ಶಂಕರ್‌ ನಾಗ್ ಸಾವಿನ ಬಗ್ಗೆ ಇಂದಿಗೂ ಸಂಶಯ ಯಾಕೆ? ಅಲ್ಲಿ ಉತ್ತರ ಸಿಗದ ಪ್ರಶ್ನೆಗಳು ಇವೆಯಲ್ಲ!

ಶಂಕರ್‌ ನಾಗ್ ಅವರು ಧಾರವಾಡದಲ್ಲಿ ಇತ್ತೆಂದು ಅಂದುಕೊಂಡಿದ್ದ 'ಜೋಕುಮಾರಸ್ವಾಮಿ' ಸಿನಿಮಾ ಮುಹೂರ್ತಕ್ಕೆ ಹೊರಟಿದ್ದರು. ಆದರೆ ಅದು ಕಾರಣಾಂತರಗಳಿಂದ ಕ್ಯಾನ್ಸಲ್ ಆಗಿತ್ತು. ಅಚ್ಚರಿ ಎಂಬಂತೆ, ಇಡೀ ಟೀಮ್‌ಗೆ ಆ ಬಗ್ಗೆ ಗೊತ್ತಿದ್ದರೂ ಶಂಕರ್‌ ನಾಗ್ ಅವರಿಗೆ ಆ ಸುದ್ದಿ ತಲುಪಿರಲಿಲ್ಲ..

Debate about kannada actor Shankar Nag tragic death controversy srb

ಕನ್ನಡದ ನಟ-ನಿರ್ದೇಶಕ ಶಂಕರ್‌ನಾಗ್ (Shankar Nag) ಅವರ ಸಾವಿನ ಬಗ್ಗೆ ಇಂದಿಗೂ ಹಲವು ಜನರಿಗೆ ಸಂಶಯವಿರೋದು ಯಾಕೆ ಗೊತ್ತಾ? ಜಗತ್ತಿನಲ್ಲಿ ಹಾಗೂ ಭಾರತದಲ್ಲಿ ಎಲ್ಲೆಲ್ಲಿ ರಸ್ತೆಗಳಿವೆಯೋ ಎಲ್ಲೆಲ್ಲಿ ವಾಹನಗಳಿವೆಯೋ ಎಲ್ಲಾ ಕಡೆ ಅಪಘಾತಗಳು ಸಹಜ. ಎಕ್ಸಿಡೆಂಟ್ ಪ್ರಮಾಣದಲ್ಲಿ ಹೆಚ್ಚುಕಡಿಮೆ ಇರಬಹುದು. ಆದರೆ, ಅಪಘಾತಗಳು ಎಲ್ಲಾ ಕಡೆ ಸಂಭವಿಸುತ್ತವೆ. ಆದರೆ, ನಟ ಶಂಕರ್‌ನಾಗ್ ಸಾವಿನಲ್ಲಿ ಮಾತ್ರ ಅಂತಹ ಪರಿಹಾರವೇ ಆಗದ ಸಂಶಯವನ್ನು ಜನರು ವ್ಯಕ್ತಪಡಿಸಲು ಕಾರಣವೇನು? ಇಲ್ಲಿದೆ ಕೆಲವು ಸಂಗತಿಗಳು ನೋಡಿ.. 

ಮೊದಲನೆಯದಾಗಿ ನಟ ಶಂಕರ್‌ ನಾಗ್ ಅವರು ಧಾರವಾಡದಲ್ಲಿ ಇತ್ತೆಂದು ಅಂದುಕೊಂಡಿದ್ದ 'ಜೋಕುಮಾರಸ್ವಾಮಿ' ಸಿನಿಮಾ (Jokumaraswamy) ಮುಹೂರ್ತಕ್ಕೆ ಹೊರಟಿದ್ದರು. ಆದರೆ. ಆ ಚಿತ್ರದ ಮುಹೂರ್ತ ಅಂದು ಕಾರಣಾಂತರಗಳಿಂದ ಕ್ಯಾನ್ಸಲ್ ಆಗಿತ್ತು. ಆದರೆ, ಇಡೀ ಟೀಮ್‌ಗೆ ಆ ಬಗ್ಗೆ ಗೊತ್ತಿದ್ದರೂ ಶಂಕರ್‌ ನಾಗ್ ಅವರಿಗೆ ಆ ಸುದ್ದಿ ತಲುಪಿರಲಿಲ್ಲ. ನಿರ್ದೇಶಕ ಹಾಗೂ ಶಂಕರ್‌ ನಾಗ್ ಅವರ ಗುರುಗಳ ಸಮಾನರಾದ ಗಿರೀಶ್ ಕಾರ್ನಾಡ್ ಅವರು ಮುಹೂರ್ತ ಕ್ಯಾನ್ಸಲ್ ಆಗಿರುವ ಸಂಗತಿಯನ್ನು ಶಂಕರ್‌ ನಾಗ್ ಅವರಿಗೆ ತಲುಪಿಸಲು ಹರಸಾಹಸ ಪಟ್ಟರೂ ಅದು ಸಾಧ್ಯವೇ ಆಗಿರಲಿಲ್ಲ. 

