Darshan Thoogudeepa: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ತೂಗುದೀಪ ಅವರು ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆಯಾಗಿದೆ. ಜಾಮೀನಿಗೋಸ್ಕರ ದರ್ಶನ್‌ ಅವರು ಕೋರ್ಟ್‌ಗೆ ಅನೇಕ ಕಾರಣಗಳನ್ನು ಕೊಟ್ಟಿದ್ದಾರೆ. ಈಗ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಆಗಿದೆ. 

2025ರ ಆಗಸ್ಟ್ 14ರಂದು ಚಿತ್ರದುರ್ಗ ರೇಣುಕಾಸ್ವಾಮಿ ಅವೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ ಹಾಗೂ ಇತರ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಜಾಮೀನನ್ನು ರದ್ದುಗೊಳಿಸಿತ್ತು. ಆದರೆ ವಿಚಾರಣೆ ಮುಗಿದಿಲ್ಲ, ದರ್ಶನ್‌ಗೆ ರಿಲೀಫ್‌ ಇಲ್ಲದಂತಾಗಿದೆ. ಈಗ ಎಂಟು ತಿಂಗಳು ಕಳೆದರೂ ಕೂಡ ಸಾಕ್ಷಿಗಳ ವಿಚಾರಣೆ ಆಗಿಲ್ಲ. ಹೀಗಾಗಿ ದರ್ಶನ್‌ ಅವರಿಗೆ ಜಾಮೀನು ಸಿಗಬೇಕು ಎಂದು ದರ್ಶನ್ ಪರ ವಕೀಲರು ಸುಪ್ರೀಂಕೋರ್ಟ್‌ಗೆ ಹೊಸ ರಿಟ್ ಅರ್ಜಿ ಸಲ್ಲಿಸಿದ್ದರು.

ಎಂಟು ತಿಂಗಳಾದರೂ ವಿಚಾರಣೆ ಮುಗಿದಿಲ್ಲ

ಎಂಟು ತಿಂಗಳು ಕಳೆದರೂ ಕೂಡ ಈ ಸಾಕ್ಷಿಗಳ ವಿಚಾರಣೆ ಮುಕ್ತಾಯವಾಗಿಲ್ಲ. 273 ಸಾಕ್ಷಿಗಳ ಪೈಕಿ ಕೇವಲ 15 ಸಾಕ್ಷಿಗಳ ವಿಚಾರಣೆಯಷ್ಟೇ ಆಗಿದೆ. ಇದೇ ರೀತಿಯಾದರೆ ವಿಚಾರಣೆ ಮುಗಿಯಲು ಅನೇಕ ವರ್ಷಗಳೇ ಬೇಕು. ದರ್ಶನ್‌ಗೆ ಜಾಮೀನು ಮಂಜೂರು ಮಾಡಿ ಎಂದು ದರ್ಶನ್ ಪರ ವಕೀಲರು ಅರ್ಜಿಯಲ್ಲಿ ಹೇಳಿದ್ದಾರೆ. ನ್ಯಾಯಮೂರ್ತಿ ಪರ್ದೀವಾಲ ನೇತೃತ್ವದ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಲಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಏನು ವಿಚಾರಣೆ ಆಯ್ತು?

ಕನಿಷ್ಟ ಸೌಲಭ್ಯಗಳೂ ದರ್ಶನ್​ಗೆ ಸಿಗ್ತಿಲ್ಲ, ಕ್ವಾರೆಂಟೇನ್​ ಸೆಲ್​ನಲ್ಲಿ ಇಡಲಾಗಿದೆ... ಕನಿಷ್ಟ ಸೌಲಭ್ಯಗಳ ಕುರಿತು ಕೋರ್ಟ್​ಗೆ ಹೋದ್ರೆ, ಸುಪ್ರೀ ಕೋರ್ಟ್​​ನಲ್ಲಿ ಆದೇಶ ಆಗಿದೆ ಎಂದು ಸೆಷನ್ಸ್ ಕೋರ್ಟ್​​ ಹೇಳಿದೆ ಎಂದು ದರ್ಶನ್​ ಪರ ವಕೀಲರಿಂದ ವಾದ ಮಂಡನೆಯಾಗಿದೆ.

