ಅವರ ಮೇಲೆ ಈಗ ಬಿಗ್‌ಬಾಸ್ ಖ್ಯಾತಿಯ ಶಶಿ ರೇಗಾಡಿದ್ದಾರೆ. ಇಬ್ಬರಿಗೂ ವಾರ್ ನಡೆಯುವ ಸಾಧ್ಯತೆಗಳಿವೆ. ಮೈಸೂರಿನ ಜನರಿಗೀಗ ಮುಂದೇನು ಅನ್ನೋದೇ ಈಗ ಕುತೂಹಲ!

'Bro-in-Law' ಅಂತ ಹೇಳ್ತಾ 'ಜೊತೆ ಜೊತೆಯಲಿ' ಮಿಂಚುತ್ತಿರುವ ಮಾನ್ಸಿ ಯಾರು ?

ಇದು ‘ಮೆಹಬೂಬಾ’ ಚಿತ್ರದ ಒಂದು ಸನ್ನಿವೇಶ. ಬಿಗ್‌ಬಾಸ್ ಖ್ಯಾತಿಯ ಶಶಿ ಇದೇ ಮೊದಲು ನಾಯಕ ನಟರಾಗಿ ಅಭಿನಯಿಸುತ್ತಿರುವ ಚಿತ್ರ ಇದು. ‘ಗೊಂಬೆಗಳು ಲವ್’ ಖ್ಯಾತಿಯ ನಟಿ ಪಾವನಾ ಇದರ ನಾಯಕಿ. ಸ್ಕಂದ ಪ್ರಸನ್ನ ನಿರ್ಮಾಣದ ಈ ಚಿತ್ರಕ್ಕೆ ಅನೂಪ್ ಆ್ಯಂಟನಿ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ತಂಡ ಬೆಂಗಳೂರಿನ ಹೆಚ್‌ಎಂಟಿ ಫ್ಯಾಕ್ಟರಿ ಬಳಿ ಸೆಟ್ ಹಾಕಿದೆ. ಮೈಸೂರಿನ ಸರಸ್ವತಿ ಪುರಂ ಪೊಲೀಸ್ ಠಾಣೆಯನ್ನು ಸೆಟ್ ನಲ್ಲೇ ನಿರ್ಮಾಣ ಮಾಡಿದೆ. ಅಲ್ಲಿಗೀಗ ಬಾಲಿವುಡ್ ನಟ ಕಬೀರ್ ದುಹಾನ್ ಸಿಂಗ್ ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ಬಂದಿದ್ದಾರೆ.

'ಜೊತೆ ಜೊತೆಯಲಿ' ಝೆಂಡೆಗೆ ಟಾಂಗ್ ಕೊಡುವ ಮೀರಾ ಜೀ ರಿಯಲ್ ಲೈಫ್ ಹೀಗಿದ್ಯಾ!?

‘ಕಬೀರ್ ಸಿಂಗ್ ಅವರದು ಪೊಲೀಸ್ ಇನ್‌ಸ್ಪೆಕ್ಟರ್ ಪಾತ್ರ. ಅದಕ್ಕೊಂದಿಷ್ಟು ನೆಗೆಟಿವ್ ಶೇಡ್ ಇದೆ. ಠಾಣೆಗೆ ಬಂದವರ ಮೇಲೆ ವಿನಾಕಾರಣ ರೇಗಾಡಿ, ಸಿಟ್ಟು ತೋರಿಸುವ ವ್ಯಕ್ತಿ. ಚಿತ್ರದ ನಾಯಕ ಕೂಡ ಒಂದು ಪ್ರಕರಣದಲ್ಲಿ ಪೊಲೀಸ್ ಠಾಣೆಗೆ ಬರಬೇಕಾದ ಸಂದರ್ಭದಲ್ಲಿ ಅವರ ವರ್ತನೆ ಹೇಗಿರುತ್ತೆ, ಯಾಕಾಗಿ ಅವರು ಹಾಗೆ ಮಾಡುತ್ತಾರೆನ್ನುವುದು ಚಿತ್ರದ ಸನ್ನಿವೇಶ’ ಎನ್ನುತ್ತಾರೆ ನಿರ್ದೇಶಕ ಅನೂಪ್ ಆ್ಯಂಟನಿ.