ಕಿಚ್ಚ ಸುದೀಪ್ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದು ಸಲ್ಮಾನ್ ಖಾನ್ ಜೊತೆ ದಬಾಂಗ್-3 ಶೂಟಿಂಗ್ ಸೆಟ್ ನಲ್ಲಿದ್ದಾರೆ.  

ಶೂಟಿಂಗ್ ಸಮಯದಲ್ಲಿ ಬಿಡುವಾದಾಗ ಅಜಯ್ ದೇವಗನ್ ರನ್ನು ಭೇಟಿ ಮಾಡಿದ್ದಾರೆ. ’ ಅವರು ನಿಜಕ್ಕೂ ಜಂಟಲ್ ಮೆನ್. ನಿಮ್ಮನ್ನು ಭೇಟಿ ಮಾಡಿದ್ದು ನನ್ನ ಸೌಭಾಗ್ಯ ಅಜಯ್ ದೇವಗನ್ ಸರ್ ಎಂದು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.

 


ಈ ಟ್ವೀಟ್ ಗೆ ಸುದೀಪ್ ಪತ್ನಿ ಪ್ರಿಯಾ ಸುದೀಪ್ ರಿಯಾಕ್ಟ್ ಮಾಡಿದ್ದಾರೆ. 

ಅಜಯ್ ಗಿಂತ ಹೆಚ್ಚಾಗಿ ಅವರ ಪತ್ನಿಯನ್ನು ಮೀಟ್ ಮಾಡಿದ್ದರೆ ನೀನಿನ್ನೂ ಖುಷಿಪಡುತ್ತಿದ್ದೆ. ನೀನು ಕಾಜೋಲ್ ದೊಡ್ಡ ಅಭಿಮಾನಿ ಅಂತ ನಂಗೊತ್ತು ಎಂದು ಕಾಲೆಳೆದಿದ್ದಾರೆ.