ಹುಣ್ಣಾದ ಮೇಲೆ ತುಪ್ಪ ಸುರಿಯಬೇಡಿ, ನನಗೆ ಸಿಂಪತಿ ಬೇಡವೇ ಬೇಡ: ಮೇಘನಾ ರಾಜ್
ಮಾನಸಿಕವಾಗಿ ಮಾತ್ರವಲ್ಲದೆ ದೈಹಿಕವಾಗಿಯೂ ನೋವು ಏನೆಂದು ಅನುಭವಿಸಿರುವೆ. ಹೀಲಿಂಗ್ ಬಗ್ಗೆ ಮಾತನಾಡಿದ ಮೇಘನಾ ರಾಜ್....

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್ ಮೊದಲ ಸಲ ಹೀಲಿಂಗ್ ಮತ್ತು ಫ್ಯಾಮಿಲಿ-ಫ್ರೆಂಡ್ಸ್ ಸಪೋರ್ಟ್ ಬಗ್ಗೆ ಮಾತನಾಡಿದ್ದಾರೆ.
'ತಂದೆ ತಾಯಿ ಪ್ರಪಂಚನೇ ನಾನು. ನನಗೆ ಕಷ್ಟ ಆಗಿದ್ದಕ್ಕೆ ಅವರಿಗೆ ತುಂಬಾ ನೋವಾಗಿತ್ತು. ನಾನು ಹೇಳುವುದು ಒರಟು ಅನಿಸಬಹುದು ಆದರೆ ಹೋದವರಿಗಿಂತ ಸರ್ವೈವ್ ಆಗುತ್ತಿರುವವರಿಗೆ ಕಷ್ಟ ಜಾಸ್ತಿ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಮನಸಿಗೆ ನೋವಾಗುತ್ತದೆ. ಹಾಡುಗಳಲ್ಲಿ ಹಾರ್ಟ್ ಬ್ರೇಕ್ ಗೊತ್ತಾಗುತ್ತಿತ್ತು ಆದರೆ ದೈಹಿಕವಾಗಿ ಆಗುತ್ತಿದ್ದ ಬ್ರೇಕ್ ನಿಜಕ್ಕೂ ಅನುಭವಿಸಿರುವೆ. ನಮ್ಮ ಎಮೋಷನ್‌ಗಳು ಫಿಸಿಕಲ್ ಪೇನ್ ಆಗಿ ಬದಲಾಗುತ್ತದೆ. ನೋವನ್ನು ಹೀಲ್ ಮಾಡುವುದರಲ್ಲಿ ಸಮಯ ಸಹಾಯ ಮಾಡಿದೆ. ನೋವು ಅನ್ನೋದು ಕಳೆದು ಹೋಗಲ್ಲ ಆದರೆ ಆ ನೋವಿನ ಜೊತೆ ಬೆಳೆಯುವುದಕ್ಕೆ ಶುರು ಮಾಡಿರುತ್ತೀವಿ ಎಂದು ಎಲ್ಲೋ ಓದಿರುವೆ' ಎಂದು ಮೇಘನಾ ರಾಜ್ ಕನ್ನಡ ರೆಡಿಯೋ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಮಗಳ ಜೊತೆ ಮೇಘನಾ ರಾಜ್ ಫೋಟೋ ವೈರಲ್; ಕಣ್ಮಣಿ ಎಂದು ಕರೆಯಲು ಕಾರಣವೇನು?
