ಚಂದನ್ ರಾಜ್ ನಟಿಸಿರುವ, ವೀರೇಶ್ ಬೊಮ್ಮಸಾಗರ ನಿರ್ದೇಶನದ ‘ರಾಜ ರತ್ನಾಕರ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಜಯರಾಮ ಸಿ.ಮಾಲೂರು ಈ ಸಿನಿಮಾ ನಿರ್ಮಿಸಿದ್ದಾರೆ.
ಚಂದನ್ ರಾಜ್ ನಟಿಸಿರುವ, ವೀರೇಶ್ ಬೊಮ್ಮಸಾಗರ ನಿರ್ದೇಶನದ ‘ರಾಜ ರತ್ನಾಕರ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ದುಡಿಬೇಕು ಅನ್ನೋದೆಲ್ಲ ಏನಿಲ್ಲ. ಹಣ ಮಾಡಬೇಕಷ್ಟೇ. ಕುಟುಂಬವನ್ನು ಇಕ್ಕಟ್ಟಿಗೆ ಸಿಲುಕಿಸಿಯಾದರೂ ಸರಿ ಎಂಬ ಬುದ್ಧಿ ಇರುವವನೇ ಈ ಚಿತ್ರದ ನಾಯಕ ನಟ. ಸಿನಿಮಾದ ನಾಯಕಿಯಾಗಿ ಅಪ್ಸರಾ ಅಭಿನಯಿಸಿದ್ದಾರೆ. ಆದರೆ, ಅಪ್ಸರಾ ಸಿನಿಮಾ ರಿಲೀಸ್ಗೂ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ. ಇಡೀ ತಂಡ ಅಪ್ಸರಾ ಅವರಿಗೆ ಕಂಬನಿ ಮಿಡಿದಿದೆ. ಅಪ್ಸರಾ ಪರವಾಗಿ ಅವರ ತಂದೆ ಮಾತನಾಡಿ, ಮಗಳು ಹೊಂದಿದ್ದ ಕನಸಿನ ಬಗ್ಗೆ ಹಂಚಿಕೊಂಡರು.
ಸಿನಿಮಾದ ನಾಯಕ ಚಂದನ್ ರಾಜ್ ಮಾತನಾಡಿ, ಈ ರೀತಿಯ ಕಥೆ ಸಿಕ್ಕಿರೋದು ನನ್ನ ಅದೃಷ್ಟ. ನಮ್ಮ ನೇಟಿವಿಟಿ ಸ್ಟೋರಿಗಳನ್ನು ಮಾಡಬೇಕು ಎಂಬುದು ನನ್ನ ಆಸೆಯಾಗಿತ್ತು. ನಾನು ಬೆಂಗಳೂರಿನ ಹುಟ್ಟಿ ಬೆಳೆದ ಕಾರಣ ಇಲ್ಲಿನ ಕಥೆಯನ್ನೇ ಮಾಡಬೇಕು ಎಂದುಕೊಂಡಿದ್ದೆವು ಎಂದು ತಿಳಿಸಿದರು. ಸಿನಿಮಾ ಬಗ್ಗೆ ಮಾತನಾಡಿದ ನಿರ್ದೇಶಕ ವಿರೇಶ್ ಬೊಮ್ಮಸಾಗರ, ಚಿತ್ರರಂಗಕ್ಕೆ ಬಂದು 10-12 ವರ್ಷಗಳಾಗಿವೆ. ಆದರೆ, ಇದು ನನ್ನ ಮೊದಲ ಸಿನಿಮಾ. ಇದು ಎಲ್ಲರನ್ನೂ ತಲುಪುವ ಕಥೆ. ಎಲ್ಲರ ಮನೆಯಲ್ಲೂ ಇಂಥ ಒಬ್ಬ ಇರ್ತಾನೆ. ಹೀಗಾಗಿ ಎಲ್ಲರಿಗೂ ಸಿನಿಮಾ ಇಷ್ಟವಾಗುತ್ತದೆ ಎಂದಿದ್ದಾರೆ.
ನಿರ್ಮಾಪಕ ಜಯರಾಮ್ ಅವರು ವೃತ್ತಿಯಲ್ಲಿ ರೈತನಾಗಿದ್ದು, ಈಗ ಸಿನಿಮಾ ಮಾಡಿದ್ದಾರೆ. ನಾನು ಈ ಸಿನಿಮಾ ಮಾಡಲು ಪ್ರಮುಖ ಕಾರಣ ಈ ಕಥೆ. ತಾಯಿ, ಮಗ, ಫ್ರೆಂಡ್, ಲವ್ವರ್ ಎಲ್ಲ ಪಾತ್ರದಲ್ಲೂ ಭಾವನಾತ್ಮಕ ಅಂಶಗಳಿವೆ ಎಂದರು. ತಾಯಿ ಪಾತ್ರ ನಿರ್ವಹಿಸಿರುವ ಯಮುನಾ ಶ್ರೀನಿಧಿ ಮಾತನಾಡಿ, ವಿರೇಶ್ ಸರ್ ನನಗೆ ಕಥೆ ವಿವರಿಸಿದ ರೀತಿಗೆ ನಾನು ಸಿನಿಮಾ ಒಪ್ಪಿಕೊಂಡೆ. ನಾನು ಸಾಕಷ್ಟು ತಾಯಿ ಪಾತ್ರಗಳನ್ನು ನಿರ್ವಹಿಸಿದ್ದರೂ ಕೂಡಾ ಇದು ವಿಭಿನ್ನವಾಗಿದೆ. ಸಿನಿಮಾ ಎಲ್ಲರಿಗೂ ಕನೆಕ್ಟ್ ಆಗಲಿದೆ ಎಂದಿದ್ದಾರೆ.
ಚಂದನ್ ರಾಜ್ ಜೊತೆಗೆ ನಾಗರಾಜ್ ರಾವ್, ಯಮುನಾ ಶ್ರೀನಿಧಿ, ಚೇತನ್ ದುರ್ಗಾ, ಸಿದ್ದು, ಡಿಂಗ್ರಿ ನರೇಶ್ ಸೇರಿ ಹಲವು ಕಲಾವಿದರು ಈ ಚಿತ್ರದ ತಾರಾಗಣದಲ್ಲಿದ್ದಾರೆ. ಚೌಮುದ ಬ್ಯಾನರ್ ನಡಿ ಜಯರಾಮ ಸಿ.ಮಾಲೂರು ಅವರು ಮೊದಲ ಬಾರಿಗೆ ಈ ಸಿನಿಮಾ ನಿರ್ಮಿಸಿದ್ದಾರೆ. ಈಗಾಗಲೇ ಟ್ರೇಲರ್ನಿಂದ ಗಮನ ಸೆಳೆಯುತ್ತಿರೋ ರಾಜ ರತ್ನಾಕರ ಚಿತ್ರ ಜೂನ್ 27ರಂದು ಬಿಡುಗಡೆಯಾಗಲಿದೆ.
