ಮಂಡ್ಯ ಕಣದಲ್ಲಿ ಲೋಕಸಭಾ ಚುನಾವಣಾ ಕಾವು ಹೆಚ್ಚಾಗಿದೆ. ಸುಮಲತಾ ಹಾಗೂ ನಿಖಿಲ್ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಸುಮಲತಾ ಪರ ಸ್ಯಾಂಡಲ್ ವುಡ್ ನಟರು ಒಬ್ಬೊಬ್ಬರೇ ಬ್ಯಾಟಿಂಗ್ ಮಾಡುತ್ತಿದ್ದು ಸ್ಯಾಂಡಲ್ ವುಡ್ ರಾಕಿ ಬಾಯ್ ಯಶ್ ಕೂಡಾ ಸಾಥ್ ನೀಡಿದ್ದಾರೆ.
ಯಶ್ ಸುಮಲತಾ ಜೊತೆ ನಾಲ್ಕು ಗಂಟೆಗಳ ಕಾಲ ರಾಜಕೀಯ ಚರ್ಚೆ ಮಾಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗಾಗಲೇ ಸುಮಲತಾಗೆ ಸಾಥ್ ನೀಡುವುದಾಗಿ ಹೇಳಿದ್ದಾರೆ. ಇದೀಗ ಯಶ್ ಕೂಡಾ ಸಾಥ್ ನೀಡುವುದಾಗಿ ಹೇಳಿದ್ದು ಸುಮಲತಾಗೆ ಆನೆ ಬಲ ಬಂದಂತಾಗಿದೆ. ಅಂಬಿ ಅಭಿಮಾನಿಗಳು ಸುಮಲತಾಗೆ ಇನ್ನಷ್ಟು ಸಪೋರ್ಟ್ ಮಾಡುತ್ತಿದ್ದು ಭಾರೀ ಸ್ಪರ್ಧೆ ಏರ್ಪಟ್ಟಿದೆ.
ಸುಮಲತಾ ಹಾಗೂ ನಿಖಿಲ್ ಇಬ್ಬರೂ ಚಿತ್ರರಂಗದವರಾಗಿದ್ದರಿಂದ ಸ್ಯಾಂಡಲ್ ವುಡ್ ಸ್ಟಾರ್ ಗಳು ಯಾರಿಗೆ ಬೆಂಬಲಿಸುವುದು ಎಂಬ ಗೊಂದಲದಲ್ಲಿದ್ದಾರೆ. ಸುಮಲತಾ ಚುನಾವಣೆಗೆ ನಿಲ್ಲಲೇಬೇಕು ಎಂದು ಅಂಬಿ ಅಭಿಮಾನಿಗಳು ಬೆಂಬಲಿಸುತ್ತಿದ್ದಾರೆ. ಅತ್ತ ನಿಖಿಲ್ ಪರನೂ ಪ್ರಚಾರ ಜೋರಾಗಿದೆ. ಒಟ್ಟಿನಲ್ಲಿ ಹೈ ವೋಲ್ಟೇಜ್ ಸ್ಪರ್ಧೆ ಏರ್ಪಟ್ಟಿದೆ.
