ಕೊಲೆ ಆರೋಪದ ಮೇಲೆ ಜೈಲು ಸೇರಿರುವ ನಟ ದರ್ಶನ್, ತಮ್ಮ 49ನೇ ಹುಟ್ಟುಹಬ್ಬವನ್ನು ಕಂಬಿಗಳ ಹಿಂದೆ ಕಳೆಯುತ್ತಿದ್ದಾರೆ. ಈ ಕರಾಳ ಜನ್ಮದಿನದಂದು ದರ್ಶನ್ ಒಂಟಿಯಾಗಿದ್ದರೆ, ಹೊರಗಡೆ ಅವರ ಅಭಿಮಾನಿಗಳು ಅನ್ನದಾನ, ರಕ್ತದಾನ ಹಾಗೂ ಪೂಜೆಗಳ ಮೂಲಕ ತಮ್ಮ ನಾಯಕನಿಗೆ ಶುಭ ಕೋರುತ್ತಿದ್ದಾರೆ.
ಒಂದ್ ಕಡೆ ಭಾರತ ಪಾಕ್ ವಿಶ್ವ ಯುದ್ಧ ನೋಡಿ ಎಂಜಾಯ್ ಮಾಡಿದ್ದಾಯ್ತು. ಮತ್ತೊಂದ್ ಕಡೆ ಶಿವರಾತ್ರಿ ಜಾಗರಣೆ ಮಾಡಿ ಧವರಿಗೆ ಧನ್ಯೋಸ್ಮಿಯ ಎಂದಿದ್ದಾಯ್ತು. ಆದ್ರೂ ಇವತ್ತು ನಮ್ಮ ಎನರ್ಜಿ ಡಬಲ್ ಇದೆ ಎನ್ನುತ್ತಿದ್ದಾರೆ ನಟ ದರ್ಶನ್ ಫ್ಯಾನ್ಸ್.. ಯಾಕಂದ್ರೆ ದಚ್ಚುಗೆ ಇವತ್ತು ಹುಟ್ಟುಹಬ್ಬ. ಈ ಬರ್ತ್ಡೇ ಬಂದ್ರೆ ದರ್ಶನ್ ಮನೆ ಮುಂದೆ ಸಾವಿರಾರು ಜನ ಭಕ್ತ ಅಭಿಮಾನಿಗಳು ಕಣ್ಣಿಗೆ ಕಾಡೋದು ಸಹಜ. ಆದ್ರೆ ಈ ವರ್ಷ ದರ್ಶನ್ ಜೈಲಿನಲ್ಲೇ ಬರ್ತ್ಡೇ ವಿಶ್ ಪಡೆದಿದ್ದಾರೆ. ಹಾಗಾದ್ರೆ ದಾಸನ ಹುಟ್ಟುಹಬ್ಬ ಹೇಗಿರುತ್ತೆ? ಫ್ಯಾನ್ಸ್ ಏನೆಲ್ಲಾ ಮಾಡುತ್ತಿದ್ದಾರೆ ನೋಡೋಣ ಬನ್ನಿ.
ದಚ್ಚು ಅಭಿಮಾನಿಗಳಿಗೆ ಇವತ್ತು ಪರಮಾನ್ನ..!
ನಟ ದರ್ಶನ್. ಕನ್ನಡ ಚಿತ್ರರಂಗದಲ್ಲಿ ಬೆಳೆದು 100 ಕೋಟಿಗೂ ಹೆಚ್ಚು ನೆಟ್ ವರ್ತ್ ಇರೋ ನಟ. ಮನೆಯಲ್ಲಿ ಆಳು ಕಾಳು. ಮನೆಯ ಹೊರಗಡೆ ಜೈ ಕಾರ ಹಾಕೋ ನೂರಾರು ಜನ ಫ್ಯಾನ್ಸು. ನೆಮ್ಮದಿ ತುಂಬಿದ ಸುಖೀ ಜೀವನ ನಡೆಸುತ್ತಿದ್ದ ದರ್ಶನ್ ಕೊ*ಲೆ ಆರೋಪ ಹೊತ್ತು ಜೈಲು ಸೇರಿಬಿಟ್ರು. ಇದು ಅವರ ಫ್ಯಾನ್ಸ್‌ಗೆ ಇಂದಿಗೂ ದೊಡ್ಡ ಶಾಕ್. ಆದ್ರೆ ಆ ನೋವು ಮರೆತು ದರ್ಶನ್ ಮೇಲೆ ಅಭಿಮಾನವನ್ನಷ್ಟೇ ತೋರಿಸೋ ಎಲ್ಲಾ ಫ್ಯಾನ್ಸ್‌ಗೆ ಇವತ್ತು ಪರಮಾನ್ನ. ಯಾಕಂದ್ರೆ ಇವತ್ತು ದಚ್ಚುಗೆ ಹುಟ್ಟುಹಬ್ಬ.
