ದರ್ಶನ್ ತಮ್ಮ ೪೮ನೇ ಹುಟ್ಟುಹಬ್ಬವನ್ನು ಆಪ್ತರೊಂದಿಗೆ ಆಚರಿಸಿದರು. "ಡೆವಿಲ್" ಚಿತ್ರದ ಟೀಸರ್ ಬಿಡುಗಡೆಯಾಯಿತು. ಆರು ಹೊಸ ಚಿತ್ರಗಳ ಘೋಷಣೆಯೂ ಆಯಿತು. ದರ್ಶನ್ ಬೆನ್ನುನೋವಿನಿಂದ ಚಿಕಿತ್ಸೆ ಪಡೆಯುತ್ತಿದ್ದು, "ಡೆವಿಲ್" ಚಿತ್ರೀಕರಣ ಸ್ಥಗಿತಗೊಂಡಿದೆ. ಕಾನೂನು ಸಮಸ್ಯೆಗಳಿಂದ ಚಲನವಲನಗಳ ಮೇಲೆ ನಿರ್ಬಂಧವಿದೆ.

ಕನ್ನಡದ ಸ್ಟಾರ್ ನಟ ದರ್ಶನ್ (Darshan Thoogudeepa) ನಿನ್ನೆ ತಮ್ಮ 48ನೇ ಹುಟ್ಟುಹಬ್ಬವನ್ನು ಆಪ್ತರ ಸಮ್ಮುಖದಲ್ಲಿ ಮನೆಯಲ್ಲಿ ಆಚರಿಸಿಕೊಂಡಿದ್ದಾರೆ. ಶೈಲಜಾ ನಾಗ್, ವಿ ಹರಿಕೃಷ್ಣ ಹೀಗೆ ಕೆಲವೇ ಆಪ್ತರ ಸಮ್ಮುಖದಲ್ಲಿ ತಮ್ಮ ಫ್ಯಾಮಿಲಿ ಜೊತೆ ನಟ ದರ್ಶನ್ ಅವರು ತಮ್ಮ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದಾರೆ. ಡಿ ಬಾಸ್ ಹುಟ್ಟುಹಬ್ಬದ ಪ್ರಯುಕ್ತ ನಿನ್ನೆ ದರ್ಶನ್ ನಟನೆಯ 'ಡೆವಿಲ್' ಸಿನಿಮಾದ (Devil Teaser) ಟೀಸರ್ ಬಿಡುಗಡೆ ಆಗಿದೆ. ಮಿಲನಾ ಪ್ರಕಾಶ್ ನಿರ್ದೇಶನದಲ್ಲಿ ಡೆವಿಲ್ ಚಿತ್ರದ್ ಶೂಟಿಂಗ್ ನಡೆಯುತ್ತಿದ್ದು ಅದೀಗ ಅರ್ಧಕ್ಕೇ ನಿಂತಿದೆ. 

ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪದಲ್ಲಿ ಜೈಲು ಸೇರಿ ಈಗ ಅನಾರೋಗ್ಯದ ಕಾರಣಕ್ಕೆ ಜಾಮೀನು ಪಡೆದು ಬಿಡುಗಡೆ ಆಗಿರುವುದು ಗೊತ್ತೇ ಇದೆ. ಸದ್ಯ ನಟ ದರ್ಶನ್ ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದು, ಶೂಟಿಂಗ್‌ನಲ್ಲಿ ಭಾಗಿಯಾಗುತ್ತಿಲ್ಲ. ಮುಂದೆ ಯಾವಾಗ ಡೆವಿಲ್ ಶೂಟಿಂಗ್ ಮುಂದುವರಿಯಲಿದೆ ಎಂಬುದು ಗೊತ್ತಿಲ್ಲ. ಆದರೆ, ಸೂರಪ್ಪ ಬಾಬು ಅವರ ಮುಂಗಡ ಹಣವನ್ನು ನಟ ದರ್ಶನ್ ವಾಪಸ್ ಮಾಡಿದ್ದಾರೆ ಎಂಬ ಮಾಹಿತಿ ಬಂದಿದೆ. 

ದರ್ಶನ್‌ ಸೀಕ್ರೆಟ್‌ ಓಪನ್ನಾಗಿ ಹೇಳಿದ ಕೆ ಮಂಜು, ಮುಂದಿನ ಪ್ರಾಜೆಕ್ಟ್ ಗುಟ್ಟ ಕೂಡ ಬಿಚ್ಚಿಟ್ರು!

