ಬಹುಭಾಷೆಯಲ್ಲಿ ಮೂಡಿ ಬರುತ್ತಿರುವ ಧ್ರುವ ಸರ್ಜಾ ನಟನೆಯ, ಜೋಗಿ ಪ್ರೇಮ್‌ ನಿರ್ದೇಶನದ, ಕೆವಿಎನ್‌ ಪ್ರೊಡಕ್ಷನ್‌ ನಿರ್ಮಾಣದ ‘ಕೆಡಿ’ ಚಿತ್ರದ ಟೈಟಲ್‌ ಟೀಸರ್‌ ಬಿಡುಗಡೆ ಆಗಿದೆ. ಹೆಸರು ಹಾಗೂ ಟೀಸರ್‌ ಅನ್ನು ಒಟ್ಟಿಗೆ ಬಿಡುಗಡೆ ಮಾಡುವ ಮೂಲಕ ಪ್ರೇಮ್‌ ಸಂಚಲನ ಮೂಡಿಸಿದ್ದಾರೆ.

ಬಹುಭಾಷೆಯಲ್ಲಿ ಮೂಡಿ ಬರುತ್ತಿರುವ ಧ್ರುವ ಸರ್ಜಾ ನಟನೆಯ, ಜೋಗಿ ಪ್ರೇಮ್‌ ನಿರ್ದೇಶನದ, ಕೆವಿಎನ್‌ ಪ್ರೊಡಕ್ಷನ್‌ ನಿರ್ಮಾಣದ ‘ಕೆಡಿ’ ಚಿತ್ರದ ಟೈಟಲ್‌ ಟೀಸರ್‌ ಬಿಡುಗಡೆ ಆಗಿದೆ. ಹೆಸರು ಹಾಗೂ ಟೀಸರ್‌ ಅನ್ನು ಒಟ್ಟಿಗೆ ಬಿಡುಗಡೆ ಮಾಡುವ ಮೂಲಕ ಪ್ರೇಮ್‌ ಸಂಚಲನ ಮೂಡಿಸಿದ್ದಾರೆ. ಮಲಯಾಳಂನಲ್ಲಿ ಮೋಹನ್‌ ಲಾಲ್‌, ತಮಿಳಿನಲ್ಲಿ ವಿಜಯ್‌ ಸೇತುಪತಿ, ಹಿಂದಿಯಲ್ಲಿ ಸಂಜಯ್‌ ದತ್‌ ಟೀಸರ್‌ಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. 

ಬಹುಭಾಷೆಯ ನಟರ ಖಡಕ್‌ ವಾಯ್ಸ್‌ನಲ್ಲಿ ‘ರಾಮಾಯಣದ ಯುದ್ಧ ನಡೆದಿದ್ದು ಹೆಣ್ಣಿಗಾಗಿ, ಕುರುಕ್ಷೇತ್ರ ಯುದ್ಧ ನಡೆದಿದ್ದು ಮಣ್ಣಿಗಾಗಿ. ಈ ಕಲಿಯುಗದ ಈ ಯುದ್ಧ ಬಿಸಿ ರಕ್ತಕ್ಕಾಗಿ’ ಎನ್ನುವ ಡೈಲಾಗ್‌ಗಳನ್ನು ಒಳಗೊಂಡ ಟೀಸರ್‌ ಬಿಡುಗಡೆ ಆಗಿ ಒಂದು ದಿನ ಮುಗಿಯುವ ಮುನ್ನವೇ 2 ಕೋಟಿ ಜನ ನೋಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಟೀಸರ್‌ಗೆ 15 ಮಿಲಿಯನ್‌ ವೀಕ್ಷಣೆ ಆಗಿದೆ. ಆ ಮೂಲಕ ಧ್ರುವ ಸರ್ಜಾ ಹಾಗೂ ಪ್ರೇಮ್‌ ಅವರ ಕಾಂಬಿನೇಶನ್‌ ಸಿನಿಮಾ ಹೊಸ ದಾಖಲೆ ಮಾಡಿದೆ.

