- ಹೀಗೆ ಹೇಳಿದ್ದು ನಟ ದರ್ಶನ್‌. ಅವರಿಗೆ ಚಿತ್ರರಂಗದ ಆರಂಭದ ದಿನಗಳನ್ನು ಮೆಲುಕು ಹಾಕಲು ವೇದಿಕೆಯಾದದ್ದು ಎಸ್‌ ನಾರಾಯಣ್‌ ನಿರ್ದೇಶನದ ‘ಡಿ’ ಚಿತ್ರದ ಟೈಟಲ್‌ ಲಾಂಚ್‌ ಕಾರ್ಯಕ್ರಮ. 2000ನೇ ಇಸವಿಯ ಆರಂಭದಲ್ಲಿ ಸಿನಿಮಾದಲ್ಲಿ ನಟಿಸಬೇಕೆಂದು ದರ್ಶನ್‌ ಓಡಾಡುತ್ತಿದ್ದಾಗ ಎಸ್‌ ನಾರಾಯಣ್‌ ತಮ್ಮ ಧಾರಾವಾಹಿಯಲ್ಲಿ ನಟನೆಗೆ ಅವಕಾಶ ಕೊಟ್ಟಿದ್ದರು.

ನಟ ದರ್ಶನ್‌ ಹಾಗೂ ಆದಿತ್ಯ ಸ್ನೇಹಕ್ಕೆ ಸಾಕ್ಷಿ ಈ ಲಾಂಚ್ ಕಾರ್ಯಕ್ರಮ! 

‘ಹೊಸ ವರ್ಷದಲ್ಲಿ ಎಸ್‌ ನಾರಾಯಣ್‌ ಹೊಸ ಸಿನಿಮಾ ಆರಂಭಿಸಿದ್ದಾರೆ. ನಾನೂ ಅವರ ಗರಡಿಯಿಂದಲೇ ಬಂದವನು. ಅವರಿಂದ ಬಂದ ಎಲ್ಲರೂ ಚಿತ್ರರಂಗದಲ್ಲಿ ಎತ್ತರಕ್ಕೆ ಬೆಳೆದಿದ್ದಾರೆ. ಸ್ನೇಹಿತ ಆದಿತ್ಯ ಎಸ್‌ ನಾರಾಯಣ್‌ ಚಿತ್ರದಲ್ಲಿ ನಾಯಕನಾಗುತ್ತಿದ್ದಾನೆ. ಆತ ಎತ್ತರಕ್ಕೆ ಬೆಳೆಯಲಿ’ ಎಂದು ಹಾರೈಸಿದರು.

‘ಸ್ಟಾರ್‌ ನಟರ ಸಿನಿಮಾ ಮಾಡಿರುವ ಎಸ್‌ ನಾರಾಯಣ್‌, ಈಗ ಟ್ರೆಂಡ್‌ಗೆ ತಕ್ಕಂತೆ ಕತೆ ಆಯ್ಕೆ ಮಾಡಿದ್ದಾರೆ. ಹೆಸರು ನೋಡಿದರೆ ಹಾರರ್‌ ಸಿನಿಮಾ ಎನಿಸುತ್ತದೆ. ಚಿತ್ರಕ್ಕೆ ಒಳ್ಳೆಯದಾಗಲಿ’ ಎಂದು ಶುಭ ಕೋರಿದರು.

ಯಾರೂ ನೋಡಿರದ ನಟ ದರ್ಶನ್ ಬಾಲ್ಯದ ಫೋಟೋ ವೈರಲ್! ...

ಆದಿತ್ಯ ಹಾಗೂ ಅದಿತಿ ಪ್ರಭುದೇವ ಜೋಡಿಯಾಗಿ ನಟಿಸುತ್ತಿರುವ ಈ ‘ಡಿ’ ಚಿತ್ರವನ್ನು ಸ್ವಾತಿ ಕುಮಾರ್‌ ನಿರ್ಮಿಸುತ್ತಿದ್ದಾರೆ.