ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದ ದರ್ಶನ್ ಚಿತ್ರೀಕರಣ ಆರಂಭಿಸಿದ್ದಾರೆ. ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್ ಹಾಗೂ ಗೆಳೆಯ ಧನ್ವೀರ್ ದರ್ಶನ್‌ಗೆ ಬೆಂಬಲವಾಗಿ ನಿಂತಿದ್ದರು. ಧನ್ವೀರ್ ನಟನೆಯ 'ವಾಮನ' ಚಿತ್ರದ ಟ್ರೈಲರ್ ಬಿಡುಗಡೆಗೆ ದರ್ಶನ್ ಆಗಮಿಸಿದ್ದರು. ದರ್ಶನ್ ಸಹಾಯವನ್ನು ಸ್ಮರಿಸಿದ ಧನ್ವೀರ್, ಕಷ್ಟದ ಸಮಯದಲ್ಲಿ ಬೆಂಬಲ ನೀಡದವರ ಬಗ್ಗೆ ಬೇಸರ ವ್ಯಕ್ತಪಡಿಸಿದರು. ದರ್ಶನ್ ಮೇಲಿನ ಅಭಿಮಾನವನ್ನು ಅವರು ವ್ಯಕ್ತಪಡಿಸಿದರು.
ರೇಣಾಕಸ್ವಾಮಿ ಕೊಲೆ ಪ್ರಕರಣದ ಮೇಲೆ ಬೇಲ್ ಪಡೆದು ಹೊರ ಬಂದಿರುವ ದರ್ಶನ್ ಕೆಲವು ತಿಂಗಳು ವಿಶ್ರಾಂತಿ ಪಡೆದುಕೊಂಡು ಚಿತ್ರೀಕರಣ ಶುರು ಮಾಡಿಕೊಂಡಿದ್ದಾರೆ. ದರ್ಶನ್ ಜೈಲಿಗೆ ಕಾಲಿಟ್ಟ ದಿನದಿಂದ ಹೊರ ಕರೆದುಕೊಂಡು ಬರುವ ದಿನದವರೆಗೂ ಬಿಗ್ ಸಪೋರ್ಟ್ ಆಗಿ ನಿಂತಿದ್ದ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್ ಹಾಗೂ ಗೆಳೆಯ ಧನ್ವೀರ್. ಈಗ ಧನ್ವೀರ್ ನಟನೆಯ ವಾಮನ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಟ್ರೈಲರ್ ರಿಲೀಸ್ ಕಾರ್ಯಕ್ರಮಕ್ಕೆ ನಟ ದರ್ಶನ್ ವಿಶೇಷ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ ಪ್ರಚಾರದಲ್ಲಿ ಇರುವ ಧನ್ವೀರ್ ದರ್ಶನ್ ಬಗ್ಗೆ ಹಾಡಿ ಹೊಗಳಿದ್ದಾರೆ.
'ಇವಾಗ ಯಾರೆಲ್ಲಾ ಮಾತನಾಡುತ್ತಾರೋ ಅವರೆಲ್ಲ ಮುಂದೆ ಬರಬೇಕಿತ್ತು. ದರ್ಶನ್ ಅವರು ಸುಮಾರು ಜನಕ್ಕೆ ಹಲವಾರು ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಏನೋ ಒಂದು ಕೆಟ್ಟ ಗಳಿಗೆ ಇವತ್ತಿಗೂ ನ್ಯಾಯಂಹದಲ್ಲಿದೆ ತೀರ್ಪು ಕೊಡುವುದಕ್ಕೆ ನ್ಯಾಯಾಲಯ ಇದೆ. ದರ್ಶನ್ ಅವರು ಅಪರಾಧೀ ಅಂತ ಎಲ್ಲಿಯೂ ಪ್ರೂವ್ ಆಗಿಲ್ಲ. ಅದು ಗೊತ್ತಿಲ್ಲದೆ ಯಾಕೆ ಎಲ್ಲರೂ ಹಿಂಜರಿಯುತ್ತಿದ್ದರು? ಯಾರು ಮುಂದೆ ಬರಲಿಲ್ಲ? ದರ್ಶನ್ ಅವರ ಋಣ ನನ್ನ ಮೇಲಿದೆ. ಇವತ್ತು ನಾಳೆ ಅಲ್ಲ ಸಾಯುವವರೆಗೂ ದರ್ಶನ್ ಅಣ್ಣನ ಕೈ ಬಿಡಲ್ಲ ಅವರ ಜೊತೆಗೆ ಇರುತ್ತೀನಿ' ಎಂದು ಧನ್ವೀರ್ ಮಾತನಾಡಿದ್ದರೆ ಎಂದು ಖಾಸಗಿ ವೆಬ್‌ಸೈಟ್ ಸುದ್ದಿ ಮಾಡಿದೆ.