ನಟ ದರ್ಶನ್‌ಗೆ ಹುಟ್ಟುಹಬ್ಬದ ಸಂಭ್ರಮ ಅಂದ್ರೆ ತಪ್ಪಾಗುತ್ತೇನೋ. ಯಾಕಂದ್ರೆ ದಚ್ಚು ಮನದಲ್ಲಾಗಲಿ ಮನೆಯವರಲ್ಲಾಗಿ ಆ ಸಂಭ್ರಮ ಕಳೆದು ಹೋಗಿ ಎರಡು ವರ್ಷಗಳಾಯ್ತು. 2024ರ ಜೂನ್‌ನಲ್ಲಿ ರೇಣುಕಾಸ್ವಾಮಿ ಮರ್ಡರ್ ಮಾಡಿದ್ದಕ್ಕೆ ದರ್ಶನ್ ಜೈಲು ಸೇರಿದ್ರು. ಅಲ್ಲಿಂದ ಇಲ್ಲಿ ತನಕ ಎರಡು ವರ್ಷ ದಾಸ ಹುಟ್ಟುಹಬ್ಬ ಮಾಡಿಲ್ಲ. ಬರ್ತ್ಡೇ ದಿನ ಫ್ಯಾನ್ಸ್ ಮುಖವನ್ನ ನೋಡಿಲ್ಲ. ಅವರ ಕಿರುಚಾಟ ದಚ್ಚು ಕಿವಿಗೆ ಬಿದ್ದಿಲ್ಲ.
ನಟ ದರ್ಶನ್ ಪಾಲಿಗೆ ಇದು ಕರಾಳ ಜನ್ಮದಿನೋತ್ಸವ!
ಯೆಸ್, ನಟ ದರ್ಶನ್ 49ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಆದ್ರೆ ತನ್ನ 48 ವರ್ಷದ ಜೀವಿತಾವಧಿಯಲ್ಲಿ ದರ್ಶನ್ ಈ ವರ್ಷದ ಹುಟ್ಟುಹಬ್ಬವನ್ನ ಎಂದಿಗೂ ಮರೆಯಲು ಸಾಧ್ಯವಿಲ್ಲ. ಯಾಕಂದ್ರೆ ಅಷ್ಟೂ ವರ್ಷ ಮನೆಯವರ ಜೊತೆ ಫ್ಯಾನ್ಸ್ ಜೊತೆ ಕೇಕ್ ಕಟ್ ಮಾಡಿರೋ ದಾಸ ಈ ಭಾರಿ ಒಂಟಿ. ಕೇಕ್ ಇಲ್ಲ ಫ್ಯಾನ್ಸ್ ನ ನೇರವಾಗಿ ನೋಡಿ ಶುಭಾಷಯ ಪಡೆಯಲಾಗಲ್ಲ. ಫ್ರೆಂಡ್ಸ್ ಜೊತೆ ಪಾರ್ಟಿಯಂತೂ ಇಲ್ಲವೇ ಇಲ್ಲ. ಈ ವರ್ಷ ಜೈಲಿನಲ್ಲೇ ಇದ್ದಾರೆ ದರ್ಶನ್.
