Asianet Suvarna News Asianet Suvarna News

ಇವನು ಒಬ್ಬ ಹೀರೋನಾ..? ಚಿಕ್ಕಣ್ಣನಿಗೆ ಅವಮಾನ: ಉಫಾಧ್ಯಕ್ಷ ವೇದಿಕೆ ಮೇಲೆ ಕಣ್ಣೀರಿಟ್ಟ ಚಿಕ್ಕಣ್ಣ!

ಉಪಾಧ್ಯಕ್ಷ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಏನೇನಾಯ್ತು ಗೊತ್ತಾ..? ಚಿಕ್ಕಣ್ಣ.. ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಹಾಸ್ಯ ನಟ.. ಸ್ಟಾರ್ ಹೀರೋಗಳ ಫೇವರಿಟ್. ಲಕ್ಕೀ ನಟ ಕೂಡ. ಇಷ್ಟೆಲ್ಲಾ ಸಿನಿಮಾಗಳಲ್ಲಿ ನಟಿಸಿದ ನಂತರ ಇದೇ ಮೊದಲ ಬಾರಿಗೆ ಚಿಕ್ಕಣ್ಣ ಹೀರೋ ಆಗಿದ್ದಾರೆ ಅದೇ ಉಪಾಧ್ಯಕ್ಷ ಸಿನಿಮಾ. 

Chikkanna Starrer Upadhyaksha Teaser Released gvd
Author
First Published Oct 23, 2023, 9:23 PM IST

ಉಪಾಧ್ಯಕ್ಷ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಏನೇನಾಯ್ತು ಗೊತ್ತಾ..? ಚಿಕ್ಕಣ್ಣ.. ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಹಾಸ್ಯ ನಟ.. ಸ್ಟಾರ್ ಹೀರೋಗಳ ಫೇವರಿಟ್. ಲಕ್ಕೀ ನಟ ಕೂಡ. ಇಷ್ಟೆಲ್ಲಾ ಸಿನಿಮಾಗಳಲ್ಲಿ ನಟಿಸಿದ ನಂತರ ಇದೇ ಮೊದಲ ಬಾರಿಗೆ ಚಿಕ್ಕಣ್ಣ ಹೀರೋ ಆಗಿದ್ದಾರೆ ಅದೇ ಉಪಾಧ್ಯಕ್ಷ ಸಿನಿಮಾ. ಉಪಾಧ್ಯಕ್ಷ ಟೀಸರ್ ಲಾಂಚ್ ಅದ್ದೂರಿಯಾಗಿ ಆಗಿದೆ. ನೋಡಿದ್ರಲ್ಲ.. ನಿಮ್ಮನ್ನ ನಗುವಿನ ತೇರಿನಲ್ಲಿ ಹೊತ್ಕೊಂಡೋಗೋಕೆ ಬರ್ತಿದ್ದಾನೆ ಉಪಾಧ್ಯಕ್ಷ.. ಇದು ಅಧ್ಯಕ್ಷ ಸೀಕ್ವೆಲ್.. ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತಾಡುತ್ತಾ ನಟ ಚಿಕ್ಕಣ್ಣ ವೇದಿಕೆ ಮೇಲೆಯೇ ಕಣ್ಣೀರಿಟ್ಟರು. 

ನಾನು ಈ ಸಿನಿಮಾ ಮಾಡುವಾಗ ಇವನು ಹೀರೋನಾ? ಎಂದು ಹೀಯಾಳಿಸಿದ್ರು ಎಂದು ಭಾವುಕರಾದರು. ನನ್ನ ಸಿನಿಮಾಗೆ ಗಾರೆ ಕೆಲಸದವ್ರು ವಿಡಿಯೋ ಮೂಲಕ ಶುಭಾಶಯ ಕೋರಿದ್ದಾರೆ. ನಾನು ಸಿನಿಮಾ ಹೀರೋ ಆಗ್ತೀನಿ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ಕೊನೆಗೂ ನಾನು ಹೀರೋ ಆದೆ. ನನ್ನ ಜರ್ನಿಯಲ್ಲಿ ಸಪೋರ್ಟ್ ಮಾಡಿದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ ಚಿಕ್ಕಣ್ಣ. ಇದು ಟೀಸರ್ ಬಿಡುಗಡೆ ಸಮಾರಂಭ. ನಾನು ಹೆಚ್ಚು ಹೇಳುವುದೇನಿಲ್ಲ. ನನ್ನ ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ನವೆಂಬರ್ ನಲ್ಲಿ ಚಿತ್ರ ಬಿಡುಗಡೆಯಾಲಿದೆ. ಎಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಿರ್ದೇಶಕ ಅನಿಲ್ ಕುಮಾರ್. 

ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ನಾನು ಉಪಾಧ್ಯಕ್ಷ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದೇನೆ ಎಂದ ನಾಯಕಿ ಮಲೈಕ, ಅವಕಾಶ ನೀಡಿದ್ದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ ತಿಳಿಸಿದರು. ಉಪಾಧ್ಯಕ್ಷ ಟೀಸರ್‌ ರಿಲೀಸ್‌ ಕಾರ್ಯಕ್ರಮದಲ್ಲಿ ದುನಿಯಾ ವಿಜಯ್ ನೆನಪಿರಲಿ ಪ್ರೇಮ್‌, ಅಭಿಷೇಕ್‌ ಅಂಬರೀಶ್‌, ಗರುಡಾ ರಾಮ್‌, ಧನ್ವೀರ್‌, ಅದಿತಿ ಪ್ರಭುದೇವ ಹಾಗೂ ಇನ್ನಿತರರು ಹಾಜರಿದ್ದರು.  ಉಫಾಧ್ಯಕ್ಷ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಈ ಮೂಲಕ ಇನ್ನಷ್ಟು ಕಳೆಕಟ್ಟಿದರು. ಉಪಾಧ್ಯಕ್ಷ ಚಿತ್ರದಲ್ಲಿ ಹಿಟ್ಲರ್‌ ಕಲ್ಯಾಣ ಖ್ಯಾತಿಯ ನಟಿ ಮಲೈಕಾ ವಸುಪಾಲ್‌ ನಟಿಸಿದ್ದಾರೆ. 

Challenging Star Darshan ನನ್ನ ದೊಡ್ಡ ಫ್ಯಾನ್ ಅಂತೆ: ನಟ ನಾಗಭೂಷಣ್‌

ಈ ಮೂಲಕ ಮಲೈಕಾ ಮೊದಲ ಬಾರಿಗೆ ಹಿರಿ ತೆರೆಯಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.  ಈ ಸಿನಿಮಾವನ್ನು ಹೆಬ್ಬುಲಿ  ಚಿತ್ರದ ನಿರ್ಮಾಪಕ ಉಮಾಪತಿ ನಿರ್ಮಾಣ ಮಾಡಿ ಇದೊಂದು ಸಂಪೂರ್ಹಾಸ್ಯ ಮಯ ಚಿತ್ರ ಎಂದಿದ್ದಾರೆ. ದಿಲ್ ವಾಲ ಅನಿಲ್ ಆಕ್ಷನ್ ಕಟ್ ಹೇಳಿರುವ ಉಪಾಧ್ಯಕ್ಷ ಚಿತ್ರದಲ್ಲಿ ಬಹುದೊಡ್ಡ ತಾರಾಗಣವಿದೆ. ಉಪಾಧ್ಯಕ್ಷ ಟೀಸರ್ ಈಗಾಗಲೆ ಟ್ರೆಂಡಿಂಗ್ನಲ್ಲಿದೆ. ಸಿನಿಮಾಗೆ ಅರ್ಜುನ್ ಜನ್ಯ ಸಂಗೀತವಿದ್ದು ಟೈಟಲ್ ಟ್ರ್ಯಾಕ್ ಕೂಡ ಬಿಗ್ಗೆಸ್ಟ್ ಹಿಟ್ಟಾಗಿದೆ.  ಉಳಿದಂತೆ ಚಿತ್ರದಲ್ಲಿ  ರವಿಶಂಕರ್‌, ಸಾಧು ಕೋಕಿಲಾ ಹಾಗೂ ಇನ್ನಿತರರಿದ್ದಾರೆ. ಶರಣ್‌ ಅತಿಥಿ ಪಾತ್ರದಲ್ಲಿ ನಟಿಸಿರೋದು ಸಿನಿಮಾ ಸ್ಪೆಷಲ್. ನವೆಂಬರ್ ತಿಂಗಳಲ್ಲಿ ಸಿನಿಮಾ  ತೆರೆ ಕಾಣುತ್ತಿದೆ.

Follow Us:
Download App:
  • android
  • ios