ತಾಯಿಯಾಗುತ್ತಿರುವ ಖುಷಿಯಲ್ಲಿ 'ಲವ್ ಮಾಕ್ಟೇಲ್ 2' ಸುಶ್ಮಿತಾ; ಮರಿ 'ಜಂಕಿ'ಗೆ ಕಾಯ್ತಿದ್ದಾರೆ ಫ್ಯಾನ್ಸ್!
'ದರ್ಶನ್ ಅಣ್ಣ ಎಷ್ಟೋ ಟ್ರೈಲರ್ ಲಾಂಚ್ ಮಾಡಿಕೊಟ್ಟಿದ್ದಾರೆ. ಪ್ರಮೋಷನ್‌ನಲ್ಲಿ ಭಾಗಿಯಾಗಿದ್ದಾರೆ. ಅದೆಲ್ಲವನ್ನೂ ಮಾಡುವ ಅವಶ್ಯಕತೆ ಇರಲಿಲ್ಲ. ನಮ್ಮ ಜೊತೆ ಇರುವವರು ಬೆಳೆಯಲಿ ಅಂತ ಸಪೋರ್ಟ್ ಮಾಡಿದರು. ಯಾವುದೋ ಒಂದು ನೆಗೆಟಿವ್ ವಿಚಾರದಿಂದ ಅವರ ಪರವಾಗಿ ಯಾರೂ ಕೂಡ ಮುಂದೆ ಬರಲಿಲ್ಲ. ವಿಜಯಲಕ್ಷ್ಮಿ ಅಕ್ಕ ಒಬ್ಬರೇ ಅಣ್ಣನಿಗೋಸ್ಕರ ಹೋರಾಡುತ್ತಿದ್ದರು. ಅದನ್ನು ನೋಡಿ ಸಿಕ್ಕಾಪಟ್ಟೆ ಬೇಜಾರಾಯ್ತು. ಜೊತೆಯಲ್ಲಿದ್ದವರಿಗೆ ದರ್ಶನ್ ಅಣ್ಣ ಸಾಕಷ್ಟಯ ಸಹಾಯ ಮಾಡಿದ್ದಾರೆ ಆದರೆ ಅವರು ಕಷ್ಟದ ಸಮಯದಲ್ಲಿ ಒಬ್ಬರೂ ಮುಂದಾಳತ್ವ ವಹಿಸಿಕೊಂಡಿಲ್ಲ.ಅಕ್ಕ ಒಬ್ಬರೇ ಓಡಾಡುತ್ತಿದ್ದರು. ಅದು ಏನು ಆಗುತ್ತೋ ಆಗಲಿ ಅಂತ ಅಕ್ಕ ಜೊತೆಯಲ್ಲಿ ಸಪೋರ್ಟ್ ಆಗಿಇ ನಿಂತಿದ್ದೆ. ನಾಣು ಸಿನಿಮಾಗೂ ಬರುವುದಕ್ಕೂ ಮೊದಲೇ ದರ್ಶನ್ ಅಣ್ಣನ ದೊಡ್ಡ ಫ್ಯಾನ್ಸ್ ಆಗಿದ್ದೆ. ಇವತ್ತಿಗೂ ಇದ್ದೀನಿ ಮುಂದೆನೂ ಇರುತ್ತೀನಿ'ಎಂದು ಧನ್ವೀರ್ ಹೇಳಿದ್ದಾರೆ.
ಕೈ ಹಿಡ್ಕೊಂಡು ಓಡಾಡೋದು ಅಷ್ಟೇ, ಮುತ್ತು ಮಾತ್ರ ಕೊಟ್ಟಿದ್ದು ಆ ಸ್ಪೆಷಲ್ ದಿನವೇ: ಬಿಗ್ ಬಾಸ್ ರಂಜಿತ್
