ಸಂಬರಗಿ ವಿರುದ್ಧ ಚಂದ್ರಚೂಡ್ ಪೊಲೀಸ್ ಆಯುಕ್ತರಿಗೆ ದೂರು
ಪ್ರಚಾರಕ್ಕಾಗಿ ನಟರು, ರಾಜಕಾರಣಿಗಳ ಬ್ಲ್ಯಾಕ್‌ಮೇಲ್‌ಗೆ ಯತ್ನ. ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ದೂರು ದಾಖಲಿಸಿದ ಚಕ್ರವರ್ತಿ ಚಂದ್ರಚೂಡ್
ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವರು ಚಲನಚಿತ್ರದ ಕಲಾವಿದರು ಹಾಗೂ ರಾಜಕಾರಣಿಗಳ ಮೇಲೆ ಸುಳ್ಳು ಆರೋಪ ಹೊರಿಸಿ ಬೆದರಿಸುತ್ತಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಡ್ರಗ್ ಕೇಸ್: ಅನುಶ್ರೀ ಆಸ್ತಿ ಮೂಲ ಕೆದಕಿದ ಪ್ರಶಾಂತ್ ಸಂಬರಗಿಸಮಾಜದ ಎಲ್ಲ ಪಿಡುಗು ಹಾಗೂ ಅನೈತಿಕ ಚಟುವಟಿಕೆಗಳನ್ನು ಸ್ವಂತ ಪ್ರಚಾರಕ್ಕೆ ಹಾಗೂ ಬ್ಲ್ಯಾಕ್‌ಮೇಲ್ ದಂಧೆಗೆ ಪ್ರಶಾಂತ್ ಸಂಬರಗಿ ಬಳಸಿಕೊಳ್ಳುತ್ತಿದ್ದಾನೆ. ಅಪರಾಧ ಪ್ರಕರಣಗಳು ಪೊಲೀಸರ ವಿಚಾರಣೆ ಹಂತದಲ್ಲಿರುವಾಗ ತನಿಖೆ ದಿಕ್ಕನ್ನೇ ಬದಲಿಸಿ ಗೊಂದಲ ಸೃಷ್ಟಿಮಾಡಿ ತನ್ನ ದುರುದ್ದೇಶವನ್ನು ಆತ ಸಾಧಿಸುತ್ತಿರುವುದು ಕಂಡು ಬಂದಿದೆ. ಈತನ ಸಾಲು ಸಾಲು ಸುಳ್ಳುಗಳಿಂದ ಪೊಲೀಸ್ ತನಿಖೆಗೆ ಸಹ ಆಡಚಣೆಯಾಗುತ್ತಿದೆ. ಇದೂ ಸಮಾಜಕ್ಕೆ ಆಘಾತಕಾರಿ ವಿಷಯವಾಗಿದೆ ಎಂದು ಚಂದ್ರಚೂಡ್ ಕಿಡಿಕಾರಿದ್ದಾರೆ.
ಮೂರು ವರ್ಷಗಳ ಹಿಂದೆ ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟಿ ಶೃತಿ ಹರಿಹರನ್ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದ ಕ್ರೈಸ್ತ ಮಿಷನರಿಗಳಿಂದ ಹಣ ಪಡೆದು ಭಾರತ ವಿರೋಧಿ ಕೃತ್ಯದಲ್ಲಿ ತೊಡಗಿದ್ದಾರೆ ಎಂಬ ಆರೋಪಕ್ಕೆ ಆತ ಇದುವರೆಗೆ ಯಾವುದೇ ದಾಖಲೆ ನೀಡಿಲ್ಲ. ಹಾಗೆಯೇ ಶ್ರೀಲಂಕಾ ದೇಶದ ಕ್ಯಾಸಿನೋಗೆ ಹೋಗಿ ಶಾಸಕ ಜಮೀರ್ ಮೋಜು ಮಾಡುತ್ತಿದ್ದಾರೆ ಎಂಬ ಆರೋಪಕ್ಕೂ ಆತ ಪುರಾವೆ ಕೊಟ್ಟಿಲ್ಲ. ಇವೆಲ್ಲ ಆತನ ಬ್ಲ್ಯಾಕ್‌ಮೇಲ್‌ಗೆ ಪ್ರಮುಖ ಕೃತ್ಯಗಳಾಗಿವೆ ಎಂದು ಆರೋಪಿಸಿದ್ದಾರೆ.