ಬೆಂಗಳೂರು(ಜೂ. 24)   ಈ ಸುದ್ದಿ ಎಲ್ಲಿಂದ ಹುಟ್ಟಿಕೊಂಡಿತೋ ಗೊತ್ತಿಲ್ಲ. ಆದರೆ  ಸುದ್ದಿಗೆ ಸ್ಪಷ್ಟನೆಯಂತೂ ಸಿಕ್ಕಿದೆ.  ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂಬ ರೂಮರ್ ಹರಿದಾಡಿತ್ತು.

ಹರಿದಾಡುತ್ತಿದ್ದ ಸುದ್ದಿಗೆ ಟ್ವೀಟ್ ಮೂಲಕ ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ.  ನನಗೆ ಕೊರೋನಾ ದೃಢಪಟ್ಟಿದೆ ಎಂಬ ರೂಮರ್ ಹರಿದಾಡುತ್ತಿದ್ದುದನ್ನು ಕೇಳಿದೆ. ಈ ಮೂಲಕ ನಿಮಗೆಲ್ಲ ತಿಳಿಸುವುದು ಏನೆಂದರೆ ನಾನು ಆರೋಗ್ಯವಾಗಿದ್ದೇನೆ, ಯಾವ ಸಮಸ್ಯೆ ಇಲ್ಲ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ವಿಜಯಲಕ್ಷ್ಮಿ ಮನವಿ ಮಾಡಿಕೊಂಡಿದ್ದಾರೆ. 

ಸ್ಟಾರ್‌ಗಳ ಬೆನ್ನು ಬಿದ್ದಿದೆ ಕೊರೋನಾ ವೈರಸ್

ಈ ರೂಮರ್ ಹರಿದಾಡಲು ಕಾರಣ ಏನು ಎಂಬುದು ಮಾತ್ರ ತಿಳಿದು ಬಂದಿಲ್ಲ. ಕೊರೋನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಿದ್ದ ಸಚಿವ ಸುಧಾಕರ್ ಅವರ ಕುಟುಂಬಕ್ಕೆ ಕೊರೋನಾ ತಾಗಿತ್ತು.

ಪಾಕಿಸ್ತಾನದ ಕ್ರಿಕೆಟ್ ಆಟಗಾರರು, ತೆಲಂಗಾಣದ ಶಾಸಕ ಸಹ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಬೆಂಗಳೂರಿನಲ್ಲಿ ಕೊರೋಣಾ ರಾಕೆಟ್ ವೇಗದಲ್ಲಿ ಏರುತ್ತಿದ್ದು ಅವರವರ ಆರೋಗ್ಯ ಕಾಪಾಡಿಕೊಳ್ಳುವ ಜವಾಬ್ದಾರಿ ಅವರ ಮೇಲೆಯೇ ಇದೆ.