ಸೆಷನ್ಸ್​ ಕೋರ್ಟ್​ನಿಂದ ವರದಿ ಕೇಳಿದ ಸುಪ್ರೀಂ ಕೋರ್ಟ್, “ಎಷ್ಟು ಸಾಕ್ಷಿಗಳ ವಿಚಾರಣೆ ಈವರೆಗೆ ನಡೆದಿದೆ..? ... ಎಷ್ಟು ಸಾಕ್ಷಿಗಳನ್ನು ವಿಚಾರಣೆಗಾಗಿ ಪ್ರಾಸಿಕ್ಯೂಷನ್​​ ಸೂಚಿಸಿದೆ.? ... ಟ್ರಯಲ್​ ಮುಗಿಯಲು ಎಷ್ಟು ದಿನ ಬೇಕಾಗುತ್ತದೆ..? ದರ್ಶನ್​ಗೆ ಕನಿಷ್ಟ ಸೌಲಭ್ಯ ನೀಡಲಾಗುತಿದೆಯೇ.? ಇಲ್ಲವೆ? ಎಂದು ಒಂದು ವಾರದಲ್ಲಿ ವರದಿ ನೀಡುವಂತೆ ಸುಪ್ರೀಂ ಕೋರ್ಟ್​​ ಸೂಚನೆ ನೀಡಿದೆ. ಸೆಷನ್ಸ್​​ ಕೋರ್ಟ್​​ನಿಂದ ಸುಪ್ರೀಂ ಕೋರ್ಟ್ ವರದಿ ಕೇಳಿದೆ. ವರದಿ ಸಲ್ಲಿಕೆ ಬಳಿಕ ಮುಂದಿನ ವಿಚಾರಣೆ ದಿನಾಂಕ ನೀಡುವುದಾಗಿ ತಿಳಿಸಿದ ಸುಪ್ರೀಂ ಕೋರ್ಟ್​​ ಹೇಳಿದೆ.

ಜಾಮೀನಿಗೆ ದರ್ಶನ್ ನೀಡಿರುವ ಕಾರಣಗಳೇನು..?

