ಬಾಹುಬಲಿ ಎದುರು ಕೆಜಿಎಫ್ ಪರ ಬ್ಯಾಟಿಂಗ್ ಮಾಡಿದ ದರ್ಶನ್
ದರ್ಶನ್ ಅಭಿನಯದ ‘ಯಜಮಾನ’ ಮಾಚ್‌ರ್ 1 ರಂದು ತೆರೆಗೆ ಬರುತ್ತಿದೆ. ಬಹು ನಿರೀಕ್ಷೆ ಮೂಡಿಸಿರುವ ಈ ಸಿನಿಮಾ ಬಿಡುಗಡೆಯ ಹೊತ್ತಿನಲ್ಲಿ ದರ್ಶನ್ ಹೇಳಿಕೊಂಡ ಕೆಲವು ಆಸಕ್ತಿಕರ ಸಂಗತಿಗಳು ಇಲ್ಲಿವೆ.
ಬೆಂಗಳೂರು (ಫೆ. 27): ದರ್ಶನ್ ಅಭಿನಯದ ‘ಯಜಮಾನ’ ಮಾಚ್‌ರ್ 1ರಂದು ತೆರೆಗೆ ಬರುತ್ತಿದೆ. ಬಹು ನಿರೀಕ್ಷೆ ಮೂಡಿಸಿರುವ ಈ ಸಿನಿಮಾ ಬಿಡುಗಡೆಯ ಹೊತ್ತಿನಲ್ಲಿ ದರ್ಶನ್ ಹೇಳಿಕೊಂಡ ಕೆಲವು ಆಸಕ್ತಿಕರ ಸಂಗತಿಗಳು ಇಲ್ಲಿವೆ.
’ಯಜಮಾನ’ ಚಿತ್ರದ ಬಗ್ಗೆ ರಶ್ಮಿಕಾ ಬಿಚ್ಚಿಟ್ರು ಇಂಟರೆಸ್ಟಿಂಗ್ ವಿಚಾರ
1. ನಾನು ಇಲ್ಲಿಯವರೆಗೂ ಎಲ್ಲಾ ಸಿನಿಮಾಗಳನ್ನು ಪ್ರೀತಿ ಮತ್ತು ಆಸಕ್ತಿಯಿಂದಲೇ ಮಾಡಿದ್ದು. ಆದರೆ, ಯಜಮಾನ ಮೇಲೆ ಕೊಂಚ ವಿಶೇಷ ಪ್ರೀತಿ. ಯಾಕೆಂದರೆ ಸಮಾಜಕ್ಕೆ ಒಳ್ಳೆಯ ಸಂದೇಶ ಇದೆ. ಇದು ನನಗೆ ಗೊತ್ತಿರುವ ತಂಡದ ಸಿನಿಮಾ.
2. ಇನ್ನು ಮೇಲೆ ಕಮರ್ಷಿಯಲ್ ಜತೆಗೆ ಸಾಮಾಜಿಕ ಸಂದೇಶ ಇರುವಂತಹ ಕತೆಗಳನ್ನು ಮಾಡಿ ಅನ್ನೋದು ನನ್ನ ಮನವಿ. ನಾನು ಮುಂದೆ ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳು ವಾಣಿಜ್ಯವೇ ಪ್ರಧಾನ ಎನಿಸಿದರೂ ಸಮಾಜಕ್ಕೆ ಉತ್ತಮ ಸಂದೇಶ ಕೊಡುವಂತಹ ಸಿನಿಮಾ ಆಗಿರುತ್ತದೆ.
3. ನನಗೆ ಪರಿಚಯವೇ ಇಲ್ಲದ ತಂಡದ ಜತೆಗೆ ಸಿನಿಮಾ ಮಾಡುವಾಗ ನಾನು ಅಲ್ಲಿ ನಟನಾಗಿರುತ್ತೇನೆ. ನನಗೆ ಪರಿಚಯ ಇರೋ ತಂಡ ಅಂದರೆ ಹೆಚ್ಚು ಪಾಲ್ಗೊಳ್ಳುತ್ತೇನೆ. ನಟನಾಗಿ ನನ್ನ ಕೆಲಸದ ಜತೆಗೆ ಬೇರೆ ಬೇರೆ ವಿಚಾರಗಳನ್ನು ಹಂಚಿಕೊಂಡು ಗೈಡ್ ಮಾಡಕ್ಕೆ ಪ್ರಯತ್ನಿಸುತ್ತೇನೆ.
