Asianet Suvarna News Asianet Suvarna News

ತರುಣ್‌ ಸುಧೀರ್‌-ಸೋನಲ್‌ ಪ್ರೀತಿಗೆ ಕಾರಣವಾಗಿದ್ದೇ ದರ್ಶನ್‌?


ಖ್ಯಾತ ಖಳನಟ ಸುಧೀರ್‌ ಅವರ ಕಿರಿಯ ಪುತ್ರ ತರುಣ್‌ ಸುಧೀರ್‌ ಹಾಗೂ ನಟಿ ಸೋನಲ್‌ ಮಂಥೆರೋ ಮದುವೆ ನಿಶ್ಚಯವಾಗಿದೆ. ಆಗಸ್ಟ್‌ 9, 10, 11ಕ್ಕೆ ಬೆಂಗಳೂರಿನಲ್ಲಿ ವಿವಾಹ ಸಮಾರಂಭ ನಡೆಯಲಿದೆ.
 

Darshan thoogudeepa Reason for Tharun Sudhir Sonal Monteiro Love Story san
Author
First Published Jun 26, 2024, 3:40 PM IST

ಬೆಂಗಳೂರು (ಜೂ.26):  ನಿರ್ದೇಶಕ ತರುಣ್‌ ಸುಧೀರ್‌ (Tharun Sudh) ಹಾಗೂ ನಟಿ ಸೋನಲ್‌ ಮಂಥೆರೋ (sonal monteiro) ಮದುವೆ ನಿಶ್ಚಯವಾಗಿದ್ದು ಮೂಲಗಳ ಪ್ರಕಾರ ಆಗಸ್ಟ್‌ 9,10,11ರಂದು ಬೆಂಗಳೂರಿನಲ್ಲಿಯೇ ಮದುವೆ ಕಾರ್ಯಕ್ರಮ ನೆರವೇರಲಿದೆ. ತರುಣ್‌ ಸುಧೀರ್‌ ಅವರ ತಾಯಿ ಮಾಲತಿ ಸುಧೀರ್‌ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಶೀಘ್ರದಲ್ಲಿಯೇ ಈ ಜೋಡಿ ಅಧಿಕೃತವಾಗಿ ಸುದ್ದಿಗೋಷ್ಠಿ ನಡೆಸಿ ವಿಚಾರವನ್ನು ತಿಳಿಸಬಹುದು ಎಂದೂ ಅಂದಾಜಿಸಲಾಗಿದೆ. ಇದರ ನಡುವೆ ತರುಣ್‌ ಸುಧೀರ್‌ ಹಾಗೂ ಸೋನಲ್‌ ನಡುವೆ ಪ್ರೀತಿ ಹುಟ್ಟಿದ್ದು ಹೇಗೆ ಎನ್ನುವ ಚರ್ಚೆಗಳು ಆರಂಭವಾಗಿದೆ. ಮೂಲಗಳ ಪ್ರಕಾರ, ಇಂದು ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ರಿಂದಲೇ ತರುಣ್‌ ಸುಧೀರ್‌ ಹಾಗೂ ಸೋನಲ್‌ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು ಎನ್ನಲಾಗಿದೆ. ರಾಬರ್ಟ್‌ ಸಿನಿಮಾ ಸೆಟ್‌ನಲ್ಲಿ ತಮಾಷೆಯಾಗಿ ದರ್ಶನ್‌, ತರುಣ್‌ ಹಾಗೂ ಸೋನಲ್‌ಗೆ ರೇಗಿಸುತ್ತಿದ್ದರು. ಇದೇ ಇವರಿಬ್ಬರ ನಡುವೆ ಪ್ರೀತಿ ಹುಟ್ಟಲು ಕಾರಣವಾಗಿದೆ ಎನ್ನಲಾಗಿದೆ.

ರಾಬರ್ಟ್‌ ಸಿನಿಮಾ ಸೆಟ್‌ನಲ್ಲಿಯೇ ದರ್ಶನ್‌ ಹಲವು ಬಾರಿ ತರುಣ್‌ ಸುಧೀರ್‌ಗೆ ಮದುವೆ ಮಾಡಿಸಬೇಕು. ಒಳ್ಳೆಯ ಹುಡುಗಿ ಇದ್ದರೆ ಹೇಳಿ ಎನ್ನುತ್ತಿದ್ದಂತೆ. ಇದೇ ವೇಳೆ ಶೂಟಿಂಗ್‌ ಸೆಟ್‌ನಲ್ಲಿದ್ದ ತರುಣ್‌-ಸೋನಲ್‌ ಇಬ್ಬರನ್ನೂ ಇದೇ ವಿಚಾರವಾಗಿ ರೇಗಿಸುತ್ತಿದ್ದರು. ಕೊನೆಗೆ ಇಬ್ಬರ ನಡುವೆ ಪ್ರೀತಿ ಹುಟ್ಟಲು ಇದೇ ಅಂಶ ಕಾರಣವಾಗಿದೆ ಎಂದು ವರದಿಯಾಗಿದೆ.

