ಚಿರು ಅಗಲಿಕೆಯ ನೋವಿನಲ್ಲಿರುವ ಸರ್ಜಾ ಫ್ಯಾಮಿಲಿ ಇತ್ತೀಚಿಗೆ ತಮ್ಮ ನಿವಾಸದಲ್ಲಿ ಚಂಡಿಕಾ ಹೋಮ ಮಾಡಿಸಿದ್ದಾರೆ.

ಕನ್ನಡ ಚಿತ್ರರಂಗದ ಫಿಟ್ ಮ್ಯಾನ್ ಅರ್ಜುನ್‌ ಸರ್ಜಾ ಅಂದ್ರೆ ಧ್ರುವ ಮತ್ತು ಚಿರಂಜೀವಿಗೆ ಗಾಡ್‌ಫಾದರ್‌ ಇದ್ದಂತೆ. ಮಾಮನ ಆಜ್ಞೆ ಮೀರದೆ ಯಾವ ಕೆಲಸವನ್ನು ಕೈಗೆತ್ತುಕೊಂಡವರಲ್ಲ. ಈ ಕಲಾವಿದರ ಕುಟುಂಬ ಚಿರು ಅಗಲಿಕಯ ನೋವಿನಿಂದ ಇನ್ನೂ ಹೊರಬಂದಿಲ್ಲ.

ಚಿರಂಜೀವಿ ಸರ್ಜಾ ಖಾತೆಗೆ Instagram ಕಂಬನಿ ಮಿಡಿದಿದ್ದು ಹೀಗೆ

ಹೃದಯಘಾತದಿಂದ ಚಿರಂಜೀವಿ ಸಾವನಪ್ಪಿ ಒಂದು ತಿಂಗಳು ಕಳೆದಿದೆ. ಕನಕಪುರದ ನೆಲಗಳಹಳ್ಳಿಯಲ್ಲಿ ಒಂದು ತಿಂಗಳ ಪುಣ್ಯಸ್ಮರಣೆಯನ್ನೂ ಮಾಡಲಾಗಿತ್ತು. ಇದರ ಬೆನ್ನಲ್ಲೇ ಅರ್ಜುನ್ ಸರ್ಜಾ ತಮ್ಮ ಕೋರಮಂಗಲದ ನಿವಾಸದಲ್ಲಿ ಚಂಡಿಕಾ ಹೋಮ ಮಾಡಿಸಿದ್ದಾರೆ. ಅನಂತ ಶಾಸ್ತ್ರಿಗಳ ನೇತೃತ್ವದಲ್ಲಿ ಚಂಡಿಕಾ ಪಾರಾಯಣ ಹೋಮ ಮಾಡಲಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

View post on Instagram

ಈ ಪೂಜೆಯಲ್ಲಿ ಅರ್ಜುನ್ ಕುಟುಂಬದವರು ಮತ್ತು ಚಿರು ತಾಯಿ, ಅಜ್ಜಿ ಮತ್ತು ಅಣ್ಣನ ಮಗ ಭಾಗಿಯಾಗಿದ್ದರು. 

ಇನ್ನು ಇನ್‌ಸ್ಟಾಗ್ರಾಂನಲ್ಲಿ ಚಿರಂಜೀವಿ ಹೆಸರಿನಲ್ಲಿ ಅತಿ ಹೆಚ್ಚು # ಹ್ಯಾಷ್‌ ಟ್ಯಾಗ್ ಬಳಸಿರುವ ಕಾರಣ ಇನ್‌ಸ್ಟಾಗ್ರಾಂ ಕಂಪನಿ ಚಿರು ಖಾತೆಗೆ Remembering ಎಂದು ಸೇರಿಸುವ ಮೂಲಕ ನಮನ ಸಲ್ಲಿಸಿದೆ.