ಕಳೆದ ವರ್ಷ ಹೆಂಡತಿ ಮಗನ ಜೊತೆ ಜನ್ಮದಿನ ಆಚರಿಸಿದ್ದ ದರ್ಶನ್.!
ಯಾರು ಏನೇ ಹೇಳಲಿ. ಆರ್ ಆರ್ ನಗರದ ಮನೆ ಮುಂದೆ ಫ್ಯಾನ್ಸ್ ಜೊತೆ ಬರ್ತ್ಡೇ ಆಚರಿಸೋದನ್ನ ನಿಲ್ಲಿಸಿದವರಲ್ಲ ದರ್ಶನ್. ಅಕ್ಕ ಪಕ್ಕದವರು ಎಷ್ಟೇ ಬೈದ್ರು, ತಲೆ ಕೆಡಿಸಿಕೊಳ್ಳದೇ ಅಭಿಮಾನಿಗಳಿಗಾಗಿ ಮನೆಯ ಮುಂದೆಯೇ ಸಿಗುತ್ತಿದ್ರು ದಾಸ. ಕಳೆದ ವರ್ಷ ಹುಟ್ಟುಹಬ್ಬದ ಸಮಯಕ್ಕೆ ಸರಿಯಾಗಿ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿದ್ದ ಕಾಟೇರ, ಫ್ಯಾನ್ಸ್ ಜೊತೆಗಿನ ಬರ್ತ್ಡೇಗೆ ಬ್ರೇಕ್ ಹಾಕಿ, ಯಾರ ಕಣ್ಣಿಗೂ ಬೀಳದೇ ಹೆಂಡತಿ ಮಗನ ಜೊತೆ ಹುಟ್ಟುಹಬ್ಬ ಮಾಡಿದ್ರು. ದರ್ಶನ್ ಪತ್ನಿ ದಾಸನ ಫ್ಯಾನ್ಸ್‌ಗಾಗಿ ವಿಶೇಷ ಫೋಟೋವನ್ನ ಹಂಚಿಕೊಂಡಿದ್ರು. ಆದ್ರೆ ಈ ಭಾರಿ ಅದು ಕೂಡ ಸಾಧ್ಯವಾಗುತ್ತಿಲ್ಲ.
ದರ್ಶನ್ ಹುಟ್ಟುಹಬ್ಬಕ್ಕೆ ಸಾವಿರಾರು ಜನ ಫ್ಯಾನ್ಸ್ ಆರ್ ಆರ್ ನಗರದ ನಿವಾಸದ ಮುಂದೆ ಕ್ಯೂ ನಿಲ್ಲುತ್ತಿದ್ದದ್ದು ಈಗ ಇತಿಹಾಸ. ಕೇಕು ಹಾರ ಹಿಡಿದು ಡಿ ಬಾಸ್ ಅಂತ ಕಿರುಚಿ ಒಂದಿಡೀ ದಿನ ಸಂಭ್ರಮಿಸುತ್ತಿದ್ದು ಈಗ ಗತವೈಭವ. ಆಗೆಲ್ಲಾ ಅಭಿಮಾನಿಗಳ ಶುಭಾಷಯ ಪಡೆದು ಕೈ ಕುಲುಕಿ ಸುಸ್ತ್ ಆಗುತ್ತಿದ್ರು ದರ್ಶನ್. ಆ ಅಭಿಮಾನ ದೃಶ್ಯವನ್ನ ನೋಡಿದ್ರೆ ದರ್ಶನ್ ಫ್ಯಾನ್ಸ್‌ಗೆ ಬೇಸರವಾಗೋದಂತು ನಿಜ. ಇಂತಹ ದರ್ಶನ್ ಈಗ ಕಂಬಿ ಹಿಂದೆ ಇದ್ದಾರಲ್ಲಾ ಅಂತ ನೋವಾಗೋದಂದು ಸತ್ಯ..
ದಚ್ಚುಗಾಗಿ ದೇವರ ಮುಂದೆ ಫ್ಯಾನ್ಸ್ ಹರಕೆ, ಪೂಜೆ..!
