ಡ್ಯೂಡ್ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ ಚಿತ್ರಾಲ್ ರಂಗಸ್ವಾಮಿ. ಮಹಿಳಾ ಪ್ರಧಾನ ಸಿನಿಮಾದಲ್ಲಿ 12 ಹೆಣ್ಣು ಮಕ್ಕಳಿದ್ದಾರೆ.... 

ಕನ್ನಡ ಚಿತ್ರರಂಗದ ಸ್ಟ್ರಾಂಗ್ 12 ಹೆಣ್ಣು ಮಕ್ಕಳು ಮತ್ತು ಹಿರಿಯ ನಟ ರಂಗಾಯಣ ರಘು ಅಭಿನಯಿಸಿರುವ ಸಿನಿಮಾ ಡ್ಯೂಡ್ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಚಿತ್ರಾಲ್ ರಂಗಸ್ವಾಮಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಕಡಿಮೆ ಮಹಿಳಾ ಪ್ರಧಾನ ಸಿನಿಮಾಗಳು ಬರುತ್ತಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

'ಡ್ಯೂಡ್ ಒಂದು ಫೇಮೆಲ್ ಓರಿಯಂಟ್ ಸಿನಿಮಾ ನಮ್ಮ ಕನ್ನಡದಲ್ಲಿ ತುಂಬಾನೇ ಕಡಿಮೆ ಬರೋದು. ಬೇರೆ ಭಾಷೆಗಳಲ್ಲಿ ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್ ಸಿನಿಮಾಗಳನ್ನು ನೋಡಿದಾಗ ನಮ್ಮ ಕನ್ನಡದಲ್ಲಿ ಯಾಕೆ ಈ ರೀತಿ ಸಿನಿಮಾಗಳು ಬರುವುದಿಲ್ಲ ಬಂದ್ರೆ ಎಷ್ಟು ಚೆನ್ನಾಗಿದೆ ಅಲ್ವಾ ನಮಗೆ ಯಾಕೆ ಅವಕಾಶಗಳು ಸಿಗಲ್ಲ ಒಂದು ವೇಳೆ ಆಯ್ಕೆ ಮಾಡಿಕೊಂಡರೂ ಮೇಕಿಂಗ್ ಚೆನ್ನಾಗಿರುವುದಿಲ್ಲ ಈ ರೀತಿ ಹಲವು ಪ್ರಶ್ನೆಗಳು ನನಗೆ ಬರುತ್ತಿತ್ತು. ಕನ್ನಡದಲ್ಲಿ ಫೀಮೆಲ್ ಓರಿಯಂಟ್‌ ಸಿನಿಮಾಗಳನ್ನು ಮಾಡುವುದಕ್ಕೆ ನಿರ್ದೇಶಕರು ಭಯ ಪಡುತ್ತಾರೆ ಏಕೆಂದರೆ ಜನ ಒಪ್ಪಿಕೊಳ್ಳುತ್ತಾರೋ ಇಲ್ವೋ ಅನ್ನೋ ಯೋಚನೆ ನಮ್ದು ಹೀರೋ ಡಾಮಿನೇಟ್ ಮಾಡುವ ಇಂಡಸ್ಟ್ರಿ ಆಗಿದೆ' ಎಂದು ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

3 ತಿಂಗಳು ದುಬೈನಲ್ಲಿ ಬಾರ್‌ ಡ್ಯಾನ್ಸರ್‌ ಆಗಿದ್ದ ಕಿರುತೆರೆ ನಟಿ ಚಿತ್ರಾಲ್ ರಂಗಸ್ವಾಮಿ; ರೋಚಕ ಸಾಧನೆ ಕಥೆ ವೈರಲ್

'ಡ್ಯೂಡ್ ಸಿನಿಮಾದಲ್ಲಿ ಎರಡು ವಿಚಾರ ನನಗೆ ಇಷ್ಟವಾಗಿದ, ಒಂದು ಸ್ಪೂರ್ಟ್ಸ್‌ ಸಿನಿಮಾ ಡಿಫರೆಂಟ್ ಆಗಿದೆ ಯೂನಿಕ್ ಆಗಿದೆ ಇನ್ನೊಂದು ಮಹಿಳಾ ಪ್ರಧಾನ ಸಿನಿಮಾ. ಚಿತ್ರದಲ್ಲಿ ಪ್ರತಿಯೊಬ್ಬರ ಪರ್ಫಾರ್ಮೆನ್ಸ್‌ಗೆ ಅವಕಾಶವಿದೆ. ಮಂಡ್ಯದಿಂದ ಒಬ್ಬರಿದ್ದಾರೆ, ಕೋರ್ಗ್‌ನಿಂದ ಒಬ್ರು ಬಂದಿದ್ದಾರೆ....ನನ್ನ ಪಾತ್ರದ ನನಗೆ ಕ್ಯೂರಿಯಾಸಿಟಿ ಹೆಚ್ಚಾಗಿದೆ. ಸೋಷಿಯಲ್ ಮೀಡಿಯಾ ಮೂಲಕ ದಿನಕ್ಕೊಬ್ಬರಿಗೆ ಸ್ಫೂರ್ತಿಯಾಗಿರುತ್ತೀನಿ ಹೀಗಾಗಿ ಈ ಸಿನಿಮಾ ಮೂಲಕ ಹೇಗಿರಲಿದೆ ಎಂದು ನೋಡಬೇಕಕು' ಎಂದು ಚೈತ್ರಾ ಹೇಳಿದ್ದಾರೆ. 

