ಬೆಂಗಳೂರು (ಮಾ. 12): ರಾಕಿಂಗ್ ಸ್ಟಾರ್ ಯಶ್ ’ಕೆಜಿಎಫ್’ ಸ್ಯಾಂಡಲ್ ವುಡ್ ನಲ್ಲಿ ಬ್ರೇಕ್ ಮಾಡಲಾಗದ ದಾಖಲೆಯನ್ನೆ ಬರೆದಿದೆ. ಇಡೀ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಜಿಎಫ್ ದೊಡ್ಡ ಹವಾವನ್ನೇ ಎಬ್ಬಿಸಿದ್ದು ಇದು ಮಾಡಿರುವ ದಾಖಲೆಯನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ ಎನ್ನಲಾಗುತ್ತಿತ್ತು. ಆದರೆ ಇದೀಗ ಯಜಮಾನ ಸಿನಿಮಾ ಕೆಜಿಎಫ್ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. 

ಸುಮಲತಾ ಅಂಬರೀಶ್ ಗೆ ರಾಕಿಂಗ್ ಸ್ಟಾರ್ ಸಾಥ್!

ಕನ್ನಡದ ಮಟ್ಟಿಗೆ ಅತೀ ಹೆಚ್ಚು ವೀಕ್ಷಣೆ ಪಡೆದ ಟ್ರೇಲರ್ ಖ್ಯಾತಿಗೆ ಕೆಜಿಎಫ್ ಪಾತ್ರವಾಗಿತ್ತು. ಈ ದಾಖಲೆಯನ್ನು ಯಜಮಾನ ಮುರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

 

ಸದ್ಯ ಎರಡೂ ಟ್ರೇಲರ್ ನಡುವೆ ಕೇವಲ 1.7 ಲಕ್ಷ ವ್ಯತ್ಯಾಸವಿದೆ. ಕೆಜಿಎಫ್ 1.8 ವೀಕ್ಷಣೆ ಪಡೆದಿದೆ. 

ದರ್ಶನ್ ’ಯಜಮಾನ’ ಭರ್ಜರಿ ಯಶಸ್ಸಿನೊಂದಿದೆ ಮುನ್ನುಗ್ಗುತ್ತಿದೆ. ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಬಂದಿದೆ. ಅದೇ ರೀತಿ ಕೆಜಿಎಪ್ ಕೂಡಾ ಅಭೂತಪೂರ್ವ ಯಶಸ್ಸನ್ನು ಕಂಡಿತ್ತು.