ತೂಗುದೀಪ ಶ್ರೀನಿವಾಸ್‌ ಹಿರಿಯ ಪುತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಮೆಜೆಸ್ಟಿಕ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಇಂದಿಗೆ (ಫೆ.9, 2021) 19 ವರ್ಷ.  ಸೆಟ್‌ ಬಾಯ್‌ ಆಗಿದ್ದ ಹುಡುಗ ಅಸಿಸ್ಟೆಂಟ್ ಡೈರೆಕ್ಟರ್ ಆಗಿ, ಆನಂತರ ನಟನಾಗಿ, ಇದೀಗ ಬಾಕ್ಸ್ ಆಫೀಸ್‌ ಸುಲ್ತಾನ್‌ ಆಗಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಚಾರ.

ರಾಬರ್ಟ್ ತೆಲುಗು ಡಬ್ಬಿಂಗ್ ರೈಟ್ಸ್ ಎಷ್ಟು ಮೊತ್ತಕ್ಕೆ ಮಾರಾಟವಾಗಿದೆ ಗೊತ್ತಾ? 

ಪಿ ಎನ್ ಸತ್ಯ ನಿರ್ದೇಶನದಲ್ಲಿ ಮೂಡಿ ಬಂದ ಮೆಜೆಸ್ಟಿಕ್  ಚಿತ್ರ 19 ವರ್ಷ ಪೂರೈಸಿದ ಪ್ರಯುಕ್ತ ದರ್ಶನ್ ನಿವಾಸದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ ಅಭಿಮಾನಿಗಳು.  ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಮಾಸ್ ಚಿತ್ರದ ಮೂಲಕ ಎಂಟ್ರಿ ಕೊಟ್ಟ ದರ್ಶನ್‌ ಅವರನ್ನು ಇಂದಿಗೂ ಅಭಿಮಾನಿಗಳು ಮಾಸ್‌ ಹೀರೋ ರೀತಿಯಲ್ಲಿ ಕಾಣಲು ಬಯಸುತ್ತಾರೆ. 

ಸೋಲು ಗೆಲುವುಗಳ ನಡುವೆ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ, ಪುಟ್ಟ ಮಕ್ಕಳಿಂದಸ ವೃದ್ಧರವರೆಗೂ ಪ್ರೀತಿ ಪಾತ್ರರಾಗಿದ್ದಾರೆ ಸ್ಯಾಂಡಲ್‌ವುಡ್ ಸುಲ್ತಾನ್.  ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ದರ್ಶನ್ ಸಮಾಜಮುಖಿ ಕಾರ್ಯಗಳಲ್ಲೂ ಭಾಗಿಯಾಗಿದ್ದಾರೆ. ಅರಣ್ಯ ಇಲಾಖೆ ರಾಯಭಾರಿ ಹೊಣೆ ಹೊತ್ತ ನಂತರ, ಇದೀಗ ಕೃಷಿ ಇಲಾಖೆಯ ರಾಯಭಾರಿಯೂ ಆಗಿದ್ದಾರೆ. ರಾಬರ್ಟ್‌ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಡುತ್ತಿರುವ ದರ್ಶನ್ ಶೀಘ್ರದಲ್ಲಿಯೇ ನ್ಯಾಷನಲ್ ಸ್ಟಾರ್ ಆಗಲಿದ್ದಾರೆ.