KGF ಬಳಿಕ ಮತ್ತೆ ಕನ್ನಡಕ್ಕೆ ಬಂದ ಸಂಜಯ್ ದತ್; ಪ್ರೇಮ್ ಸಿನಿಮಾದಲ್ಲಿ 'ಅಧೀರ'

ಸಂಜಯ್‌ ದತ್‌, ತರಣ್‌ ಆದರ್ಶ್‌, ರಕ್ಷಿತಾ ಪ್ರೇಮ್‌ ಅವರು ಆಗಮಿಸಿ ಟೈಟಲ್‌ ಟೀಸರ್‌ ಬಿಡುಗಡೆ ಮಾಡಿದರು. ನಿರ್ದೇಶಕ ಪ್ರೇಮ್‌ ಮಾತನಾಡಿ, ‘ಇದು ಪ್ಯಾನ್‌ ಇಂಡಿಯಾ ಸಿನಿಮಾ. 1970ರಲ್ಲಿ ನಡೆದ ನೈಜ ಘಟನೆಗಳಿಂದ ಸ್ಫೂರ್ತಿಗೊಂಡಿದೆ. ಬೇರೆ ಬೇರೆ ಭಾಷೆಯ ಕಲಾವಿದರೂ ಚಿತ್ರದಲ್ಲಿ ನಟಿಸಲಿದ್ದಾರೆ. ಮುಂದೆ ಅವರ ಪಾತ್ರದ ಲುಕ್ಕಿನ ಜತೆಗೆ ಮಾತನಾಡುತ್ತೇನೆ’ ಎಂದರು. ‘ನಾನು ಈ ಚಿತ್ರದ ಪಾತ್ರಕ್ಕಾಗಿ ತುಂಬಾ ತಯಾರಿ ಮಾಡಿಕೊಂಡಿದ್ದೇನೆ. 

ಈಗಾಗಲೇ 7 ಕೆಜಿ ತೂಕ ಇಳಿಸಿಕೊಂಡಿದ್ದೇನೆ. ರೆಟ್ರೋ ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಮಾಸ್‌ ಹಾಗೂ ಆ್ಯಕ್ಷನ್‌ ಥ್ರಿಲ್ಲರ್‌ ಕತೆ. ನನ್ನ ಪಾತ್ರದ ಹೆಸರು ಕಾಳಿದಾಸ. ಅದರ ಸಂಕ್ಷಿಪ್ತ ರೂಪವೇ ಕೆಡಿ ಅಂದುಕೊಳ್ಳಿ. ನಾನು ಹುಟ್ಟಿದ್ದು 6ನೇ ತಾರಿಖು. ನನ್ನ ಲಕ್ಕಿ ನಂಬರ್‌ 6. ಕೆಡಿ ನನ್ನ ನಟನೆಯ 6ನೇ ಸಿನಿಮಾ. ಈ ವಿಚಾರದಲ್ಲಿ ನಾನು ಲಕ್ಕಿ’ ಎಂದರು ಧ್ರುವ ಸರ್ಜಾ. ಕೆವಿಎನ್‌ ಪ್ರೊಡಕ್ಷನ್‌ ನಿಶಾ ಕೋನಾವೆಂಕಟ್‌, ಸುಪ್ರಿತ್‌ ಅವರು ಟೈಟಲ್‌ ಬಗ್ಗೆ ಮಾತನಾಡಿದರು. ಅರ್ಜುನ್‌ ಜನ್ಯ ಸಂಗೀತ, ವಿಲಿಯಂ ಡೇವಿಡ್‌ ಸಿನಿಮಾಟೋಗ್ರಾಫಿ ಚಿತ್ರಕ್ಕಿದೆ. ಶೀಘ್ರದಲ್ಲಿಯೇ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನುತ್ತಿದೆ ಚಿತ್ರತಂಡ.

ತಾತಾ ಅಂತ ಕರೆಯಲು 2ನೇ ಮಗು ಬಂದಿದೆ, ನನ್ನ ತಾಯಿ ಮತ್ತೆ ಬಂದಿದ್ದಾರೆ: ಅರ್ಜುನ್ ಸರ್ಜಾ

ಇನ್ನು ಧ್ರುವ ಸರ್ಜಾ ‘ಮಾರ್ಟಿನ್​’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಮಾರ್ಟಿನ್’ ಚಿತ್ರಕ್ಕೆ ಎ.ಪಿ. ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. ಧ್ರುವ ನಟನೆಯ ಮೊದಲ ಸಿನಿಮಾ ‘ಅದ್ದೂರಿ’ಗೆ ಆ್ಯಕ್ಷನ್​-ಕಟ್​ ಹೇಳಿದ್ದ ಅವರು ಈಗ ಮತ್ತೊಮ್ಮೆ ಧ್ರುವ ಜತೆ ಕೈ ಜೋಡಿಸಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 30ರಂದು ಬಿಡುಗಡೆ ಆಗಬೇಕಿತ್ತು. ಆದರೆ, ರಿಲೀಸ್ ದಿನಾಂಕ ವಿಳಂಬ ಆಗಿದೆ.

YouTube video player