Asianet Suvarna News Asianet Suvarna News

ನವೆಂಬರ್ 1ಕ್ಕೆ ಪುನೀತ್ ರಾಜ್‌ಕುಮಾರ್‌ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ; ಸಿಎಂ ಬೊಮ್ಮಾಯಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿ ಅನೇಕ ತಿಂಗಳುಗಳೇ ಆಗಿತ್ತು. ಇದೀಗ ಪ್ರಶಸ್ತಿ ಪ್ರದಾನ ಮಾಡುವ ದಿನಾಂಕ ಬಹಿರಂಗವಾಗಿದೆ. ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನದ ಉದ್ಘಾಟನೆ ಬಳಿಕ ಮಾಧ್ಯಮದ ಜೊತೆ  ಮಾತನಾಡಿದ  ಸಿಎಂ ಬೊಮ್ಮಾಯಿ ಈ ವಿಚಾರ ಬಹಿರಂಗ ಪಡಿಸಿದರು. 

CM Basavaraj Bommai reveals Posthumous Karnataka Ratna award to Puneeth Rajkumar on November 1 sgk
Author
Bengaluru, First Published Aug 5, 2022, 12:17 PM IST

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿ ಅನೇಕ ತಿಂಗಳುಗಳೇ ಆಗಿತ್ತು. ಇದೀಗ ಪ್ರಶಸ್ತಿ ಪ್ರದಾನ ಮಾಡುವ ದಿನಾಂಕ ಬಹಿರಂಗವಾಗಿದೆ. ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನದ ಉದ್ಘಾಟನೆ ಬಳಿಕ ಮಾಧ್ಯಮದ ಜೊತೆ  ಮಾತನಾಡಿದ  ಸಿಎಂ ಬೊಮ್ಮಾಯಿ ಈ ವಿಚಾರ ಬಹಿರಂಗ ಪಡಿಸಿದರು. 

ಕರ್ನಾಟಕ ರತ್ನ ಪ್ರಶಸ್ತಿ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದ್ದು, ರಾಜ್ಯ ಸರಕಾರ ಈ ಪ್ರಶಸ್ತಿಯನ್ನು ನೀಡುತ್ತದೆ. ಇಲ್ಲಿಯವರೆಗೆ 9 ಜನ ಗಣ್ಯರಿಗೆ ಈ ಪ್ರಶಸ್ತಿ ಸಂದಿದೆ. ಪುನೀತ್‌ ರಾಜ್‌ಕುಮಾರ್‌ ಈ ಪ್ರಶಸ್ತಿ ಪಡೆಯುತ್ತಿರುವ 10ನೇ ಸಾಧಕರಾಗಿದ್ದಾರೆ.

ಫಲಪುಷ್ಪ ಪ್ರದರ್ಶನದ ಬಗ್ಗೆ

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಇಂದಿನಿಂದ 10 ದಿನಗಳ   ಫಲ ಪುಷ್ಪಪ್ರದರ್ಶನ ಪ್ರಾರಂಭವಾಗಿದೆ. ಸಸ್ಯಕಾಶಿಯಲ್ಲಿ ಹೂಗಳ ಸುಂದರ ಲೋಕ ತಲೆಯೆತ್ತಲಿದೆ. ಈ ಬಾರಿಯ ವಿಶೇಷ ಎಂದರೆ ಡಾ.ಪುನೀತ್ ರಾಜ್ ಕುಮಾರ್ ಹಾಗೂ ಡಾ. ರಾಜ್ ಕುಮಾರ್ ಅವರಿಗೆ ಪುಷ್ಪ ನಮನ ಸಲ್ಲಿಸಲಾಗಿದೆ. ಕಬ್ಬನ್ ಪಾರ್ಕ್ ಹಾಗೂ ಊಟಿ ಸಸ್ಯತೋಟ ಸೇರಿ ದೇಶ-ವಿದೇಶದಿಂದ ಬಂದ ಅಲಂಕಾರಿಕ ಹೂಗಳು ರಾರಾಜಿಸುತ್ತಿವೆ. ಈ ಬಾರಿ ಸುಮಾರು 15 ಲಕ್ಷಕ್ಕೂ ಹೆಚ್ಚು ಜನ ಫ್ಲವರ್ ಶೋಗೆ ಆಗಮಿಸುವ  ನಿರೀಕ್ಷೆ ಇದೆ. ಇಂದು (ಆಗಸ್ಟ್ 5) ನಡೆದ ಉದ್ಘಾಟನ ಸಮಾರಂಭದಲ್ಲಿ ರಾಜ್ ಕುಟುಂಬದ ಸದಸ್ಯರು ಹಾಗೂ ಶಕ್ತಿಧಾಮದ ಮಕ್ಕಳೂ ಸಹ ಭಾಗಿಯಾಗಿದ್ದರು.ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಸಚಿವ ಮುನಿರತ್ನ, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ, ಶಾಸಕ ಉದಯ್ ಬಿ. ಗರುಡಾಚಾರ್,ಡಾ. ಶಿವರಾಜ್‍ಕುಮಾರ್, ಡಾ. ರಾಘವೇಂದ್ರ ರಾಜ್‍ಕುಮಾರ್,  ಅಶ್ವಿನಿ ಪುನೀತ್ ರಾಜ್‍ಕುಮಾರ್ ಭಾಗಿಯಾಗಿದ್ದರು. 

