ಮಕ್ಕಳಿಂದ ಹಿಡಿದು ವೃದ್ಧರಿಗೂ ಇಷ್ಟವಾಗುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್. ಕಲಾ ಬಂಧುಗಳಿರಲಿ, ಸ್ನೇಹಿತರಿರಲಿ ಅಥವಾ ಅಭಿಮಾನಿಗಳೇ ಇರಲಿ ತಮ್ಮ ನಿವಾಸದ ಬಳಿ ಬಂದರೆ ನಿರಾಸೆಗೊಳಿಸದೇ ಪ್ರೀತಿ ತೋರಿಸಿ, ಮಾತನಾಡಿ ತಮ್ಮ ಕೈಲಾದಷ್ಟು  ಸಹಾಯ ಮಾಡಿ ಕಳುಹಿಸುತ್ತಾರೆ. ಈ ಗುಣಕ್ಕೆ ದರ್ಶನ್ ಎಲ್ಲರಿಗೂ ತುಂಬಾನೇ ಇಷ್ಟವಾಗುತ್ತಾರೆ.

ಬಿಡುವಿನ ವೇಳೆ ಅಡುಗೆ ಕಲಿತ ಶಿವರಾಜ್ ಕೆ ಆರ್ ಪೇಟೆ! 

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದ ಕಲಾವಿದ ಶಿವರಾಜ್‌ ಕೆಲವು ಚಿತ್ರಗಳಲ್ಲಿ ದರ್ಶನ್‌ ಜೊತೆ ಅಭಿನಯಿಸಿದ್ದಾರೆ. ಈ ಮೂಲಕ ದಚ್ಚು ಜೊತೆ ಉತ್ತಮ ಮೈತ್ರಿ ಹೊಂದಿದ್ದಾರೆ. ಶಿವರಾಜ್‌ ಪುತ್ರ ವಂಶಿಕ್‌ಗೆ ದರ್ಶನ್‌ ಬಿಗ್ ಫ್ಯಾನ್‌ ಆಗಿರುವ ಕಾರಣ ಈ ವರ್ಷದ ಹುಟ್ಟು ಹಬ್ಬವನ್ನು ಮೈಸೂರಿನಲ್ಲಿರುವ ದರ್ಶನ್ ಫಾರ್ಮ್‌ಹೌಸ್‌ನಲ್ಲಿ ಆಚರಿಸಿಕೊಂಡಿದ್ದಾರೆ.

'ಇವತ್ತು ಮೊದಲ ಮಗ ವಂಶಿಕ್'ನ ಹುಟ್ಟಿದ ದಿನ. ನಮಗೆ ಅದು ಹಬ್ಬ. ಆದ್ರೆ ಈ ವರ್ಷ ಅವನಿಗೆ ಹುಟ್ಟಿದ ಹಬ್ಬದ ಸಂಭ್ರಮಕ್ಕೆ ದುಪ್ಪಟ್ಟು ಖುಷಿ. ಅವನಿಗೆ ಮಾತ್ರ ಅಲ್ಲ, ನಮಗೂ ಕೂಡ. ಹೆಚ್ಚು ಕಡಿಮೆ ಮೂರು ವರ್ಷ ಮಗುವಿದ್ದಾಗಿನಿಂದ ಅವನಿಗೆ ಬಾಸ್ ದರ್ಶನ್ ಅಂದರೆ ಅಚ್ಚು ಮೆಚ್ಚು. ಅದಕ್ಕೆ ಅವನ ಆಸೆಯಂತೆ ಇವತ್ತು ದರ್ಶನ್ ಸರ್ ಅವರನ್ನ ಮೀಟ್ ಮಾಡಿಸಿ, ಅವರ ಜೊತೆಗೆ ಕೇಕ್ ಕತ್ತರಿಸಿ ಸಂಭ್ರಮ ಪಟ್ಟೆವು. ನನ್ನ ಮಗನನ್ನು ಪ್ರೀತಿಯಿಂದ ಮಾತಾಡಿಸಿ, ಅವನಿಗೆ ತಾವೇ ತೆಗೆದ ವನ್ಯಜೀವಿ ಫೋಟೊವನ್ನು ಕೂಡ ಗಿಫ್ಟ್ ಆಗಿ ಕೊಟ್ಟರು. ಕಿರಿಯರ ಮೇಲಿನ ಅವರ ಪ್ರೀತಿಗೆ ನಾನು ನನ್ನ ಕುಟುಂಬ ಋಣಿ. ಥ್ಯಾಂಕ್ಯು ಡಿ ಬಾಸ್,' ಎಂದು ಶಿವರಾಜ್‌ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.