ಐಶಾರಾಮಿ ಬದುಕು, ಲಕ್ಷಾಂತರ ಜನ ಪ್ರೀತಿಯಲ್ಲಿ ಮಿಂದೇಳುತ್ತಿದ್ದ ದರ್ಶನ್ ಇವತ್ತು ಒಂಟಿ. ಆದ್ರೆ ಅದು ಜೈಲಿನಲ್ಲಿ. ಹೊರಗಡೆ ದಾಸನಿಗಾಗಿ ಡೈ ಹಾರ್ಡ್ ಫ್ಯಾನ್ಸ್ ಪೂಜೆ ಮಾಡಿ ಹರಕೆ ಕಟ್ಟುತ್ತಿದ್ದಾರೆ. ನಮ್ ಬಾಸ್ ಎಲ್ಲೆ ಇದ್ರು ಚನ್ನಾಗಿಲಪ್ಪಾ ಅಂತ ದೇವರಲ್ಲಿ ಬೇಡುತ್ತಿದ್ದಾರೆ. ರಕ್ತದಾನ, ಅನ್ನದಾನ ಮಾಡುತ್ತಿದ್ದಾರೆ. ಪೂಜೆ ಪುನಸ್ಕಾರಗಳು ದರ್ಶನ್ ಹೆಸರಲ್ಲಿ ಜೋರಾಗಿ ನಡೆಯುತ್ತಿವೆ.
ಜನ್ಮದಿನದಂದು ಗಂಡನ ಭೇಟಿ ಮಾಡುತ್ತಾರಾ ವಿಜಯಲಕ್ಷ್ಮಿ?
ದರ್ಶನ್ ಜೈಲಲ್ಲಿ ಕೇಕ್ ಕಟ್ ಮಾಡೋ ಹಾಗಿಲ್ಲ. ಆದ್ರೂ ಅಲ್ಲಿರೋ ಒಂದಿಷ್ಟು ದರ್ಶನ್ ಅಭಿಮಾನಿಗಳು ದಾಸನಿಗೆ ಶುಭಾಷಯ ಹೇಳೋ ಅವಕಾಶವಂತೂ ಸಿಗುತ್ತೆ. ಬರ್ತ್ಡೇ ಬಂದ್ರೆ ನೂರಾರು ಜನ ಫ್ಯಾನ್ಸ್ ಹಾಗು ಫ್ರೆಂಡ್ಸ್ ಮಧ್ಯೆಯೇ ಕಳೆದು ಹೋಗುತ್ತಿದ್ದ ದರ್ಶನ್ ಎದುರು ಇವತ್ತು ಯಾರು ಇಲ್ಲ. ಇರೋದು ಅವರ ಪತ್ನಿ ವಿಜಯಲಕ್ಷ್ಮಿ ಹಾಗು ಮಗ ವಿನೀಶ್. ಹೀಗಾಗಿ ದರ್ಶನ್‌ಗೆ ವಿಶ್ ಮಾಡೋಕೆ ವಿಜಯಲಕ್ಷ್ಮೀ ಪರಪ್ಪನ ಅಗ್ರಹಾರ ಜೈಲಿಗೆ ಹೋಗುತ್ತಾರೆ ಅಂತ ಹೇಳಲಾಗ್ತಿದೆ. ಅಭಿಮಾನಿಗಳ ಶುಭ ಹಾರೈಕೆಯಲ್ಲಿ ವಿಜಯಲಕ್ಷ್ಮೀ ದರ್ಶನ್‌ಗೆ ಹೇಳಿ ಬರುತ್ತಾರಂತೆ. ಎನಿ ವೇ 49ನೇ ವಸಂತಕ್ಕೆ ಕಾಲಿಟ್ಟಿರೋ ದರ್ಶನ್‌ಗೆ ಇನ್ಮುಂದಾದ್ರು ಒಳ್ಳೇದಾಗುತ್ತಾ ಕಾದು ನೋಡಬೇಕು.
ಫಿಲ್ಮ್ ಬ್ಯೂರೋ ಏಷ್ಯಾನೆಟ್ ಸುವರ್ಣ ನ್ಯೂಸ್