ಅಭಿಮಾನಿಗಳ ಪ್ರೀತಿಗೆ ಕೊನೆಯಿಲ್ಲ; ಅಪ್ಪು ಭಾವಚಿತ್ರ ಹಿಡಿದು ಕಾವಡಿ ಸಲ್ಲಿಸಿದ ಆಂಧ್ರ ಫ್ಯಾನ್ಸ

ಸಿಎಂ ಬೊಮ್ಮಾಯಿ ಮಾತು

'ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ, ಈ ವರ್ಷ ಡಾ ರಾಜ್ ಮತ್ತು ಪುನೀತ್ ಸ್ಮರಣಾರ್ಥವಾಗಿ ಮಾಡುತ್ತಿದೆ.ಈ ಬಾರಿಯ ಪ್ಲವರ್ ಶೋ ಉತ್ತಮವಾಗಿದೆ.ಜನ ಈ ಬಾರಿ ಹೆಚ್ಚು ಸಂಖ್ಯೆಯಲ್ಲಿ ಬರಬೇಕ' ಎಂದರು. ಇದೇ ವೇಳೆ ಕರ್ನಾಟಕ ರತ್ನ ಪ್ರಶಸ್ತಿ ಬಗ್ಗೆ ಮಾತನಾಡಿದ ಸಿಎಂ,ಈ ಬಾರಿ ನವೆಂಬರ್ 1ಕ್ಕೆ ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಕೊಡಲಿದ್ದೇವೆ.ಇದಕ್ಕಾಗಿ ತಯಾರಿಗೆ ಕಮಿಟಿ ರಚನೆ ಮಾಡಿದ್ದೇವೆ.ಡಾ.ರಾಜ್ ಕುಟುಂಬ ಸದಸ್ಯರು ಇರ್ತಾರೆ.ನಮಗೆ ಕರ್ನಾಟಕ ರತ್ನ ನೀಡಲು ಸಂಭ್ರಮವಾಗುತ್ತಿದೆ' ಎಂದು ಸಿ ಎಂ ಹೇಳಿದರು. 

ಶಿವಣ್ಣ ಮಾತು 

ಈ ವೇಳೆ ಮಾತನಾಡಿದ ಶಿವರಾಜ್ ಕುಮಾರ್, ಅಪ್ಪು ಯಶಸ್ಸು ಆತನ ಜೀವನ ಹೇಳಿಕೆಗೆ ನಿಲುಕದ್ದು. ತುಂಬಾ ನೋವಿನಿಂದ ಮಾತಾನಾಡುವ ಪರಿಸ್ಥಿತಿ. ಅಪ್ಪು ಸದಾ ಜೊತೆಗೆ ಇರ್ತಾರೆ.ಅಪ್ಪ - ಅಮ್ಮ ಅಪ್ಪು ಸದಾ ಜೊತೆಗೆ ಇರ್ತಾರೆ.ಅಪ್ಪು ಹೂವಿನಂತೆ ಸದಾ ಪ್ರೆಶ್.ಅಪ್ಪು, ಅಪ್ಪನ ಆಸೆ ಹೂವಿನ ರೂಪದಲ್ಲಿ ಪ್ರೀತಿಯಿಂದ ಬಂದಿದೆ.ಹೀಗಾಗಿ ಅದು ಅತ್ಯುತ್ತಮವಾಗಿ  ಮೂಡಿಬಂದಿದೆ ಎಂದರು. 

ಲಕ್ಕಿಮ್ಯಾನ್‌ನಲ್ಲಿ ದೇವರಾದ ಪುನೀತ್; ಅಪ್ಪು ನೋಡಿ ಫ್ಯಾನ್ಸ್ ಫುಲ್ ಖುಷ್

ರಾಘವೇಂದ್ರ ರಾಜ್ ಕುಮಾರ್ ಮಾತು

ನೋವು, ಖುಷಿ ಎಲ್ಲವೂ ಮಿಶ್ರಿತವಾಗಿದೆ.ಅಪ್ಪು ಅಪ್ಪನ ಜೀವನದೊಳಗೆ ಹೋಗಿ ಬಂದಂತೆ ಭಾಸವಾಯ್ತು.ಅದ್ಭುತವಾಗಿ ಫಲಫುಷ್ಪ ಪ್ರದರ್ಶನ ಮಾಡಿದ್ದಾರೆ
ಅವ್ರು ಪ್ರೀತಿಯಿಂದ ಮಾಡಿದ್ದಾರೆ. ಪದಗಳಿಗೆ ನಿಲುಕದ್ದು ಎಂದರು. 

Follow Us:
Download App:
  • android
  • ios