ಅಂದು ಬಾಲ್ ಬಾಯ್ ಸುದೀಪ್‌ಗೆ ಕ್ರಿಕೆಟರ್ ಸಿದ್ದು ಕೊಟ್ಟಿದ್ರು 'ಪವರ್' ಬ್ಯಾಟ್; ಈಗೇನಾಯ್ತು ನೋಡಿ!

ಬೆಂಗಳೂರಿನಿಂದ ಜೋಕುಮರಸ್ವಾಮಿ ಮುಹೂರ್ತಕ್ಕೆ ಹೊರಟಿದ್ದ ಶಂಕರ್‌ ನಾಗ್ ಅವರ ಜೊತೆ ಅವರ ಪತ್ನಿ ಅರುಂಧತಿ ನಾಗ್, ಮಗಳು ಕಾವ್ಯಾ ಹಾಗೂ ಡ್ರೈವರ್ ಲಿಂಗಣ್ಣ ಇದ್ದರು. ಅಂದು ಕಾರು ಡ್ರೈವಿಂಗ್ ಮಾಡುತ್ತಿದ್ದುದು ಡ್ರೈವರ್ ಲಿಂಗಣ್ಣ ಎಂದು ಅಪಘಾತದ ಬಳಿಕ ಸ್ಥಳದಲ್ಲಿ ನೋಡಿರುವ ಪ್ರತ್ಯಕ್ಷದರ್ಶಿಗಳೇ ಹೇಳಿದ್ದಾರೆ. ದಾವಣಗೆರೆ ಸಿಟಿಯಿಂದ ಸ್ವಲ್ಪ ದೂರದಲ್ಲಿರುವ ಆನಗೋಡು ಊರಿನ ಸಮೀಪ ಬಂದಾಗ ಎದುರುಗಡೆಯಿಂದ ಬರುತ್ತಿದ್ದ ಲಾರಿಗೆ ಶಂಕರ್‌ ನಾಗ್ ಕುಟುಂಬವಿದ್ದ ಕಾರು ಹೋಗಿ ಗುದ್ದಿದೆ. ನಟ ಶಂಕರ್‌ ನಾಗ್ ಸ್ಥಳದಲ್ಲೇ ನಿಧನರಾಗಿದ್ದಾರೆ. 

ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಲಿಂಗಣ್ಣ (Linganna) ಅವರು ಮಾರ್ಗಮಧ್ಯೆ ಅಸು ನೀಗಿದ್ದಾರೆ. ಆದರೆ, ಶಂಕರ್‌ ಪತ್ನಿ ಅರುಂಧತಿ ನಾಗ್ (Arundhati Nag) ಹಾಗೂ ಮಗಳು ಕಾವ್ಯಾ (Kavya Nag) ಚಿಕ್ಕಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿ, ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದು ಬದುಕುಳಿದಿದ್ದಾರೆ. ಈ ರೀತಿಯ ಅಪಘಾತಗಳು ಭಾರತದ ಹೈವೇಗಳಲ್ಲಿ ಅಗಾಗ ನಡೆಯುತ್ತಲೇ ಇರುತ್ತವೆ. ಆದರೆ ಈ ಎಕ್ಸಿಡೆಂಟ್ ಮಾತ್ರವೇ ಯಾಕೆ ಅಷ್ಟೊಂದು ಸಂಶಯಯುಕ್ತವಾಗಿದೆ? ಅದು ಅಪಘಾತವಲ್ಲ, ಕೊಲೆ ಎಂದು ಕೆಲವರು ಹೇಳಲು ಕಾರಣವೇನು? 

ದರ್ಶನ್-ಉಪೇಂದ್ರ ಜೋಡಿ 'ಕಪಾಲಿ' ಚಿತ್ರ ಸದ್ಯದಲ್ಲೇ ಶುರು; ಈ ಶುಭ ಸುದ್ದಿಗೆ ಬೆಚ್ಚಿಬಿದ್ದ ಕರುನಾಡು!

