Asianet Suvarna News Asianet Suvarna News

Dhruva Sarja ತಾತಾ ಅಂತ ಕರೆಯಲು 2ನೇ ಮಗು ಬಂದಿದೆ, ನನ್ನ ತಾಯಿ ಮತ್ತೆ ಬಂದಿದ್ದಾರೆ: ಅರ್ಜುನ್ ಸರ್ಜಾ

ಎರಡನೇ ಸಲ ತಾತ ಆಗಿರುವ ಸಂತಸದಲ್ಲಿ ಅಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮಾತುಗಳಿದು...

Arjun Sarja talks about Dhruva Sarja daughter and family vcs
Author
First Published Oct 8, 2022, 4:01 PM IST

ಕನ್ನಡ ಚಿತ್ರರಂಗದ ಓನ್ ಆಂಡ್ ಓನ್ಲಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಎರಡನೇ ಸಲ ತಾತನಾಗಿರುವ ಸಂತಸದಲ್ಲಿದ್ದಾರೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಎಪಿ ಅರ್ಜುನ್ ಕಾಂಬಿಷೇನ್‌ನಲ್ಲಿ ಮೂಡಿ ಬರುತ್ತಿರುವ ಮಾರ್ಟಿನ್ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ, ಇದೇ ಸಂಭ್ರಮದಲ್ಲಿ ಸೆಟ್‌ಗೆ ಭೇಟಿ ಕೊಟ್ಟು ಇಡೀ ತಂಡಕ್ಕೆ ವಿಶ್ ಮಾಡಿದ್ದಾರೆ. ಹಾಗೇ ತಮ್ಮ ತಾಯಿ ಮತ್ತೆ ಹುಟ್ಟಿ ಬಂದಿರುವುದಕ್ಕೆ ಎಷ್ಟು ಖುಷಿಯಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಅರ್ಜುನ್ ಮಾತು:

'ಈ ವರ್ಷ ಧ್ರುವ ಸರ್ಜಾ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿಲ್ಲ ಆದರೆ ಮೊದಲ ಸಲ ತಂದೆಯಾಗಿ ಆಚರಿಸಿಕೊಳ್ಳುತ್ತಿದ್ದಾನೆ. ನನ್ನನ್ನು ಎರಡನೇ ಸತಿ ತಾತ ಅಂತ ಕರೆಯುವುದಕ್ಕೆ ಇನ್ನೊಬ್ಬ ಹೆಣ್ಣು ಮಗು ಹುಟ್ಟಿದೆ ಅದೇ ನನ್ನ ಜೀವನದ ವಿಶೇಷ' ಎಂದು ಅರ್ಜುನ್ ಸರ್ಜಾ ಬಲ್ಲಿ ಖಾಸಗಿ ವಾಹಿನಿಯೊಂದಕ್ಕ ನೀಡಿರುವ ಸಂದರ್ಶನ ಹೇಳಿದ್ದಾರೆ.

Arjun Sarja talks about Dhruva Sarja daughter and family vcs

'ನಮ್ಮ ಫ್ಯಾಮಿಲಿ ಅಂತಲ್ಲ ನಮ್ಮ ಇಂಡಿಯನ್ ಫ್ಯಾಮಿಲಿಯಲ್ಲಿ ದೊಡ್ಡವರು ನಮ್ಮನ್ನು ಬಿಟ್ಟು ಹೋದಾಗ ಒಂದು ಮಗು ಹುಟ್ಟಿದ ತಕ್ಷಣ ಆ ಮಗು ಅವರ ಪ್ರತಿ ರೂಪದಲ್ಲಿ ಬಂದಿದ್ದಾರೆ ಅಂತ ಹೇಳುತ್ತೀವಿ. ಹೆಣ್ಣು ಮಗು ಹುಟ್ಟಿರುವುದರಿಂದ ನಮ್ಮೆಲ್ಲರಿಗೂ ಅದೇ ಫೀಲಿಂಗ್ ತಾಯಿನೇ ಹುಟ್ಟು ಬಂದಿದ್ದಾರೆ ಅಂತ. ನಮ್ಮ ತಾಯಿ ಇದ್ದಿದ್ದರೆ ತುಂಬಾ ಖುಷಿ ಪಡುತ್ತಿದ್ದರು. ನನ್ನ ತಾಯಿ ಖುಷಿ ಪಟ್ಟಷ್ಟು ಧ್ರುವ ಕೂಡ ಖುಷಿ ಪಡುತ್ತಿರಲಿಲ್ಲ ಏಕೆಂದರೆ ಇದು ಅವರಿಗೆ ನಾಲ್ಕನೇ ತಲೆ ಮಾರು ಧ್ರುವ ಮಗಳು ಮು ಮ್ಮೊಗಳಾಗುತ್ತಿದ್ದಳು. ಅವರು ಎಲ್ಲಿದ್ದರೂ ನಮ್ಮ ಮೇಲೆ ಪ್ರೀತಿ ಮತ್ತು ಆಶೀರ್ವಾದ ಇರುತ್ತದೆ. ಒಂದೊಂದು ಸತಿ ತುಂಬಲಾಗದ ನಷ್ಟ.. ಆ ನಷ್ಟ ತುಂಬಲು ಆಗುವುದಿಲ್ಲ ಹಾಗೆ ಒಳ್ಳೆ ಒಳ್ಳೆ ವಿಷಯಗಳು ನಡೆದಾಗ ಎಲ್ಲೋ ಒಂದು ಸಮಾಧಾನ. ಹೆಣ್ಣು ಮಗು ಹುಟ್ಟಿರುವುದಕ್ಕೆ ನಮ್ಮ ತಾಯಿನೇ ಬಂದ್ರೂ ಅಂತ ಮನಸ್ಸಿಗೆ ಸಾಮಾಧಾನ ಸೈಕಲಾಜಿಕಲ್ ಥಿಕಿಂಗ್' ಎಂದಿದ್ದಾರೆ ಅರ್ಜುನ್.