ಯಜಮಾನ'ದ 'ಬಸಣಿ ನಾಚ್' ತಾನ್ಯ ಯಾರು?
4. ಶೈಲಜಾ ನಾಗ್ ನನ್ನ ಜತೆ ಸಿನಿಮಾ ಮಾಡುತ್ತೇನೆ ಎಂದಾಗ ‘ಹಾಗಿದ್ದರೆ ನೀವು ಚಿತ್ರರಂಗ ಬಿಟ್ಟು ಹೋಗಬೇಕಾಗುತ್ತದೆ ನೋಡಿ’ ಎಂದು ತುಂಬಾ ಜನ ಅವರನ್ನು ಹೆದರಿಸಿದ್ರಂತೆ. ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ಯಾಕೆ ನನ್ನ ಬಗ್ಗೆ ಹೀಗೆಲ್ಲ ಅಪಪ್ರಚಾರ ಮಾಡುತ್ತಾರೋ ಗೊತ್ತಿಲ್ಲ. ಆದರೆ, ನಾನು ಸಿನಿಮಾ ಮಾಡುವಾಗ ನನ್ನ ಚಿತ್ರದಲ್ಲಿ ನಮ್ಮ ಕನ್ನಡದವರೇ ಫೈಟ್ ಮಾಸ್ಟರ್, ಸಂಗೀತ, ಕ್ಯಾಮೆರಾ, ನೃತ್ಯ ನಿರ್ದೇಶಕರು ಹೀಗೆ ಎಲ್ಲರೂ ನಮ್ಮವರೇ ಆಗಿರಬೇಕೆಂದು ಜಗಳ ಆಡುತ್ತೇನೆ. ನನ್ನ ಹಠ ತಪ್ಪು ಅನಿಸಿದರೆ ನಾನು ಏನು ಮಾಡಲಿ!?
5. ನನಗೆ ತೆಲುಗಿನ ‘ಬಾಹುಬಲಿ’ಗಿಂತ ಕನ್ನಡದ ‘ಕೆಜಿಎಫ್’ ಸಿನಿಮಾ ಹೆಚ್ಚು ಇಷ್ಟ. ಯಾಕೆಂದರೆ ಇದು ನಮ್ಮ ಕನ್ನಡದ ಸಿನಿಮಾ. ಕನ್ನಡದವರೂ ಕೂಡ ಮನಸ್ಸು ಮಾಡಿದರೆ ಯಾವ ಮಟ್ಟಕ್ಕೆ ಸಿನಿಮಾ ಮಾಡುತ್ತೇವೆಂದು ತೋರಿಸಿ ಕೊಟ್ಟಚಿತ್ರ ‘ಕೆಜಿಎಫ್’.
6. ನಾನು ಖಾಸಗಿ ವಾಹಿನಿಗಳು ನಡೆಸಿ ಕೊಡುವ ವಾಹಿನಿಗಳ ಮನರಂಜನೆ ಕಾರ್ಯಕ್ರಮಗಳಿಗೆ ಹೋಗದೆ ಇರುವುದಕ್ಕೆ ಸಾಕಷ್ಟುಕಾರಣಗಳಿವೆ. ಮುಖ್ಯವಾಗಿ ಅಲ್ಲಿಗೆ ಹೋದರೆ ಡ್ಯಾನ್ಸ್ ಮಾಡಬೇಕು. ಆ ಡ್ಯಾನ್ಸ್ ಮಾಡಕ್ಕೆ ಮೊದಲೇ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಆ ತಾಳ್ಮೆ ನನಗೆ ಇಲ್ಲ. ನನ್ನ ಸಿನಿಮಾಗಳಿಗೆ ನಾನು ಮೊದಲೇ ಡ್ಯಾನ್ಸ್ ಅಭ್ಯಾಸ ಮಾಡಿಕೊಂಡು ಹೋಗಲ್ಲ. ಏನೇ ಮಾಡಿದರೂ ಸೆಟ್‌ನಲ್ಲೇ ಕಲಿತು ಮಾಡುತ್ತೇನೆ. ಹೀಗಾಗಿ ವಾಹಿನಿಗಳ ರಿಯಾಲಿಟಿ ಶೋಗಳಿಂದ ದೂರ ಉಳಿಯುತ್ತೇನೆ.