ಲಭ್ಯವಿರುವ ಮಾಹಿತಿ ಪ್ರಕಾರ, ಅಲ್ಲಿ ಆನಗೋಡು ಮುಖ್ಯ ರಸ್ತೆಯಲ್ಲಿ ಕಳೆದ ಮೂರು ದಿನಗಳಿಂದ ಲಾರಿಯೊಂದು ಕೆಟ್ಟು ನಿಂತಿತ್ತು. ಆದರೆ, ಆ ಲಾರಿಯನ್ನು ಸ್ಥಳಾಂತರಿಸಲು ಅಥವಾ ರಿಪೇರಿ ಮಾಡಲು ಯಾಕೆ ಯಾರೂ ಬರಲಿಲ್ಲ? ಆ ಲಾರಿ ಅಲ್ಲಿ ನಿಂತಿದ್ದ ಕಾರಣಕ್ಕೆ ಡ್ರೈವರ್ ಲಿಂಗಣ್ಣ ಅವರಿಗೆ ಎದುರಿನಿಂದ ಬರುತ್ತಿದ್ದ ಲಾರಿ ಕಾಣದೇ ಕಾರು ಪಾಸ್ ಆಗಲು ಹೋಗಿ ಅಪಘಾತ ಸಂಭವಿಸಿದೆ. ಆದರೆ, ಅಚ್ಚರಿ ಎಂಬಂತೆ ಆ ಎರಡೂ ಲಾರಿ ಓನರ್ ಯಾರು ಎಂಬುದು ತನಿಖೆ ಬಳಿಕವೂ ಜನಸಾಮಾನ್ಯರ ಪಾಲಿಗೆ ನಿಗೂಢವಾಗಿಯೇ ಉಳಿದಿದೆ. 

ಇನ್ನು ಕೆಟ್ಟು ನಿಂತಿದ್ದ ಆ ಲಾರಿ ಆ ಬಳಿಕ ಮಾಯವಾಗಿದ್ದು ಹೇಗೆ? ಆ ಲಾರಿ ಯಾರದ್ದು? ಆ ಬಗ್ಗೆ ಸೂಕ್ತ ತನಿಖೆ ಆಗಲಿಲ್ಲವೇ ಅಥವಾ ಅದರ ಮಾಲೀಕರ ಬಗ್ಗೆ ಎಲ್ಲೂ ಸರಿಯಾದ ಮಾಹಿತಿ ಯಾಕೆ ಸಿಗಲಿಲ್ಲ? ಜೊತೆಗೆ, ಎದುರುಗಡೆಯಿಂದ ಬಂದ ಲಾರಿ ಯಾರದ್ದು? ಅವರಿಗೆ ದೂರದಿಂದಲೇ ಎದುರಿನಿಂದ ಬರುತ್ತಿದ್ದ ಕಾರು ಏಕೆ ಕಾಣಲಿಲ್ಲ? ಅಥವಾ, ಈ ಕಡೆಯಿಂದ ಹೋಗುತ್ತಿದ್ದ ಕಾರಿಗೆ ಯಾಕೆ ಆ ಕಡೆಯಿಂದ ಬರುತ್ತಿದ್ದ ಲಾರಿ ಏಕೆ ಕಾಣಲಿಲ್ಲ? ಎರಡೂ ವಾಹನಗಳು ಅಷ್ಟೊಂದು ವೇಗದಿಂದ ಚಲಿಸುತ್ತಿದ್ದವೇ? 

ತಮಾಷೆ, ಆಟಗಳು ಮುಗಿದಿವೆ, ಈಗ ಬಿಸಿನೆಸ್ ಶುರು ಮಾಡೋಣ: ಕ್ಯಾ ಬಾತ್ ಹೈ ರಶ್ಮಿಕಾ ಅಂದ್ರಾ?

ಕೆಲವರು ಹೇಳುವ ಪ್ರಕಾರ, ಆ ಲಾರಿಯ ಹಿಂದುಗಡೆಯೇ ಆ ಮತ್ತೊಂದು ಲಾರಿ ನಿಂತಿತ್ತು. ಕಾರು ಅಲ್ಲಿ ಪಾಸ್ ಆಗುವ ಸಮಯಕ್ಕೆ ಸರಿಯಾಗಿ ಅದು ಅಲ್ಲಿಂದ ಸರಿದು ಮುಂದೆ ಬಂತು. ಈ ಕಾರಣದಿಂದ ಎರಡೂ ವಾಹನಗಳಿಗೆ ಎದುರುಗಡೆ ಇನ್ನೊಂದು ವಾಹಬರುತ್ತಿದೆ ಎಂಬುದು ತಿಳಿಯಲೇ ಇಲ್ಲ ಎನ್ನುತ್ತಾರೆ. ಆದರೆ, ತುಂಬಾ ಅಚ್ಚರಿ ಎನಿಸಿದರೂ ಸತ್ಯ ಏನೆಂದರೆ, ಇಂದಿಗೂ ಕೂಡ ಆ ಅಪಘಾತ ಸಂಭವಿಸಿದ್ದು ಹೇಗೆ ಎಂಬ ಬಗ್ಗೆ  ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳುತ್ತಾರೆ. 