ಹೊಸ ಸುದ್ದಿ ಏನಂದರೆ, ನಟ ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ನಿನ್ನೆ ಆರು (6) ಹೊಸ ಪ್ರಾಜೆಕ್ಟ್‌ಗಳು ಘೋಷಣೆ ಆಗಿವೆ ಎನ್ನಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇನ್ನಷ್ಟೇ ಹೊರಬೀಳಲಿದೆ. ಡೆವಿಲ್ ಶೂಟಿಂಗ್ ಹಂತದಲ್ಲಿದೆ, ಮುಂದೆ ಜೋಗಿ ಪ್ರೇಮ್ ಜೊತೆಗೆ ಒಂದು ಸಿನಿಮಾ ಮಾಡಲಿದ್ದಾರೆ ನಟ ದರ್ಶನ್. ಇದಲ್ಲದೇ ಇನ್ನೊಂದು ಸಿನಿಮಾಗೆ ನಟ ದರ್ಶನ್ ಸಹಿ ಹಾಕಿ ಆಗಿತ್ತು. ಅಲ್ಲಿಗೆ, ಒಟ್ಟೂ ಒಂಬತ್ತು ಸಿನಿಮಾಗಳು ಸದ್ಯ ನಟ ದರ್ಶನ್‌ ಕೈ ನಲ್ಲಿವೆ. 

ಸದ್ಯ ಕೊಲೆ ಕೇಸ್‌ನಿಂದ ನಟ ದರ್ಶನ್ ಹಾಗೂ ಸಹಚರರಿಗೆ ಕ್ಲೀನ್ ಚಿಟ್ ಸಿಕ್ಕಿಲ್ಲ. ಹೀಗಾಗಿ ಶೂಟಿಂಗ್ ಮಾಡಬೇಕು ಎಂದರೆ ಸಾಕಷ್ಟು ಪ್ರೋಟೋಕಾಲ್‌ಗಳನ್ನು ಪಾಲಿಸಬೇಕಿದೆ ನಟ ದರ್ಶನ್, ವಿದೇಶಗಳಿಗೆ ಹೋಗಬೇಕು ಎಂದರೆ ಸ್ಪೆಷಲ್ ಪರ್ಮಿಶನ್ ಬೇಕು. ಸದ್ಯಕ್ಕೆ ಬೆಂಗಳೂರು ಹಾಗೂ ಮೈಸೂರು ಬಿಟ್ಟು ಬೇರೆ ಕಡೆ ಹೋಗುವಂತಿಲ್ಲ ನಟ ದರ್ಶನ್ ತೂಗುದೀಪ. ಹೀಗಾಗಿ ಡೆವಿಲ್ ಶೂಟಿಂಗ್ ಸದ್ಯಕ್ಕೆ ಕಂಟಿನ್ಯೂ ಆಗಿಲ್ಲ. ಜೊತೆಗೆ, ದರ್ಶನ್ ಬೆನ್ನು ನೋವು ಕಡಿಮೆ ಆಗೋ ಮೊದಲು ಶೂಟಿಂಗ್ ಮಾಡೋದಾದ್ರೂ ಹೇಗೆ?

'ತೊಡೆ ಚೆನ್ನಾಗಿ ಇದ್ಯಾ ನೋಡಿ ನಂದು' ಅಂದ್ಬಿಟ್ಟು ಲಂಗ ಎತ್ತಿಬಿಟ್ರಂತೆ ಜೂಲಿ ಲಕ್ಷ್ಮೀ..!

ಹೀಗಾಗಿ, ಸದ್ಯ ನಟ ದರ್ಶನ್ ಅಭಿಮಾನಿಗಳಿಗಾಗಿ ಡೆವಿಲ್ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ನೇರವಾಗಿ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳಲು ಅನಾರೋಗ್ಯದ ಕಾರಣಕ್ಕೆ ನಟ ದರ್ಶನ್‌ಗೆ ಆಗಿಲ್ಲ. ಹೀಗಾಗಿ, ಫ್ಯಾನ್ಸ್ ನೋಡಿ ಖುಷಿ ಪಡಲಿ ಎಂದು ಡೆವಿಲ್ ಟೀಸರ್ ಬಿಡುಗಡೆ ಆಗಿದೆ. ಅದು ಈಗಾಗಲೇ 3 ಮಿಲಿಯನ್ ವ್ಯೂಸ್ ಪಡೆದು ಮುನ್ನುಗ್ಗುತ್ತಿದೆ. ಟೀಸರ್‌ ಕಂಪ್ಲೀಟ್ ಮಾಸ್ ಫೀಲ್ ಕೊಡುತ್ತಿದೆ.