ಟ್ರ್ಯಾಕ್ಟರ್ ಓಡಿಸಿದ ಯಜಮಾನ/ ರೈತನ ಮಿತ್ರನ ಜತೆ ಚಾಲೆಂಜಿಂಗ್ ಸ್ಟಾರ್ / ಗೆಳೆಯರನ್ನ ಅಕ್ಕ-ಪಕ್ಕ ಕೂಡಿಸಿಕೊಂಡು ಟ್ರ್ಯಾಕ್ಟರ್ ಚಲಾಯಿಸಿದ  ದಾಸ/ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಬೆಂಗಳೂರು(ಜು. 14) ಸರಳತೆಗೆ ಇನ್ನೊಂದು ಹೆಸರು ಚಾಲೆಂಜಿಂಗ್ ಸ್ಟಾರ್ ದರ್ಶನ್ . ವಾಹನಗಳ ಮೇಲೆ ಮತ್ತು ಪ್ರಾಣಿಗಳ ಮೇಲೆ ದರ್ಶನ್ ಅವರಿಗೆ ಸಖತ್ ಪ್ರೀತಿ. ಪೋಟೋಗ್ರಫಿಯೂ ಅಚ್ಚುಮೆಚ್ಚು.

ಇದೀಗ ದರ್ಶನ್ ರೈತನ ಮಿತ್ರ ಟ್ರ್ಯಾಕ್ಟರ್ ಓಡಿಸಿ ಮನಗೆದ್ದಿದ್ದಾರೆ. ಗೆಳೆಯರನ್ನ ಅಕ್ಕ-ಪಕ್ಕ ಕೂಡಿಸಿಕೊಂಡು ಟ್ರ್ಯಾಕ್ಟರ್ ಚಲಾಯಿಸಿದ ಯಜಮಾನನ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ದರ್ಶನ್ ಮೇಕಪ್ ಮ್ಯಾನ್ ಇನ್ನಿಲ್ಲ; ಕಂಬನಿ ಮಿಡಿದ ದಾಸ

ಸತತ ಪರಿಶ್ರಮದಿಂದಲೇ ಚಿತ್ರರಂಗದಲ್ಲಿ ಸಾಧನೆಯ ಉತ್ತುಂಗಕ್ಕೆ ಏರಿದವರು ದರ್ಶನ್. ಮೆಜೆಸ್ಟಿಕ್ ಚಿತ್ರದ ಮೂಲಕ ಪದಾರ್ಪಣೆ ಮಾಡಿ ದಾಸ, ಕರಿಯನಾಗಿ ಮಿಂಚಿ ಯಜಮಾನರಾದವರು.

ಟ್ರ್ಯಾಕ್ಟರ್ ಓಡಿಸಿರೋ ವೀಡಿಯೋ ಮತ್ತು ಪಿಕ್ಟರ್ ಅನ್ನ ಡಿಟೀಮ್ 7999 ಇನ್ ಸ್ಟಾ ಪೇಜ್ ಅಲ್ಲಿ ಹಂಚಿಕೊಂಡಿದೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ನೀವು ನೋಡಿಕೊಂಡು ಬನ್ನಿ..

View post on Instagram