ಆದರೆ, ಯಾರು ಏನೇ ಪ್ರಯತ್ನ ಮಾಡಿದರೂ ಮುತ್ತಪ್ಪ ರೈ ಅವರು ಇರುವ ತನಕ ಅವರ ಸಿನಿಮಾ ಬರಲಿಲ್ಲ. ಈಗ ನಿರ್ದೇಶಕ ರವಿ ಶ್ರೀವತ್ಸ ಅವರು ‘ಎಂಆರ್‌’ ಹೆಸರಿನಲ್ಲಿ ರೈ ಅವರ ಬದುಕನ್ನು ತೆರೆಗೆ ತರುತ್ತಿದ್ದಾರೆ. ಮೂರು ಭಾಗಗಳಲ್ಲಿ ಸಿನಿಮಾ ಆಗಲಿರುವ ಈ ಚಿತ್ರಕ್ಕೆ ದೀಕ್ಷಿತ್‌ ಹೀರೋ.

ಮುತ್ತಪ್ಪ ರೈ ಬಯೋಪಿಕ್‌ ತಯಾರಿ ಶುರು; ಫೋಟೋ ಶೂಟ್‌ ಹೇಗಿತ್ತು ನೋಡಿ! 

ಯಾರೂ ಈ ದೀಕ್ಷಿತ್‌ ಎಂದರೆ ‘ಡೆಡ್ಲಿ ಸೋಮ’ ಸಿನಿಮಾ ನೋಡಿದವರಿಗೆ ಚಿತ್ರದಲ್ಲಿ ನಾಯಕನ ಬಾಲ್ಯದ ಪಾತ್ರದಲ್ಲಿ ಬಾಲ ನಟನಾಗಿ ಕಾಣಿಸಿಕೊಂಡವರೇ ಈ ದೀಕ್ಷಿತ್‌. ಭೂತಗ ಲೋಕದ ಕತೆಯನ್ನು ಒಳಗೊಂಡ ಚಿತ್ರದ ಮೂಲಕವೇ ಬಾಲ ನಟನಾಗಿ ಬಂದವರು, ಈಗ ಅದೇ ಕತ್ತಲ ಲೋಕದ ಕತೆಗೆ ಹೀರೋ ಆಗುತ್ತಿದ್ದಾರೆ. ಅದರಲ್ಲೂ ಮುತ್ತಪ್ಪ ರೈ ಪಾತ್ರ ಮಾಡುತ್ತಿದ್ದಾರೆ ಎಂಬುದು ವಿಶೇಷ. ಜನವರಿ ತಿಂಗಳಿಂದ ಸಿನಿಮಾ ಶೂಟಿಂಗ್‌ ಸೆಟ್‌ಗೆ ಹೊರಡಲಿದೆ. ಸಾಕಷ್ಟುದೊಡ್ಡ ಕಲಾವಿದರ ದಂಡು ಈ ಚಿತ್ರದಲ್ಲಿ ನಟಿಸುತ್ತಿದ್ದು, ರೈ ಅವರ ಸಿನಿಮಾ ಹೇಗಿರುತ್ತದೆ ಎನ್ನುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಸೌಭಾಗ್ಯ ಲಕ್ಷ್ಮೀ ಫಿಲಮ್‌ ಬ್ಯಾನರ್‌ನಲ್ಲಿ ಶುಭ ರಾಜಣ್ಣ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇವರ ಪುತ್ರನೇ ದೀಕ್ಷಿತ್‌. ಈಗಷ್ಟೆಅದ್ದೂರಿಯಾಗಿ ಚಿತ್ರದ ಫೋಟೋಶೂಟ್‌ ಮಾಡಲಾಗಿದೆ.

"

ಇನ್ನೂ ಇಂಥ ಮಾಸ್‌ ಕತೆಗಳನ್ನು ತೆರೆ ಮೇಲೆ ತರುವಲ್ಲಿ ಯಶಸ್ವಿ ನಿರ್ದೇಶಕ ಎನಿಸಿಕೊಂಡಿರುವ ರವಿಶ್ರೀವತ್ಸ ಅವರು ಈಗ ಯಾಕೆ ಮುತ್ತಪ್ಪ ರೈ ಮೇಲೆ ಸಿನಿಮಾ ಮಾಡುತ್ತಿದ್ದಾರೆ ಎಂಬುದಕ್ಕೆ ನಿರ್ದೇಶಕರೇ ಹೇಳುತ್ತಾರೆ ಕೇಳಿ. ‘ಮೂರು ಭಾಗಗಳಲ್ಲಿ ಈ ಚಿತ್ರವನ್ನು ಪ್ರತ್ಯೇಕವಾಗಿ ಚಿತ್ರೀಕರಣ ಮಾಡಲಿದ್ದೇವೆ. ಮೂರೂ ಭಾಗಗಳಿಗೆ ಎಂಆರ್‌ ಎನ್ನುವ ಹೆಸರೇ ಇರುತ್ತದೆ. ವ್ಯಕ್ತಿಗಳ ನಿಜ ಜೀವನದ ಕತೆಗಳನ್ನು ಆಧರಿಸಿ ಸಿನಿಮಾ ಮಾಡುತ್ತಿದ್ದೇವೆ ಎಂದರೆ ಅವರ ಕುರಿತು ನಾವು ಅಧಿಕೃತವಾಗಿ ಸಾಕ್ಷಿಗಳನ್ನು ಒದಗಿಸುತ್ತಿದ್ದೇವೆ ಎಂದರ್ಥ.

ಮುತ್ತಪ್ಪ ರೈ ಬಯೋಪಿಕ್‌; ಚಿತ್ರದ ಹೀರೋ ಯಾರೆಂಬುವುದು ಫುಲ್ ಸಸ್ಪೆನ್ಸ್!

ಹೀಗಾಗಿ ರೈ ಅವರ ಬಗ್ಗೆ ಅವರು ಇದ್ದಾಗ ಸಿನಿಮಾ ಮಾಡಲು ಆಗಲ್ಲ ಎಂಬುದು ನನಗೆ ಗೊತ್ತಿತ್ತು. ಯಾಕೆಂದರೆ ನಾನೇ ರೈ ಅವರಿಗೆ 2002ರಲ್ಲೇ ಕತೆ ಹೇಳಿದ್ದೆ. 18 ವರ್ಷಗಳಿಂದ ಈ ಬಗ್ಗೆ ಅವರು ಯೋಚನೆ ಮಾಡುತ್ತಿದ್ದರು. ಈಗ ಸೂಕ್ತ ಸಮಯ ಅನಿಸಿ ಚಿತ್ರವನ್ನು ಶುರು ಮಾಡುತ್ತಿದ್ದೇವೆ’ ಎನ್ನುತ್ತಾರೆ ರವಿ ಶ್ರೀವತ್ಸ. ಎಲ್ಲವೂ ಅಂದುಕೊಂಡಂತೆ ಆದರೆ ಪಾರ್ಟ್‌ 1 ಕತೆ ಚಿತ್ರೀಕರಣ ಮುಗಿಸಿಕೊಂಡು ಮುಂದಿನ ವರ್ಷ ಆಗಸ್ಟ್‌ ಅಥವಾ ಸೆಪ್ಟಂಬರ್‌ ತಿಂಗಳಲ್ಲಿ ಬಿಡುಗಡೆ ಆಗಲಿದೆ.