ಮಾಗಡಿ ರಸ್ತೆಯಲ್ಲಿ ಡಾ.ವಿಷ್ಣುವರ್ಧನ್‌ ಪ್ರತಿಮೆ ಧ್ವಂಸವಾದ ವಿಚಾರ ದಿನೆ ದಿನೇ ತಿರುವು ಪಡೆದುಕೊಳ್ಳುತ್ತಿದೆ. ಇದಕ್ಕೆಲ್ಲಾ ಕಾರಣ ಖ್ಯಾತ ನಟನ ಕುಟುಂಬ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವು ಕಿಡಿಗೇಡಿಗಳು ಪ್ರಚಾರ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ಅಭಿಮಾನಿಗಳು ಗಂಭೀರ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ದೂರು ನೀಡಿದ್ದಾರೆ..

ವಿಷ್ಣು ಪ್ರತಿಮೆ ಧ್ವಂಸ: ಆಕ್ರೋಶ ವ್ಯಕ್ತ ಪಡಿಸಿದ ದರ್ಶನ್‌, ಸುದೀಪ್! 

ಏನಿದು ಪೋಸ್ಟ್?:
ವಿಷ್ಣು ಪ್ರತಿಮೆ ಧ್ವಂಸ ಮಾಡಲು ಕಾರಣ ಕೆಲವು ನಿರ್ದೇಶಕ ಹಾಗೂ ನಿರ್ಮಾಪಕರು ಎಂದು ಮಾತನಾಡಿಕೊಳ್ಳುತ್ತಿದ್ದವರು, ಈಗ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುವ ಫೋಸ್ಟ್‌ ನೋಡಿ ಶಾಕ್ ಆಗಿದ್ದಾರೆ. ವಿಷ್ಣು ಪ್ರತಿಮೆಗೆ ಹೀಗೆ ಆಗಲು ಡಾ.ರಾಜ್‌ಕುಮಾರ್ ಹಾಗೂ ಶಿವರಾಜ್‌ಕುಮಾರ್ ಕುಟುಂಬವೇ ಕಾರಣ ಎಂದು ಎಲ್ಲೆಡೆ ಪೋಸ್ಟ್‌ ಹರಿಯ ಬಿಡುತ್ತಿದ್ದಾರೆ. ರಾಜ್‌ ಕುಟುಂಬ ಹಾಗೂ ವಿಷ್ಣು ಕುಟುಂಬ ಉತ್ತಮ ಸಂಬಂಧ ಹೊಂದಿದ್ದು ಮಸಿ ಬಳಿಯಬೇಕೆಂದು ಹೀಗೆ ಮಾಡುತ್ತಿದ್ದಾರೆ,  ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ..

ರಾಜ್‌ಕುಮಾರ್ ಹಾಗೂ ಶಿವರಾಜ್‌ಕುಮಾರ್ ಅಭಿಮಾನಿಗಳು ನಿನ್ನೆ ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದ ಬಳಿ ಪ್ರತಿಭಟನೆ ಮಾಡಿದ್ದಾರೆ. ಆನಂತರ ಮಾಗಡಿ ರಸ್ತೆ ಪೊಲೀಸ್‌ ಠಾಣೆಗೆ ಒಟ್ಟಾಗಿ ತೆರಳಿ ದೂರು ಸಹಿ ಮಾಡಿದ್ದಾರೆ.