7. ಚಿತ್ರರಂಗಕ್ಕೆ ಹೊಸ ಹೊಸ ನಾಯಕ ನಟರು ಬರಬೇಕು. ಯಾಕೆಂದರೆ ಚಿತ್ರರಂಗ ಯಾರದ್ದೂ ಅಲ್ಲ. ಹೊಸಬರಿಗೆ ಯಾವತ್ತಿಗೂ ನನ್ನ ಬೆಂಬಲ ಇರುತ್ತದೆ. ಬೆಳೆಯುತ್ತಿರುವ ಕಲಾವಿದರಿಗೆ ಬೆಂಬಲ ಕೊಡುವುದನ್ನು ನಾನು ಅಂಬರೀಶ್ ಅವರಿಂದ ಕಲಿತೆ. ಅಂಬರೀಶ್ ಅವರು ನನ್ನ ಬಳಿ ಕೇಳಿಕೊಂಡು ನನ್ನ ಸಿನಿಮಾ ನೋಡಿದ್ದು ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’.
8. ನಮ್ಮ ಯಜಮಾನ ಚಿತ್ರದ ಜತೆಗೆ ಅಭಿಷೇಕ್ ನಟನೆಯ ‘ಅಮರ್’ ಚಿತ್ರದ ಟ್ರೇಲರ್ ಬರುತ್ತಿರುವುದು ಖುಷಿ ಕೊಟ್ಟಿದೆ. ಅಭಿ ನನ್ನ ತಮ್ಮ ಇದ್ದಂತೆ. ಅವನ ಚಿತ್ರದ ಟ್ರೇಲರ್ ನನ್ನ ಸಿನಿಮಾದಲ್ಲಿ ಬರುತ್ತಿದೆ ಎಂಬುದು ನನಗೆ ಹೆಚ್ಚು ಸಂಭ್ರಮ ಕೊಡುವ ವಿಚಾರ.
ಗೊಂಬೆಯಂಥ ಈ ನಟಿ 'ಯುವರತ್ನ' ಚಿತ್ರಕ್ಕೆ ನಾಯಕಿ!
9. ಆ್ಯಕ್ಸಿಡೆಂಟ್‌ನಲ್ಲಿ ಕೈಗೆ ಪೆಟ್ಟು ಮಾಡಿಕೊಂಡ ಮೇಲೆ ತುಂಬಾ ರೆಸ್ಟ್ ಮಾಡಬೇಕಾಯಿತು. ಹೀಗೆ ರೆಸ್ಟ್ ಮಾಡಿಕೊಂಡಿದ್ದಕ್ಕೆ ಸಿಕ್ಕಾಪಟ್ಟೆದಪ್ಪ ಆಗಿದ್ದೇನೆ. ಡಾಕ್ಟರ್ ಹೇಳಿದ್ದರಿಂದ ಇಲ್ಲಿವರೆಗೂ ಜಿಮ್‌ಗೆ ಹೋಗಿ ವರ್ಕ್ಔಟ್ ಮಾಡಿಲ್ಲ. ಇಲ್ಲಿಂದ ಎಂದಿನಂತೆ ವರ್ಕ್ಔಟ್ ಶುರು ಮಾಡುತ್ತೇನೆ.
10. ಯಾರ್ಯಾರು ಯಾವ ಯಾವ ರೀತಿ ಯಜಮಾನ ಅಂದರೆ ನಾನು ಕೋಪದ ಯಜಮಾನ. ಅಂಬರೀಶ್ ಅಪ್ಪಾಜಿ ಅವರು ಪ್ರೀತಿಯ ಯಜಮಾನ. ಕನ್ನಡ ಚಿತ್ರರಂಗದಲ್ಲಿ ನಿಜವಾದ ಯಜಮಾನ ಸಾಹಸ ಸಿಂಹ ಡಾ ವಿಷ್ಣುವರ್ಧನ್. ಯಾಕೆಂದರೆ ಯಾರ ಇಮೇಜ್ ಯಾರಿಂದರೂ ನಾವು ದೂರ ಮಾಡಕ್ಕೆ ಆಗಲ್ಲ. ಮಯೂರ, ಬಂಗಾರದ ಮನುಷ್ಯ ಅಂದಾಗ ಡಾ ರಾಜ್‌ಕುಮಾರ್, ಮೃಗಾಲಯ ಅಂದಾಗ ಅಂಬರೀಶ್ ಹೇಗೆ ನೆನಪಾಗುತ್ತಾರೋ ಹಾಗೆ ಯಜಮಾನ ಅಂದಾಗ ವಿಷ್ಣು ಸಾರ್ ನೆನಪಿಗೆ ಬರುತ್ತಾರೆ.