Asianet Suvarna News Asianet Suvarna News

ಚಿರು ಹುಟ್ಟುಹಬ್ಬವನ್ನು ವೃದ್ಧಾಶ್ರಮ, ಅನಾಥಾಶ್ರಮದಲ್ಲಿ ಆಚರಿಸಿದ ಧ್ರುವ ಸರ್ಜಾ ಕುಟುಂಬ

ಈ ಹುಟ್ಟುಹಬ್ಬವು ನಿನಗೆ ತುಂಬಾ ಸಂತೋಷವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ ಚಿರು. lots of love ಜೈ ಹನುಮಾನ್ ಎಂದು ಧ್ರುವ ಸರ್ಜಾ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.

Dhruva Sarja Emotional Post in Chiranjeevi Sarja Birthday
Author
Bangalore, First Published Oct 20, 2021, 5:59 PM IST
  • Facebook
  • Twitter
  • Whatsapp

ಸ್ಯಾಂಡಲ್‌ವುಡ್‌ನ(Sandalwood) ಯುವ ಸಾಮ್ರಾಟ್  ಚಿರಂಜೀವಿ ಸರ್ಜಾ (Chiranjeevi Sarja) ಹುಟ್ಟುಹಬ್ಬದ (Birthday) ಪ್ರಯುಕ್ತ ಅವರನ್ನು ನೆನೆದು ಸಹೋದರ ಧ್ರುವ ಸರ್ಜಾ (Dhruva Sarja) ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಹೌದು! ಚಿರಂಜೀವಿ ಸರ್ಜಾ ಹುಟ್ಟುಹಬ್ಬ ಕಳೆದ ಭಾನುವಾರವಷ್ಟೇ ನಡೆದಿತ್ತು. ಈ ಬಗ್ಗೆ ಧ್ರುವ ಸರ್ಜಾ ಅಣ್ಣನ ನೆನೆದು 'ಈ ಜನ್ಮದಿನವು ನಿನಗೆ ತುಂಬಾ ಸಂತೋಷವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ ಚಿರು. ನನ್ನ ಪ್ರಪಂಚವನ್ನು ನಾನು ಯಾವಾಗಲೂ ಪ್ರೀತಿಸುತ್ತೇನೆ. ಈ ಹುಟ್ಟುಹಬ್ಬವು ನಿನಗೆ ತುಂಬಾ ಸಂತೋಷವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ ಚಿರು. lots of love ಜೈ ಹನುಮಾನ್' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್‌ ಮಾಡಿ ವಿಡಿಯೋವೊಂದನ್ನು ಶೇರ್ (Share) ಮಾಡಿಕೊಂಡಿದ್ದಾರೆ.