  • ಪ್ರಕರಣದ ಟ್ರಯಲ್ ತೀರಾ ನಿಧಾನಗತಿಯಲ್ಲಿ ನಡೆಯುತ್ತಿದೆ
  • 7ತಿಂಗಳ ವಿಚಾರಣೆಯಲ್ಲಿ ಕೇವಲ 10ಸಾಕ್ಷಿಗಳ ವಿಚಾರಣೆ ಮಾತ್ರ ಮುಗಿದೆ
  • 262ಸಾಕ್ಷಿಗಳಿದ್ದು ಇದೇ ರೀತಿ ವಿಚಾರಣೆ ನಡೆದರೆ ಸಾಕಷ್ಡು ಸಮಯ ತೆಗೆದುಕೊಳ್ಳಲಿದೆ
  • ಜೈಲು ನಿಯಮಗಳಿಗೆ ವಿರುದ್ಧವಾಗಿ ಕ್ವಾರಟೈಂನ್ ಸೆಲ್ ನಲ್ಲಿ ಇಡಲಾಗಿದೆ
  • ಬೇರೆ ವಿಚಾರಣಾಧೀನ ಖೈದಿಗಳಿಗೆ ಸಿಗುವ ಕನಿಷ್ಠ ಸೌಲಭ್ಯಗಳೂ ಸಿಗ್ತಿಲ್ಲ
  • ಕುಟುಂಬಸ್ಥರಿಂದ ಕನಿಷ್ಟ ಸೌಲಭ್ಯ ಪಡೆಯಲೂ ಅವಕಾಶ ನೀಡ್ತಿಲ್ಲ
  • ಕುಟುಂಬಸ್ಥರ ಜೊತೆ ಮಾತುಕತೆಗೂ ಅವಕಾಶ ನೀಡಿಲ್ಲ
  • ಮಾತುಕತೆ ವೇಳೆ ಬ್ಯಾರಿಕೇಡ್ ಗಳು ಇದ್ದು ಆಪ್ತವಾಗಿ ಮಾತಾಡಲು ಸಾಧ್ಯವಾಗುತ್ತಿಲ್ಲ
  • ಜೈಲು ಮ್ಯಾನುವಲ್ ಪ್ರಕಾರವೇ ವೈಯೊ ಆಹಾರ ಪಡೆಯಲು ಅವಕಾಶ ನೀಡ್ತಿಲ್ಲ
  • ಬೇರೆ ವಿಚಾರಣಾಧೀನ ಖೈದಿಗಳಿಗೆ ಸಿಗುವ ಸೌಲಭ್ಯಗಳೂ ಸಿಗ್ತಿಲ್ಲ
  • ನಾನು ನಿರಪರಾಧಿಯಾಗಿದ್ದು ಅಪರಾಧಿಯಂತೆ ಬಿಂಬಿಸಲಾಗುತ್ತಿದೆ
  • ತಾನು ತಪ್ಪಿತಸ್ಥ ಅನ್ನೋದಕ್ಕೆ ಸಾಕ್ಷಿಗಳು ಇಲ್ಲ
  • ಜೈಲಿನಲ್ಲಿ ತನಗೆ ಭದ್ರತೆಯ ಭಯ ಕಾಡ್ತಿದೆಯಂತೆ
  • ಸಹಖೈದಿಗಳಿಂದ ಬೆದರಿಕೆ, ನಿಂದನೆಗೆ ಒಳಗಾಗ್ತಿದ್ದಾರಂತೆ ದರ್ಶನ್
  • ತಾನೊಬ್ಬ ನಟ ಆಗಿರೋದ್ರಿಂದ ತನ್ನ ಟಾರ್ಗೆಟ್ ಮಾಡಲಾಗಿದೆ
  • ತಾನೂ ಜೈಲಿಗೆ ಬಂದಿದ್ದರಿಂದ ಮೂರು ಸಿನಿಮಾ ಪ್ರಾಜೆಕ್ಟ್ ಕೈತಪ್ಪಿವೆ
  • ಕೆವಿನ್ ಪ್ರೊಡಕ್ಷನ್ ಜೊತೆ 6ಕೋಟಿ ರೂ. ಪ್ರಾಜೆಕ್ಟ್ ಕಳೆದುಕೊಳ್ಳುವಂತಾಗಿದೆ
  • ದೀರ್ಘಕಾಲ ಜೈಲಿನಲ್ಲಿ ಇರೋದ್ರಿಂದ ನಟನೆಯ ಅವಕಾಶ ಕಳೆದುಕೊಳ್ಳುವಂತಾಗಿದೆ
  • ದೀರ್ಘಕಾಲ ಪ್ರತ್ಯೇಕವಾಗಿ ಇರಿಸುವುದು ಮಾನಸಿಕ ಮಾನಸಿಕ ಆಘಾತಕ್ಕೆ ಕಾರಣವಾಗಲಿದೆ
  • ಫಿಸಿಯೋಥೆರಫಿ ಅಗತ್ಯ ಎಂದು ವೈದ್ಯರ ಸಲಹೆ ನೀಡಿದ್ದರೂ ಸಿಗ್ತಿಲ್ಲ
  • ಕೇವಲ‌2-3ಬಾರಿ ಮಾತ್ರ ಫಿಸಿಯೋಥೆರಫಿ ಮಾಡಿಸಲಾಗಿದೆ ಅಷ್ಟೆ
  • ಆರೋಗ್ಯದ ದೃಷ್ಟಿಯಿಂದ ನೆಲದ ಮೇಲೆ‌ ಕೂರಬಾರದು ಎಂದು ವೈದ್ಯರು ಸಲಹೆ ನೀಡಿದ್ದಾರೆ
  • ವಿಚಾರಣೆ ನಿಧಾನಗತಿಯಿಂದ‌ ನಡೆಯುತ್ತಿರೋದ್ರಿಂದ‌ ಸಿನಿಮಾ ವೃತ್ತಿಗೆ ಸಮಸ್ಯೆ ಆಗಿದೆ