ಕನ್ನಡದಲ್ಲಿ ಪಂಚತಂತ್ರ, ರಾಬರ್ಟ್‌ ಮೂಲಕ ಗಮನಸೆಳೆದ ಸೋನಲ್‌, ಅಭಿಸಾರಿಕೆ ಸಿನಿಮಾದ ಮೂಲಕ ಕನ್ನಡ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದರು. ಮೂಲತಃ ಮಂಗಳೂರಿನವರಾದ ಸೋನಲ್‌, ಅದಾಗಲೇ ಹಲವು ತುಳು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ರಾಬರ್ಟ್‌ ಸಿನಿಮಾದಲ್ಲಿ ರಾಘವ ಪಾತ್ರ ಮಾಡಿದ್ದ ವಿನೋದ್‌ ಪ್ರಭಾಕರ್‌ಗೆ ಜೋಡಿಯಾಗಿ ಸೋನಲ್‌ 'ತನು' ಪಾತ್ರದಲ್ಲಿ ಗಮನಸೆಳೆದಿದ್ದರು. ಈಗ ಬಂದಿರುವ ಮಾಹಿತಿಯ ಪ್ರಕಾರ ಮೂರು ದಿನಗಳ ಕಾಲ ಇವರ ಮದುವೆ ಸಮಾರಂಭ ನಡೆಯಲಿದೆ. ಆದರೆ, ತರುಣ್‌ ಹಾಗೂ ಸೋನಲ್‌ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಅದಲ್ಲದೆ, ತಮ್ಮಿಬ್ಬರ ನಡುವೆ ಪ್ರೀತಿ ಇದೆ ಎಂದು ಹೇಳುವಂಥ ಯಾವುದೇ ಪೋಸ್ಟ್‌ಗಳನ್ನೂ ಮಾಡಿಲ್ಲ.

ಎಕ್ಸ್‌ಕ್ಯೂಸ್‌ ಮೀ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದ ತರುಣ್‌ ಸುಧೀರ್‌, ಚೌಕ ಸಿನಿಮಾದ ಮೂಲಕ ಡೈರೆಕ್ಟರ್‌ ಕ್ಯಾಪ್‌ ತೊಟ್ಟಿದ್ದರು. ಒಂದರ ಹಿಂದೆ ಒಂದರಂತೆ ಹಿಟ್‌ ಚಿತ್ರ ನೀಡಿದ್ದ ತರುಣ್‌ ಸುಧೀರ್‌ ಈಗ ನಾಲ್ಕನೇ ಸಿನಿಮಾದ ತಯಾರಿಯಲ್ಲಿದ್ದಾರೆ. ಶರಣ್‌ ಅಭಿನಯದ ರಾಂಬೋ ಸಿನಿಮಾದಲ್ಲಿ ತರುಣ್‌ ಸುಧೀರ್‌ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

ನಿರ್ದೇಶಕ ತರುಣ್ ಸುಧೀರ್ ಹೃದಯದಲ್ಲಿ ಬೆಳಕಿನ ಕವಿತೆ ಬರೆದ ಬ್ಯೂಟಿಫುಲ್ ನಟಿ!, ಮದುವೆ ಬಗ್ಗೆ ಏನಂದ್ರು?

ಕಾಲೇಜು ದಿನಗಳಲ್ಲಿಯೇ ಮಾಡೆಲಿಂಗ್‌ ಆರಂಭಿಸಿದ್ದ ಸೋನಲ್‌, ‘ಎಕ್ಕಾ ಸಕ್ಕಾ’ ಎನ್ನುವ ತುಳು ಚಿತ್ರದಲ್ಲಿ ಮೊದಲಿಗೆ ನಟಿಸಿದರು. ಬಳಿಕ ಮತ್ತೆರಡು ತುಳು ಸಿನಿಮಾ ಅವಕಾಶ ಸಿಕ್ಕಿತ್ತು. ನಂತರ ‘ಅಭಿಸಾರಿಕ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಿದ್ದರು. ‘ಎಂಎಲ್‌ಎ’, ‘ಮದುವೆ ದಿಬ್ಬಣ’, ‘ಪಂಚತಂತ್ರ’, ‘ಡೆಮೊ ಪೀಸ್’ ಸಿನಿಮಾಗಳಲ್ಲಿ ನಟಿಸಿದ್ದ ಸೋನಲ್‌, ರಾಬರ್ಟ್’ ಬಳಿಕ ‘ಶಂಭೋ ಶಿವ ಶಂಕರ’, ‘ಗರಡಿ’, ‘ಶುಗರ್ ಫ್ಯಾಕ್ಟರಿ’ ಸಿನಿಮಾಗಳಲ್ಲಿ ಸೋನಲ್ ನಟಿಸಿದ್ದಾರೆ. ‘ಬುದ್ಧಿವಂತ-2’ ಹಾಗೂ ‘ಮಾರ್ಗರೆಟ್ ಲವರ್ ಆಫ್ ರಾಮಾಚಾರಿ’ ಸಿನಿಮಾಗಳಲ್ಲಿ ನಟಿಸಿದ್ದು ಇನ್ನಷ್ಟೇ ಈ ಸಿನಿಮಾಗಳು ತೆರೆಗೆ ಬರಬೇಕಿದೆ.

'ಕಾಟೇರ' ನಿರ್ದೇಶಕನಿಗೆ ಕೂಡಿ ಬಂದ ಕಂಕಣ ಭಾಗ್ಯ..? ಬನಾರಸ್ ಬೆಡಗಿ ಜೊತೆ ತರುಣ್ ಸುಧೀರ್ ವಿವಾಹ..?

Latest Videos
Follow Us:
Download App:
  • android
  • ios