ಬೆಂಗಳೂರು(ಜೂ. 07) ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ತುಮಕೂರಿನ ಮಧುಗಿರಿಯ ಜಕ್ಕೇನಹಳ್ಳಿಯಲ್ಲಿ ಅಂತ್ಯಕ್ರಿಯೆ ಮಾಡುವ ಸಾಧ್ಯತೆ ಇದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. 

"

ಅರ್ಜುನ್ ಸರ್ಜಾ ಹಾಗೂ ಅವರ ಅಜ್ಜಿಗಾಗಿ ಕುಟುಂಬ ಕಾಯುತ್ತಿದೆ.   ಅರ್ಜುನ್ ಸರ್ಜಾ  ಬೆಂಗಳೂರಿಗೆ ಸಮಯಾವಕಾಶ ಬೇಕಾಗಿರುವುದರಿಂದ ಸೋಮವಾರ ಅಂತ್ಯಕ್ರಿಯೆ ಮಾಡಲು ಸಿದ್ದತೆ ನಡೆಸಲಾಗಿದೆ.

ತಾಯಿ ಆಗುವ ಸಂಭ್ರಮದಲ್ಲಿದ್ದ ಮೇಘನಾ, ಚಿರನಿದ್ರೆಗೆ ಜಾರಿದ ಚಿರಂಜೀವಿ

ಸೋಮವಾರ ಬೆಳಗ್ಗೆ 11 ಗಂಟೆಗೆ ಅಂತ್ಯಕ್ರಿಯೆ ಮಾಡಲು ಸಿದ್ದತೆ  ಮಾಡಲಾಗಿದ್ದು ಅರ್ಜುನ್ ಸರ್ಜಾ ಹುಟ್ಟುರು ತುಮಕೂರಿನ ಮಧುಗಿರಿಯ ಜಕ್ಕೇನಹಳ್ಳಿಯಲ್ಲಿ ಅಂತಿಮ ವಿಧಿ ವಿಧಾನ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. 

ಭಾನುವಾರ 2ಗಂಟೆ ಸುಮಾರಿಗೆ ಚಿರಂಜೀವಿ ಸರ್ಜಾಗೆ ಹೃದಯಾಘಾತ ವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಆದರೆ ಪ್ರತಿಭಾವಂತ ನಟ ಕನ್ನಡ ಸಿನಿ ಲೋಕ ಬಿಟ್ಟು ಅಗಲಿದ್ದಾರೆ.