ದರ್ಶನ್‌ ಅಭಿ​ಮಾ​ನಿ​ಗ​ಳಿಗೆ ಇದು ದೊಡ್ಡ ಸಂಭ್ರ​ಮದ ಸುದ್ದಿ. ಕೊನೆಗೂ ಬಹು ನಿರೀ​ಕ್ಷೆ​ಯ ‘ರಾಬ​ರ್ಟ್‌’ ಚಿತ್ರದ ಬಿಡು​ಗ​ಡೆಗೆ ದಿನಾಂಕ್‌ ಫಿಕ್ಸ್‌ ಆಗಿದೆ. ಏಪ್ರಿಲ್‌ 10ಕ್ಕೆ ದರ್ಶನ್‌ ಅಭಿ​ನ​ಯದ ‘ರಾಬ​ರ್ಟ್‌’ ಸಿನಿಮಾ ಬಿಡು​ಗಡೆ ಆಗು​ತ್ತಿ​ರು​ವುದು ಪಕ್ಕಾ ಆಗಿದೆ. ಕನ್ನ​ಡದ ಜತೆಗೆ ತೆಲು​ಗಿ​ನಲ್ಲೂ ದರ್ಶನ್‌ ಈ ಬಾರಿ ಸದ್ದು ಮಾಡ​ಲಿ​ದ್ದಾರೆ.

ಸದ್ಯಕ್ಕೆ ತೆಲು​ಗಿಗೆ ಮಾತ್ರ ಡಬ್‌ ಮಾಡುವ ಪ್ಲಾನ್‌ ಚಿತ್ರ​ತಂಡದ್ದು. ‘ಏಪ್ರಿಲ್‌ 10ಕ್ಕೆ ನಮ್ಮ ಸಿನಿಮಾ ತೆರೆ ಮೇಲೆ ಬರು​ತ್ತಿದೆ. ಅಂದು ಗುಡ್‌ ಫ್ರೈಡೇ. ರಾಬರ್ಟ್‌ ಚಿತ್ರಕ್ಕೆ ಇದೇ ಸೂಕ್ತ​ವಾದ ದಿನ ಎನಿ​ಸಿದೆ.

ಫೈಟರ್‌ಗೆ ಡೈಲಿ ಪೇಮೆಂಟ್‌, ವಿನೋದ್‌ಗೆ ಹೈ ಪೇಮೆಂಟ್‌; ನಿರ್ಮಾಪಕರಿಗೆ ದರ್ಶನ್‌ ಖಡಕ್ ಮಾತು!

ನಮ್ಮ ಚಿತ್ರಕ್ಕೂ ಗುಡ್‌ ಫ್ರೈಡೇ ಆಗ​ಲಿದೆ. ಕನ್ನ​ಡದ ಜತೆಗೆ ತೆಲು​ಗಿಗೂ ಈ ಚಿತ್ರ​ವನ್ನು ಡಬ್‌ ಮಾಡು​ತ್ತಿ​ದ್ದೇ​ವೆ’ ಎಂದು ನಿರ್ದೇ​ಶಕ ತರುಣ್‌ ಸುಧೀರ್‌ ಹೇಳು​ತ್ತಾರೆ.

ಒಟ್ಟಿ​ನಲ್ಲಿ ದರ್ಶನ್‌ ಅವರ ‘ರಾಬ​ರ್ಟ್‌’ ಸಿನಿಮಾ ಯಾವಾಗ ತೆರೆಗೆ ಬರ​ಲಿದೆ ಎಂದು ಪದೇ ಪದೇ ಚಾಲೆಂಜಿಂಗ್‌ ಸ್ಟಾರ್‌ ಅಭಿ​ಮಾ​ನಿ​ಗ​ಳಿಂದ ಕೇಳುತ್ತಿದ್ದ ಪ್ರಶ್ನೆಗೆ ನಿರ್ದೇ​ಶ​ಕರೇ ಉತ್ತರ ಕೊಟ್ಟಿ​ದ್ದಾ​ರೆ. ಉಮಾ​ಪತಿ ಶ್ರೀನಿ​ವಾ​ಸ್‌ ನಿರ್ಮಾ​ಣದ ಈ ಚಿತ್ರದ​ಲ್ಲಿ ಆಶಾ ಭಟ್‌ ನಾಯ​ಕಿ​ಯಾಗಿ ನಟಿ​ಸು​ತ್ತಿ​ದ್ದಾರೆ. ದೇವ​ರಾಜ್‌, ಜಗ​ಪತಿ ಬಾಬು, ರವಿ ಕಿಶನ್‌, ಐಶ್ವರ್ಯ ಪ್ರಸಾ​ದ್‌ ಪ್ರಮುಖ ಪಾತ್ರ​ಗ​ಳಲ್ಲಿ ಕಾಣಿ​ಸಿ​ಕೊಂಡಿ​ದ್ದಾರೆ.

ನಮ್ಮ ರಾಬರ್ಟ್‌ ಸಿನಿಮಾ ಏಪ್ರಿಲ್‌ 10ರ ಗುಡ್‌ ಫ್ರೈಡೇ ದಿನ ಚಿತ್ರ​ಮಂದಿ​ರಕ್ಕೆ ಬರು​ವುದು ಖಚಿತ. ಈಗಾ​ಗಲೇ ಆ ನಿಟ್ಟಿ​ನಲ್ಲಿ ಕೆಲಸ ಮಾಡು​ತ್ತಿ​ದ್ದೇವೆ. ಏಕಕಾ​ಲ​ದಲ್ಲಿ ಕನ್ನಡ ಮತ್ತು ತೆಲುಗು ಎರಡೂ ಭಾಷೆ​ಗ​ಳಲ್ಲಿ ಈ ಚಿತ್ರ​ವನ್ನು ಬಿಡು​ಗಡೆ ಮಾಡು​ತ್ತಿ​ದ್ದೇವೆ. ಸಿನಿಮಾ ಸಾಕಷ್ಟುನಿರೀಕ್ಷೆ ಮತ್ತು ಭರ​ವಸೆ ಹುಟ್ಟಿ​ಸಿದ್ದು, ಈ ನಿರೀಕ್ಷೆ ಹುಸಿ ಆಗ​ಲ್ಲ.

-ತರುಣ್‌ ಸುಧೀರ್‌, ನಿರ್ದೇ​ಶ​ಕ