವೆ.  ಕರಾಬು ಹಾಡಿನ ಮಾದರಿಯಲ್ಲೇ ಈ ಹಾಡು ಕೂಡ ಹಿಟ್ ಆಗುವ ಲಕ್ಷಣ ಕಾಣುತ್ತಿವೆ.

ಪೊಗರು ಶಿವನ ಅಗಮನಕ್ಕೆ ವೇದಿಕೆ ರೆಡಿ; 19ಕ್ಕೆ ರಿಲೀಸ್‌, ಈಗಲೇ ಬುಕ್ಕಿಂಗ್ ಶುರು!

ಪೊಗರು ಸಿನಿಮಾದ ಟೈಟಲ್ ಸಾಂಗ್, ತಾಯಿ ಸೆಂಟಿಮೆಂಟ್ ಸಾಂಗ್ ಬಿಟ್ ಹಾಗು ಪೊಗರು ಟ್ರೈಲರ್ ನಲ್ಲಿ ಯಾವ ಸಾಂಗ್ ಬೇಕೆಂದು ಧ್ರುವ ಸರ್ಜಾ, ಅಭಿಮಾನಿಗಳಲ್ಲಿ ಕೇಳಿದ್ದಾರೆ.  ಟೈಟಲ್ ಸಾಂಗ್ ರಿಲೀಸ್ ಮಾಡಿ ಎಂದು 80ರಷ್ಟು ಪ್ರೇಕ್ಷಕರು ಕೇಳಿದ್ರು. ಅಭಿಮಾನಿಗಳ ಬೇಡಿಕೆಯಂತೆ ಸಿನಿಮಾ ತಂಡ ಪೊಗರು ಟೈಟಲ್ ಸಾಂಗ್ ಬಿಡುಗಡೆ ಮಾಡಿತು.

ಈಗಾಗಲೇ 'ಕರಾಬು ಬಾಸು ಕರಾಬು' ಹಾಡಿನ ವಿಡಿಯೋ ಬಿಡುಗಡೆ ಮಾಡಿದ್ದು, ಸಿಕ್ಕಾಪಟೆ ಫೇಮಸ್ ಆಗ್ಬಿಟ್ಟಿದೆ.  ಹಾಡಿನಲ್ಲಿ ಧ್ರುವ ಸರ್ಜಾ ರಾಕ್ಷಸಾವತಾರದಲ್ಲಿ ಕಾಣಿಸಿಕೊಂಡಿದ್ದು, ಉದ್ದನೆಯ ಕೂದಲು ಹಾರಿಸುತ್ತಾ, ಕೆದರಿದ ಗಡ್ಡ ನೇವರಿಸುತ್ತಾ, ಕಂಬದಂತಹಾ ತೋಳು ಪ್ರದರ್ಶಿಸಿ ಅದ್ಭುತವಾಗಿ ಕುಣಿದಿದ್ದಾರೆ

ಇದೀಗ ಟೈಟಲ್ ಸಾಂಗ್ ಸಹ ಲಾಂಚ ಮಾಡಿದ್ದು, ಇದು ಅಭಿಮಾನಿಗಳಿಗೆ ಯಾವ ರೀತಿಯಲ್ಲಿ ಇಷ್ಟ ಆಗುತ್ತೆ ಎನ್ನುವುದನ್ನ ಕಾದು ನೋಡಬೇಕಿದೆ. ಇನ್ನು ತೀವ್ರ ಕುತೂಹಲದಿಂದ ಕಾಯುತ್ತಿರುವ ಪೊಗರು ಚಿತ್ರ ಇದೇ ಫೆ.19ಕ್ಕೆ ತೆರೆ ಅಪ್ಪಳಿಸಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.