'ರಾಬರ್ಟ್‌' ಸಕ್ಸಸ್‌ ಮೀಟ್‌ನಲ್ಲಿ ಸಾರಥಿ ಚಿತ್ರದ ಬಗ್ಗೆ ಮಾತನಾಡಿದ ನಟ ದರ್ಶನ್. ಲಯನ್‌ ಕಿಂಗ್‌ಗೂ ಸಾರಥಿಗಿರುವ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ವೃತ್ತಿ ಜೀವನದಲ್ಲಿ ಬ್ರೇಕ್ ತಂದುಕೊಟ್ಟ ಸಿನಿಮಾ ಸಾರಥಿ. 2011ರಲ್ಲಿ ವೈಯಕ್ತಿಕ ಜೀವನದಲ್ಲಿದ ಕೆಲವೊಂದು ಘಟನೆಗಳಿಂದ ದರ್ಶನ್ ಪೊಲೀಸ್‌ ಠಾಣೆ ಮಟ್ಟಿಲು ಏರಬೇಕಿತ್ತು. ಆದರೆ ಸಾರಥಿ ಸಿನಿಮಾ ಬಿಡುಗಡೆಯಾದ ಕ್ಷಣವೇ ದರ್ಶನ್ ನಸೀಬ್ ಬದಲಾಗಿತ್ತು. 100 ದಿನಗಳ ಕಾಲ ಹೌಸ್‌ಫುಲ್ ಪ್ರದರ್ಶನ ಕಂಡ ಸಿನಿಮಾ ಇದಾಗಿತ್ತು.

ರಾಬರ್ಟ್ ಪೈರಸಿ ಮಾಡುವವರಿಗೆ ದರ್ಶನ್ ಖಡಕ್ ಉತ್ತರ

ರಾಬರ್ಟ್ ಸಕ್ಸಸ್ ಮೀಟ್‌ನಲ್ಲಿ ಪೈರಸಿ ವಿಚಾರ ಮಾತನಾಡುವಾಗ ದರ್ಶನ್, ಸಾರಥಿ ಚಿತ್ರಕಥೆ ತಯಾರಾದ ಬಗ್ಗೆ ಮಾತನಾಡಿದ್ದಾರೆ. ಇಂಗ್ಲೀಷ್‌ ಜನಪ್ರಿಯ ಚಿತ್ರ ಲಯನ್ ಕಿಂಗ್‌ ಬಹುತೇಕ ಭಾಗ ಸಾರಥಿಯಲ್ಲಿ ಕಾಣಬಹುದಂತೆ. 'ಸಾರಥಿ ಚಿತ್ರವನ್ನು ಲಯನ್ ಕಿಂಗ್ ಸಿನಿಮಾದಿಂದ ಎತ್ತಿದ್ದೀವಿ, ಯಾರು ಕೇಳಿದ್ರು?' ಎಂದು ದರ್ಶನ್ ವೇದಿಕೆ ಮೇಲೆ ನಿಂತು ಮಾಧ್ಯಮಗಳಿಗೆ ಪ್ರಶ್ನೆ ಮಾಡಿದ್ದಾರೆ. 

ದರ್ಶನ್ ಜೋಡಿಯಾಗಿ ದೀಪಾ ಸನ್ನಿಧಿ ಆಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಚಿತ್ರದಲ್ಲಿರುವ ಪ್ರತಿಯೊಂದೂ ಹಾಡು ಸೂಪರ್ ಹಿಟ್ ಆಗಿವೆ. ಸಾರಥಿ ಹಿಟ್ ಆಗುತ್ತಿದ್ದಂತೆ ದರ್ಶನ್ ಮಡಿಲಿಗೆ ರಾಶಿ ರಾಶಿ ಚಿತ್ರಕತೆಗಳು ತಯಾರಾಗಿ ಬಂದವು. ಪುಟ್ಟ ಬಾಲಕ ತನ್ನ ತಂದೆಯನ್ನು ಉಳಿಸಿಕೊಳ್ಳಲು ಪ್ರಯತ್ನ ಪಡುವ ದೃಶ್ಯವನ್ನು ನೀವು ಲಯನ್ ಕಿಂಗ್‌ನಲ್ಲಿ ಕೂಡ ಕಾಣಬಹುದು. 

ರಾಬರ್ಟ್‌ ಈಗಾಗಲೆ 50 ಕೋಟಿ ಕ್ಲಬ್ ಸೇರಿರುವ ವಿಚಾರದ ಬಗ್ಗೆ ಇಡೀ ರಾಬರ್ಟ್ ಟೀಂ ಸಂತಸ ವ್ಯಕ್ತಪಡಿಸಿದೆ.