ಕ್ರಾಂತಿ ಚಿತ್ರದ ಬಳಿಕ ನಟ ದರ್ಶನ್ ಅಭಿನಯದ ಕಾಟೇರ ಚಿತ್ರವು ಮುಹೂರ್ತ ಆಚರಸಿಕೊಂಡು ಶೂಟಿಂಗ್ ಶುರು ಮಾಡಿಕೊಂಡಿತ್ತು. ತರುಣ್ ಸುಧೀರ್ ನಿರ್ದೇಶನದ ಕಾಟೇರ ಚಿತ್ರದ ಹೆಚ್ಚಿನ ಭಾಗದ ಶೂಟಿಂಗ್ ಕನಕಪುರದ ಸೆಟ್ ಒಂದರಲ್ಲಿ ನಡೆದಿದೆ ಎನ್ನಲಾಗುತ್ತಿದೆ. 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' ಚಿತ್ರವು ಇದೇ ತಿಂಗಳು 29ರಂದು (29 ಡಿಸೆಂಬರ್ 2023) ರಂದು ಬಿಡುಗಡೆ ಆಗಲಿದೆ, ಈಗಾಗಲೇ ಚಿತ್ರದ ಪ್ರಮೋಶನ್‌ಗೆ ಸಂಬಂಧಪಟ್ಟು ಚಿತ್ರದ ಪೋಸ್ಟರ್, ಟ್ರೇಲರ್ ಬಿಡುಗಡೆಯಾಗಿ ಸಖತ್ ಕ್ರೇಜ್ ಸೃಷ್ಟಿಸಿದೆ. ಇದೀಗ ಚಿತ್ರತಂಡವು ಹೊಸದೊಂದು ಘೋಷಣೆ ಹೊರಡಿಸಿದೆ. 
'ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಆರಾಧನ ರಾಮ್ ಅಭಿನಯದ 'ಕಾಟೇರ' ಚಿತ್ರದ ಮೊದಲ ಗೀತೆ "ಪಸಂದಾಗವನೆ" ಇದೇ ಡಿಸೆಂಬರ್ 4 ರಂದು ಮಧ್ಯಾಹ್ನ 12:30 ಕ್ಕೆ ನಿಮ್ಮ ಮುಂದೆ..' ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಬರೆದು ಹರಿಬಿಟ್ಟಿದೆ. 

ಸ್ಯಾಂಡಲ್‌ವುಡ್‌ ಕನಸಿನ ರಾಣಿ, ಹಲವು ದಶಕಗಳ ಹಿಂದೆ ಸೂಪರ್ ಸ್ಟಾರ್ ನಟಿಯಾಗಿ ಮೆರೆದ ಮಾಲಾಶ್ರೀ ಮಗಳು ಆರಾಧನಾ ರಾಮ್ ಕಾಟೇರ ಚಿತ್ರದ ನಾಯಕಿ. ಆರಾಧನಾಗೆ ಇದು ಸಿನಿರಂಗದಲ್ಲಿ ಮೊಟ್ಟಮೊದಲ ಚಿತ್ರವಾಗಿದೆ. ಮಾಲಾಶ್ರೀ ಮಗಳು ಎಂಬ ಕಾರಣಕ್ಕೇ ಆರಾಧನಾರನ್ನು ನೋಡಲು ಹಲವರು ತುದಿಗಾಲಲ್ಲಿ ನಿಂತಿದ್ದಾರೆ. ರಾಕ್‌ಲೈನ್ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗಿರುವ ಕಾಟೇರ ಚಿತ್ರವು 70ರ ದಶಕದ ಕಥೆಯೊಂದನ್ನು ಹೇಳಲು ಹೊರಟಿದೆ ಎನ್ನಲಾಗಿದೆ. 

ಕ್ರಾಂತಿ ಚಿತ್ರದ ಬಳಿಕ ನಟ ದರ್ಶನ್ ಅಭಿನಯದ ಕಾಟೇರ ಚಿತ್ರವು ಮುಹೂರ್ತ ಆಚರಸಿಕೊಂಡು ಶೂಟಿಂಗ್ ಶುರು ಮಾಡಿಕೊಂಡಿತ್ತು. ತರುಣ್ ಸುಧೀರ್ ನಿರ್ದೇಶನದ ಕಾಟೇರ ಚಿತ್ರದ ಹೆಚ್ಚಿನ ಭಾಗದ ಶೂಟಿಂಗ್ ಕನಕಪುರದ ಸೆಟ್ ಒಂದರಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ಕನಕಪುರದ ಅನೇಕ ಹಳ್ಳಿಗಳಲ್ಲಿ ಕೂಡ ಈ ಚಿತ್ರದ ಹಲವು ಸನ್ನಿವೇಶಗಳನ್ನು ಸೆರೆ ಹಿಡಿಯಲಾಗಿದೆ. .

ಸೋಮವಾರ ಡಿಸೆಂಬರ್ 4ರಂದು ಮದ್ಯಾಹ್ನ 12.30ಕ್ಕೆ ಬಿಡುಗಡೆಯಾಗಲಿರುವ ಹಾಡಿಗಾಗಿ ಈಗ ದರ್ಶನ್ ಅಭಿಮಾನಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದಾರೆ. ಕಾಟೇರ ಚಿತ್ರ ಕೂಡ ಇನ್ನೇನು ಈ ತಿಂಗಳ ಕೊನೆಯಲ್ಲಿ ತೆರೆಗೆ ಬರಲಿದೆ. ಪ್ರಮೊಶನ್ ಕಸರತ್ತು ನಡೆಯುತ್ತಿದ್ದು, ಒಂದೊಂದೇ ಹಂತವನ್ನು ದಾಟುತ್ತ ಕಾಟೇರ ಚಿತ್ರವು ಸ್ಯಾಂಡಲ್‌ವುಡ್ ಪ್ರೇಕ್ಷಕರಿಗೆ ಹತ್ತಿರವಾಗುವತ್ತ ಸಾಗುತ್ತಿದೆ. ಕ್ರಾಂತಿ ಅಮದುಕೊಂಡಷ್ಟು ಸಕ್ಸಸ್ ದಾಖಲಿಸಿಲ್ಲ. ಈ ಕಾರಣಕ್ಕೆ ನಟ ದರ್ಶನ್ ಅಭಿಮಾನಿಗಳು ಮುಂಬರುವ ಕಾಟೇರ ಚಿತ್ರವು ಸೂಪರ್ ಸಕ್ಸಸ್ ಆಗಲಿ ಎಂದು ಹಾರೈಸುತ್ತಿದ್ದಾರೆ, ಕಾಯುತ್ತಿದ್ದಾರೆ. 

View post on Instagram