ಬಹು ನಿರೀಕ್ಷಿತ ಸ್ಯಾಂಡಲ್‌ವುಡ್ ಚಿತ್ರ 'ಯಜಮಾನ'ದಲ್ಲಿ ಇಬ್ಬರು ನಟಿಯರಿದ್ದು, ಅದರಲ್ಲಿ 'ಬಸಣಿ ನಾಚ್' ಹಾಡಿಗೆ ಹೆಜ್ಜೆ ಹಾಕಿರುವ ತಾನ್ಯ ಬಗ್ಗೆ ಕನ್ನಡಿಗಿರಿಗೆ ಸಿಕ್ಕಾಪಟ್ಟೆ ಕುತೂಹಲವಿದೆ. ಅಷ್ಟಕ್ಕೂ ಈ ಹಾಡಿಗೆ ಅದ್ಭುತವಾಗಿ ಹೆಜ್ಜೆ ಹಾಕಿರುವ ತಾನ್ಯ ಬಗ್ಗೆ ನಿಮಗೆ ಗೊತ್ತಿರದ ವಿಚಾರವಿಲ್ಲಿದೆ ನೋಡಿ...

ದಕ್ಷಣ ಭಾರತದ ಮಸ್ಟ್ ವಾಚ್ ಸಿನಿಮಾಗಳ ಪಟ್ಟಿಯಲ್ಲಿ ಸ್ಯಾಂಡಲ್‌ವುಡ್ ಸಿನಿಮಾ 'ಯಜಮಾನ' ಇದೀಗ ಮೊದಲನೇ ಸ್ಥಾನದಲ್ಲಿದೆ. ದರ್ಶನ್‌ಗೆ ಜೋಡಿಯಾಗಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಒಂದು ಭಾಗದಲ್ಲಿ ಕಾಣಿಸಿಕೊಂಡರೆ, ಮತ್ತೊಂದರಲ್ಲಿ ಮಾಡೆಲ್ ತಾನ್ಯ ಹೋಪ್ ಮಿಂಚಿದ್ದಾರೆ.

ಮಾಡೆಲ್ ಕಮ್ ನಟಿಯಾಗಿರುವ ತಾನ್ಯ ಯಾರು?

ಖಾತ ಉದ್ಯಮಿಯೊಬ್ಬರ ಪುತ್ರಿ ತಾನ್ಯ ಮಾಡೆಲ್ ಕಮ್ ನಟಿ. 2015ರ ಮಿಸ್ ಇಂಡಿಯಾ ಕೋಲ್ಕತಾ ಪಟ್ಟ ಗೆದ್ದು, ಫೇಮಿನಾ ಮಿಸ್ ಇಂಡಿಯಾ 2015ರ ಫೈನಲ್ಸ್‌ಗೂ ಆಯ್ಕೆಯಾಗಿದ್ದರು.

ಸೂಪರ್ ಮಾಡೆಲ್ ಆಗಿರುವ ಈ ತಾನ್ಯ ಕನ್ನಡ ಚಿತ್ರ ಒಪ್ಪಿಕೊಳ್ಳಲು ಬಲವಾದ ಕಾರಣವಿದೆ. ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದರೆ ಇವರಿಗೆ ವಿಪರೀತ ಇಷ್ಟವಂತೆ. ಈ ಚಿತ್ರದ ನಾಯಕ ದರ್ಶನ್ ಎಂಬ ಕಾರಣಕ್ಕೆ ಚಿತ್ರವನ್ನು ಒಪ್ಪಿಕೊಂಡರಂತೆ. ಇದು ಅವರ ಮೊದಲ ಕನ್ನಡ ಸಿನಿಮಾ.

 

 

'ಸರಿ, ಶೂಟಿಂಗ್ ಆರಂಭವಾಯಿತು. ದರ್ಶನ್ ನೋಡಿದಾಗ ಎಲ್ಲಾ ಡೈಲಾಗ್‌ಗಳನ್ನೇ ಮರೆತಿದ್ದೆ,' ಎಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ನಟಿ ಹೇಳಿಕೊಂಡಿದ್ದರು.

ದೊಡ್ಡ ಉದ್ಯಮಿ ಪುತ್ರಿಯಾಗಿರುವ ತಾನ್ಯಾಗೆ 2-3 ಬಾಡಿಗಾರ್ಡ್ಸ್ ಸದಾ ಜತೆಗಿರುತ್ತಾರೆ. ತಮ್ಮ ಶ್ರೀಮಂತಿಕೆ ತೋರಿಸದೇ ನಟನೆಯಲ್ಲಿ ತಾನ್ಯ ಅದ್ಭುತವಾಗಿ ಭಾಗಿಯಾಗುತ್ತಿದ್ದರು ಎನ್ನುವುದು 'ಯಜಮಾನ' ಚಿತ್ರ ತಂಡದ ಅಭಿಪ್ರಾಯ. ಈ ಚಿತ್ರ ತಮಗೆ ಬಿಗ್ ಓಪನಿಂಗ್ ಕೊಡುತ್ತದೆ ಎಂದು ತಾನ್ಯ 'ಹೋಪ್' ಇಟ್ಟು ಕೊಂಡಿದ್ದಾರೆ.