ಡ್ರಗ್ಸ್, ರೇವು ಪಾರ್ಟಿ, ಆಡಿಶನ್ ಚಾನ್ಸ್, ಕಾಂಪ್ರಮೈಸ್ ಬಗ್ಗೆ ಕರಾಳ ಮುಖ ಬಿಚ್ಚಿಟ್ಟ ನಟಿ!

ಬಾರ್ ಡ್ಯಾನ್ಸರ್ ಕಥೆ:

'ಒಂದು ದಿನ ಡ್ಯಾನ್ಸ್‌ ಇವೆಂಟ್‌ ಇದೆ ಎಂದು 1 ಲಕ್ಷ 25 ಸಾವಿರ ಸಂಬಳ ಕೊಟ್ಟು ದುಬೈಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ನನ್ನ ಪಾಸ್‌ಪೋರ್ಟ್‌ ಸೀಜ್‌ ಮಾಡಿಕೊಂಡು ಒಂದು ರೂಮ್‌ನಲ್ಲಿ ಲಾಕ್‌ ಮಾಡಿ ಬಾರ್‌ ಡ್ಯಾನ್ಸರ್‌ ಆಗಲು ಹೇಳುತ್ತಾರೆ. ಅಲ್ಲಿ ಸಿಲುಕಿಕೊಂಡು ಕಷ್ಟ ಪಟ್ಟೆ. ವಾಪಸ್‌ ಕಳುಹಿಸಲು ಕೇಳಿಕೊಂಡರೂ ನನ್ನನ್ನು ಕರೆ ತರಲು ಇಷ್ಟು ಹಣ ಖರ್ಚಾಗಿದೆ ಕೊಟ್ಟರೆ ಬಿಡುವುದಾಗಿ ಹೇಳುತ್ತಾರೆ. ನನ್ನ ಬಳಿ ಹಣ ಇರಲಿಲ್ಲ. ನನ್ನನ ತಾಯಿಗೆ ಹೇಳಿದಾಗ ಚಿನ್ನ ಅಡವಿಟ್ಟು ಸಹಾಯ ಮಾಡುವುದಾಗಿ ಹೇಳುತ್ತಾರೆ. ಅಲ್ಲಿ ನಾನು 3 ತಿಂಗಳು ಉಳಿದುಕೊಂಡು ಬಾರ್ ಡ್ಯಾನ್ಸರ್‌ ಆಗಿದೆ. ರಾತ್ರಿ 9ಕ್ಕೆ ಶುರುವಾಗಿ ಬೆಳಗ್ಗೆ 4 ಗಂಟೆಗೆ ಮುಗಿಯುತ್ತಿತ್ತು. ಮೂರು ತಿಂಗಳು ಸೂರ್ಯನನ್ನು ನಾನು ನೋಡಿಲ್ಲ ದಿನಕ್ಕೆ 30 ಟೋಕನ್‌ ಪಡೆದರೆ ಮಾತ್ರ ಬೆಂಗಳೂರಿಗೆ ಹಿಂತಿರುಗಲು ಸಾಧ್ಯ. ಪ್ರತಿ ದಿನವೂ ಡಿಪ್ರೆಶನ್‌ನಲ್ಲಿ ಕಳೆದಿರುವೆ. ಬೆಂಗಳೂರಿಗೆ ಬಂದು ಆಡಿಷನ್ ಕೊಡುತ್ತಿದ್ದೆ ಎಲ್ಲರೂ ಚೆನ್ನಾಗಿದೆ ಎನ್ನುತ್ತಿದ್ದರು ಆದರೆ ಯಾರೂ ಅವಕಾಶ ಕೊಡುತ್ತಿರಲಿಲ್ಲ.' ಎಂದು ಚಿತ್ರಾಲ್ ಜೋಶ್ ಯುಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.