Dhruva Sarja ಮುದ್ದಾದ ಹೆಣ್ಣು ಮಗು ಹುಟ್ಟಿದ್ದಾಳೆ; ಚಿರು ಅಣ್ಣ- ಅಜ್ಜಿನ ತುಂಬಾ ಮಿಸ್ ಮಾಡ್ತೀನಿ!

ಧ್ರುವ ಸರ್ಜಾ ಮಾತು:

'ನಿಮ್ಮಲ್ಲರ ಪ್ರೀತಿ ಮತ್ತು ಆಶೀರ್ವಾದದಿಂದ ನನಗೆ ಮುದ್ದಾ ಬ್ಯೂಟಿಫುಲ್ ಹೆಣ್ಣು ಮಗಳು ಹುಟ್ಟಿದ್ದಾಳೆ. ನನ್ನ ಮಗಳು ಬಂದ ಸಂದರ್ಭದಲ್ಲಿ ಅಣ್ಣನನ್ನು ಮಿಸ್ ಮಾಡಿಕೊಳ್ಳುವೆ. ಈ ಸಂದರ್ಭದಲ್ಲಿ ನಾನು ಒಂದು ವಿಚಾರವನ್ನು ಮಾತನಾಡುತ್ತೀನಿ ಹೆಣ್ಣು ಮಕ್ಕಳು ಅಂದ್ರೆ ಮೊದಲೇ ಹೆಚ್ಚಿಗೆ ಗೌರವ ಇತ್ತು ಆ ಮರ್ಯಾದೆ ಹೆಚ್ಚಾಗಿದೆ. ಎಲ್ಲರ ಜೀವನದಲ್ಲಿ ಎಪ್ಸ್‌ ಆಂಡ್ ಡೌನ್ಸ್‌ ಇರುತ್ತೆ ನಮ್ಮಲ್ಲೂ ಇತ್ತು ಸಾಕಷ್ಟು ಜನ ಕಪಲ್‌ಗಳಿಗೆ ಮಿಸ್‌ ಕ್ಯಾರೇಜ್ ಅಗಿರುತ್ತೆ ಕೆಲವರು ಹೇಳಿಕೊಳ್ಳುತ್ತಾರೆ ಕೆಲವರು ಹೇಳಿಕೊಳ್ಳುವುದಿಲ್ಲ ಹೆಣ್ಣು ಮಕ್ಕಳು ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ ಗಂಡು ಮಕ್ಕಳು ಕೂಡ. ಈಗ ನಾವೇ ಉದಾಹರಣೆ. ಈಗ ನಾವು ತುಂಬಾ ಖುಷಿಯಾಗಿದ್ದೀವಿ ಇದಕ್ಕೆ ಕಾರಣ ನಮ್ಮ ಡಾಕ್ಟರ್ ಮಾಧುರಿ ಅವರು. ನಾನು ಅಂದುಕೊಂಡಂತೆ ಹೆಣ್ಣು ಮಗು ಆಗಿದೆ.' ಎಂದು ಧ್ರುವ ಮಗಳನ್ನು ಬರ ಮಾಡಿಕೊಂಡ ದಿನ ಮಾತನಾಡಿದ್ದಾರೆ.

Follow Us:
Download App:
  • android
  • ios