ಬೆಂಗಳೂರು(ಮೇ.15): ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಭಾರತೀ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆದ ಬೆಳೆಗೆ ಬೆಲೆ ಇಲ್ಲದೆ ಜಮೀನಿನಲ್ಲಿ ಕೊಳೆಯುತ್ತಿದೆ. ಇದೀಗ ಟೋಮ್ಯಾಟೋ ಸೇರಿದಂತೆ ಹಲವು ಬೆಳೆಗಳನ್ನು ಸೂಕ್ತ ಬೆಲೆ ಸಿಗದೆ ರಸ್ತೆಗೆ ಚೆಲ್ಲಿದ ಘಟನೆಗಳು ಇತ್ತೀಚೆಗೆ ವರದಿಯಾಗಿದೆ. ಈ ಪರಿಸ್ಥಿತಿ ಗಮನಿಸಿದ ಸ್ಯಾಂಡಲ್‌ವುಡ್ ಸ್ಟಾರ್ ಉಪೇಂದ್ರ ಇದೀಗ ರೈತರ ಸಂಕಷ್ಟಕ್ಕೆ ನೆರವಾಗಲು ಸಜ್ಜಾಗಿದ್ದಾರೆ. ರೈತರ ಬೆಳೆಗೆ ಸೂಕ್ತ ಬೆಲೆ ನೀಡಿ ಖರೀದಿಸುವ ಭರವಸೆ ನೀಡಿದ್ದಾರೆ.

3,000 ಸಿನಿ ಕಾರ್ಮಿಕರಿಗೆ ಉಪ್ಪಿ, ಸುದೀಪ್, ಲೀಲಾವತಿ ಊಟ

ಲಾಕ್‌ಡೌನ್‌ನಿಂದ ಕಂಗಲಾಗಿದ್ದ ಸಿನಿ ಕಾರ್ಮಿಕರಿಗೆ ನೆರವು ನೀಡಿದ್ದ ಉಪೇಂದ್ರ ಇದೀಗ ಮತ್ತೊಂದು  ಮಹತ್ವಗ ಹೆಜ್ಜೆ ಇಟ್ಟಿದ್ದಾರೆ. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ನೀಡಿ ಅವರಿಂದ ಖರೀದಿಸಿದ ಅವಶ್ಯಕತೆ ಇರುವವರಿಗೆ ಹಂಚುತ್ತೇವೆ. ಇದಕ್ಕಾಗಿ ಮೇ. 24ರೊಳಗೆ ಕರೆ ಮಾಡಿ ಮಾಹಿತಿ ನೀಡಲು ರೈತರಿಗೆ ಉಪೇಂದ್ರ ಮನವಿ ಮಾಡಿದ್ದಾರೆ.

 

ರೈತರು ಬೆಳೆದ ಬೆಲೆ, ಎಷ್ಟು ಕೆಜಿ, ಕ್ವಿಂಟಾಲ್ ಇದೆ, ಅಂತಿಮ ಬೆಲೆ, ಬೆಂಗಳೂರಿಗೆ ಸಾಗಿಸಲು ಸಾರಿಗೆ ವೆಚ್ಚ ಎಷ್ಟು? ಈ ಕುರಿತ ಮಾಹಿತಿಗಳನ್ನು ವ್ಯಾಟ್ಸ್‌ಆ್ಯಪ್ ನಂಬರ್‌ಗೆ ಕಳಹಿಸಿಕೊಡಲು ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ.

ವಿಶೇಷ ಅಂದರೆ ರೈತರ ಬಳಿ ತೆರಳಿ ಅವರಿಂದ ಫಲಸು ಖರೀದಿಸಿ ಅದನ್ನು ಬೆಂಗಳೂರು ಅಥವಾ ಬೇರೆಡೆ ಅಗತ್ಯವಿರುವವರಿಗೆ ಹಂಚಲು ಉಪೇಂದ್ರ ಕಾರ್ಯತಂತ್ರ ರೂಪಿಸಿದ್ದಾರೆ. ಈಗಾಗಲೇ ಕೊರೋನಾ ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರು, ಬಡವರಿಗೆ ಉಪೇಂದ್ರ ಉಚಿತ ಆಹಾರ ಕಿಟ್ ವಿತರಿಸುತ್ತಿದ್ದಾರೆ. ಇದೀಗ ಈ ರೈತರಿಗೆ ಸೂಕ್ತ ಬೆಲೆ ನೀಡಿ ಅವರಿಂದ ಖರೀದಿಸಿದ ಬೆಳೆಯನ್ನು ಕಿಟ್ ಮೂಲಕ ವಿತರಿಸಲು ಉಪೇಂದ್ರ ಮುಂದಾಗಿದ್ದಾರೆ.

ಲಾಕ್ ಆದ ರೈತರ ಬದುಕು : ಲೋಡ್‌ಗಟ್ಟಲೆ ಬೆಳೆದ ಬೆಳೆಗಳು ರಸ್ತೆ ಪಾಲು

ಸರ್ಕಾರ ಮಾಡಬೇಕಿರುವ ಕೆಲಸಗಳನ್ನು ಉಪೇಂದ್ರ ಮಾಡುತ್ತಿದ್ದಾರೆ. ಉಪೇಂದ್ರ ಮೊದಲಿನಿಂದಲೂ ಸಾಮಾಜಿಕ ಕೆಲಸಗಳಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಜಾಕಿಯ ರಾಜಕೀಯ ಪಕ್ಷ ಹುಟ್ಟು ಹಾಕಿರುವ ಉಪೇಂದ್ರ ಇದೀಗ ಸಾಮಾಜಿಕ ಕಾರ್ಯಗಳ ವೇಗ ಹೆಚ್ಚಿಸಿದ್ದಾರೆ.