ಚಿರು ಹುಟ್ಟುಹಬ್ಬಕ್ಕೆ 'ರಾಜಮಾರ್ತಾಂಡ' ಟೀಸರ್ ರಿಲೀಸ್

ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಚಿರಂಜೀವಿ ಸರ್ಜಾ ಬದುಕಿ ಬಾಳಿದ ಮನೆ ಹಾಗೂ ಅಲ್ಲಿ ಇರುವ ಹನುಮಂತನ ಮೂರ್ತಿ, ಗೋಡೆಯ ವಾಲ್‌ನಲ್ಲಿರುವ ಶಕ್ತಿಪ್ರಸಾದ್ ಮತ್ತು  ಚಿರಂಜೀವಿ ಸರ್ಜಾ-ಧ್ರುವ ಸರ್ಜಾ ಭಾವಚಿತ್ರದಿಂದ ಹಿಡಿದು ಚಿರು ತನ್ನ ಮಾವ ಅರ್ಜುನ್ ಸರ್ಜಾ (Arjun Sarja) ಜೊತೆ ಇರುವಂತಹ ಫೋಟೋಗಳನ್ನು ಕಾಣಬಹುದಾಗಿದೆ. ಜೊತೆಗೆ ಚಿರು ತಾಯಿ ತನ್ನ ಮನೆಯಿಂದ ಮಗನ ಸಮಾಧಿಗೆ ಭೇಟಿ ನೀಡಿರುವುದನ್ನು ನೋಡಬಹುದಾಗಿದೆ. ಇನ್ನು ಮಗನ ಹುಟ್ಟುಹಬ್ಬದ ಪ್ರಯುಕ್ತ ಚಿರು ತಾಯಿ ಸಮಾಧಿಗೆ ಭೇಟಿ ನೀಡಿ ವಿಶೇಷವಾದ ಪೂಜೆಯನ್ನು ಸಲ್ಲಿಸಿ, 'ಚಿನ್ನ ಚಿನ್ನಮ್ಮಾ ಎಂದು ದುಃಖದಿಂದ ಚಿರು ನೆನೆಸಿಕೊಂಡು, ಸಮಾಧಿ ಬಳಿ ಇರುವಂತಹ ಚಿರು ಭಾವಚಿತ್ರವನ್ನು ಸ್ಪರ್ಶಿಸುತ್ತಾರೆ. ನಂತರ ಚಿರು ತಾಯಿ ಅನಾಥಾಶ್ರಮವೊಂದಕ್ಕೆ ಭೇಟಿ ನೀಡಿ, ಅಲ್ಲಿನ ಮಕ್ಕಳಿಂದ ಚಿರು ಬರ್ತಡೇ ಕೇಕ್ ಕಟ್ಟಿಂಗ್ ಮಾಡಿಸುತ್ತಾರೆ. ಹಾಗೂ  ಎಲ್ಲ ಮಕ್ಕಳಿಗೂ ಸಿಹಿ ತಿನ್ನಿಸಿ, ಹೊಸ ಬಟ್ಟೆಯನ್ನು ಹಂಚುತ್ತಾರೆ. ಈ ವೇಳೆ ಧ್ರುವ ಸರ್ಜಾ ವಿಡಿಯೋ ಕರೆ ಮಾಡಿ ಅಲ್ಲಿ ನಡೆದ ಎಲ್ಲ ಕಾರ್ಯಕ್ರಮಗಳನ್ನು ಭಾವುಕರಾಗಿ ವೀಕ್ಷಿಸುತ್ತಾರೆ. ನಂತರ ಚಿರು ತಾಯಿ ವೃದ್ಧಾಶ್ರಮಕ್ಕೆ ತೆರಳಿ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಿಸಿ, ತನ್ನ ಕೈಯಾರೆ ಊಟವನ್ನು ಬಡಿಸುವುದನ್ನು ಧ್ರುವ ಸರ್ಜಾ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ.

 


ಚಿರು  ಅಭಿನಯದ ಕೊನೆಯ ಚಿತ್ರ 'ರಾಜಮಾರ್ತಾಂಡ' (RajaMarthanda) ಚಿತ್ರದ ಬರ್ತ್‌ಡೇ ಟೀಸರ್‌ನ್ನು  (HBD Teaser) ಚಿತ್ರತಂಡ ಅವರ ಮಗ ರಾಯನ್ ರಾಜ್ ಸರ್ಜಾರಿಂದ (Raayan Raj Sarja) ಬಿಡುಗಡೆಗೊಳಿಸಿದೆ. ರಾಯನ್ ಸರ್ಜಾ ಮೊಬೈಲ್‌ನಲ್ಲಿ ತಮ್ಮ ತಂದೆಯ ಚಿತ್ರವನ್ನು ನೋಡಿ ತೊದಲು ನುಡಿ ಮಾತಾನಾಡಿ, ಮುಗುಳ್ನಗುವುದರಿಂದ ಚಿತ್ರದ ಟೀಸರ್ ಪ್ರಾರಂಭವಾಗುತ್ತದೆ. ಚಿರು ಅಕಾಲಿಕ  ನಿಧನದಿಂದ ಈ ಚಿತ್ರಕ್ಕೆ ಅವರ ಸಹೋದರ ಧ್ರುವ ಸರ್ಜಾ (Dhruva Sarja) ಡಬ್ ಮಾಡಿದ್ದಾರೆ. ಇನ್ನು ಚಿರು ಹುಟ್ಟುಹಬ್ಬದ ಪ್ರಯುಕ್ತ ಅವರ ಪತ್ನಿ ಮೇಘನಾ ರಾಜ್ ವಿಶೇಷ ಫೋಟೋಶೂಟ್ (Photo Shoot) ಮಾಡಿಸಿದ್ದಾರೆ. ಹಾಗೂ ಚಿರು ಸ್ನೇಹಿತ ಪನ್ನಗಭರಣ (Pannagabharana) ನಿರ್ಮಾಣದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷ ಜೂನ್ 7ರಂದು ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿದರು. ಇದರಿಂದ ಕನ್ನಡ ಚಿತ್ರರಂಗ ಊಹಿಸಿಕೊಳ್ಳಲಾಗದ ದೊಡ್ಡ ಆಘಾತದಲ್ಲಿತ್ತು. 

"

Follow Us:
Download App:
  • android
  • ios