'ನಾವು ಸ್ಟ್ರಾಂಗ್ ಆಗಿದ್ದೀನಿ ವೀಕ್ ಆಗಿದ್ದೀನಿ ಅಂತ ಜನರು ಮಾತನಾಡುತ್ತಿದ್ದರು. ನಾನು ಸ್ಟ್ರಾಂಗ್ ಆಗಿರಬೇಕು ಎಂದು ಆಯ್ಕೆ ಮಾಡಿಕೊಂಡಿದ್ದಕ್ಕೆ ಜನರು ನನ್ನನ್ನು ಪದೇ ಪದೇ ಸ್ಟ್ರಾಂಗ್ ಎಂದು ಹೇಳುತ್ತಿದ್ದರು. ಏನೇ ಕಷ್ಟ ಬರಲಿ ನಾನು ನಗುತ್ತಾ ಜೀವನ ಸಾಗಿಸುತ್ತಿರುವೆ. ಎರಡನೇ ಮದುವೆ ಅಥವಾ ಜೀವನ ಮುಂಬರುವ ವರ್ಷಗಳಲ್ಲಿ ಪ್ರೀತಿ ಮದುವೆ ಅಂತ ಜನರು ಹೇಳುತ್ತಾರೆ ಆದರೆ ನಿಜಕ್ಕೂ ನಾನು ರೆಡಿಯಾಗಿದ್ದೀನಾ ಅನ್ನೋದು ನನಗೆ ಗೊತ್ತಿಲ್ಲ. ನನ್ನ ಜೀವನದಲ್ಲಿ ಯಾರಾದರೂ ಕಾಲಿಟ್ಟರೆ ಅಥವಾ ಬಂದಾಗ ಹೇಳಲು ಉತ್ತರವಿರುತ್ತದೆ. ನನ್ನ ಸುತ್ತ ಮುತ್ತ ಮತ್ತೊಂದು ಮದುವೆ ಮಾತುಕಥೆ ನಡೆಯುತ್ತಿರುತ್ತದೆ ನನ್ನ ಬಳಿ ಯಾರೂ ಹೇಳಿಲ್ಲ ಕೇಳಿಲ್ಲ ಅಂತಿಲ್ಲ. ಆದರೆ ಮಾನಸಿಕವಾಗಿ ನಾನು ರೆಡಿಯಾಗಿಲ್ಲ. ಆ ಸಮಯಕ್ಕೆ ಸರಿ ಅನಿಸಿದ್ದು ಮಾಡುತ್ತೀನಿ' ಎಂದು ಮೇಘನಾ ಹೇಳಿದ್ದಾರೆ.
ಧ್ರುವ ಸರ್ಜಾ ಮಗುವಿಗೆ ಗಜಕೇಸರಿ ಯೋಗ; ಮಹಾನ್ ನಟನಾಗ್ತಾನ ಸ್ಟಾರ್ ಆಕ್ಟರ್ ಪುತ್ರ?
'ಕೆಲವೊಂದು ಸಲ ನಮಗೆ ಸಿಂಪತಿ ಬೇಕಾಗಲ್ಲ ಏಕೆಂದರೆ ಅಯ್ಯೋ ಹೀಗಾಯ್ತು ಹಾಗಾಯ್ತು ಅಂತಾರೆ ಅದನ್ನು ಕೇಳಿಸಿಕೊಳ್ಳಲು ಆಗಲ್ಲ. ಒಂದು ವಿಚಾರದ ಮೇಲೆ ಮೊದಲೇ ಬೇಸರವಿರುತ್ತದೆ ಪದೇ ಪದೇ ಅದನ್ನೇ ಯಾಕೆ ಮಾತನಾಡುತ್ತಾರೆ ಗೊತ್ತಾಗಲ್ಲ. ಹೂವು ಹರಳುವುದಕ್ಕೆ ಶುರು ಮಾಡುತ್ತಿರುವಾಗ ಪದೇ ಪದೇ ಮಾತನಾಡಿ ಇನ್ನೂ ಹೂವು ಒಣಗಿಸುವುದು ತಪ್ಪು. ನಿಜಕ್ಕೂ ನನ್ನ ಬಗ್ಗೆ ಕಾಳಜಿ ಇದ್ರೆ ಹೇಗಿದ್ಯಾ? ಏನಾದ್ರೂ ತಿನ್ನುತ್ತೀರಾ ಸಿನಿಮಾ ನೋಡೋಣ ಅಂತೆಲ್ಲಾ ಕೇಳಿದರೆ ನನ್ನನ್ನು ಅದರಿಂದ ಹೊರ ಬರಲು ಸಹಾಯ ಮಾಡುತ್ತಿದ್ದೀರಿ ಅದು ಬಿಟ್ಟು ಅಯ್ಯೋ ಪಾಪ ಅಂದು ಹುಣ್ಣಾದಾಗ ತುಪ್ಪು ಸರಿಯಬೇಡಿ' ಎಂದಿದ್ದಾರೆ ಮೇಘನಾ ರಾಜ್.