ಅಪಘಾತದಲ್ಲಿ ಸತ್ತಿದ್ದು ನಟ ಶಂಕರ್‌ ನಾಗ್ ಎಂದು ಅಲ್ಲಿ ಬಂದ ಸ್ಥಳೀಯರಿಗೆ ಕೂಗಿ ಹೇಳಿದ್ದು ಅವರ ಪತ್ನಿ ಅರುಂಧತಿ ನಾಗ್ ಎನ್ನಲಾಗಿದೆ. ಬೆಳಗ್ಗಿನ ಜಾವ ಐದು ಗಂಟೆ ಸುಮಾರಿಗೆ ನಡೆದಿರುವ ಆ ಅಪಘಾತದ ವೇಳೆ ಡ್ರೈವರ್ ಬಿಟ್ಟು ಕಾರಿನಲ್ಲಿ ಇದ್ದವರೆಲ್ಲರೂ ನಿದ್ರಿಸುತ್ತಿದ್ದರೇ? ಅರುಂಧತಿ ಅವರಿಗೆ ಕಾರು ಎಕ್ಸಿಡೆಂಟ್ ಆದಾಗಲೇ ಎಚ್ಚರವಾಗಿದ್ದು, ಅಷ್ಟರಲ್ಲಿ ಶಂಕರ್‌ ನಾಗ ತೀರಿಕೊಂಡಿದ್ದರು ಎನ್ನಲಾಗಿದೆ. ಹಾಗಿದ್ದರೆ ಅಂದು ನಿಜವಾಗಿಯೂ ಏನಾಗಿತ್ತು? 

ಯಾರೂ ಸರಿಯಾಗಿ ಹೇಳಲಾಗದು. ಕಾರಣ, ಕಾರಿನಲ್ಲಿದ್ದ ಡ್ರೈವರ್ ಹಾಗೂ ಶಂಕರ್‌ ನಾಗ್ ಅವರು ತೀರಿಕೊಂಡಿದ್ದಾರೆ. ಅರುಂಧತಿ ನಾಗ್ ಅವರಿಗೆ ಅಪಘಾತವಾದ ಬಳಿಕವೇ ಏನಾಯ್ತು ಅಂತ ಗೊತ್ತಾಗಿದ್ದು, ಕಾವ್ಯಾ ಅಗ ಎರಡೂವರೆ ವರ್ಷದ ಮಗು. ಡ್ರೈವರ್ ಕೂಡ ಗಂಭೀರವಾಗಿ ಗಾಯಗೊಂಡಿದ್ದು ಜೀವ ಮಾತ್ರ ಉಳಿದಿತ್ತು ಅಷ್ಟೇ. ಆ ಸಮಯದಲ್ಲಿ ಹೈವೇನಲ್ಲಿ ಯಾರೂ ಅಲ್ಲಿ ಇರಲಿಲ್ಲ. ಅಕ್ಕಪಕ್ಕ ಮನೆಗಳೂ ಸಹ ಇರಲಿಲ್ಲ. ಇದ್ದರೂ ಹಾಗೆ ಆಗುತ್ತದೆ ಎಂದು ಗೊತ್ತಿದ್ದು ಅದನ್ನೇ ಕಾದುಕೊಂಡು ಇರಲು ಯಾರಿಗೂ ಸಾಧ್ಯವಿಲ್ಲ. 

ಶಾರುಖ್ ಜೊತೆಗಿರುವ ಐಶ್ ವಿಡಿಯೋ ವೈರಲ್; ಈ ಪಂಚರಂಗಿ ಆಟ ಸಾಕು ಅಂತಿರೋ ನೆಟ್ಟಿಗರು!

ಈ ಎಲ್ಲ ಕಾರಣಗಳಿಂದ ನಟ-ನಿರ್ದೇಶಕ ಶಂಕರ್‌ ನಾಗ್ ಅವರ ಸಾವನ್ನು ನಿಗೂಢ ಎಂದು ಹಲವರು ಚರ್ಚಿಸುತ್ತಾರೆ. ಆದರೆ ಅಪಘಾತ ಎಂದರೇನೇ ಗೊತ್ತಿಲ್ಲದೇ ಗೊತ್ತಾಗದಂತೆ ಕ್ಷಣಮಾತ್ರದಲ್ಲಿ ಆಗುವಂಥದು. ಆಮೇಲೆ ಟೈಂ ಸಿಕ್ಕಾಗ ಅದರ ಬಗ್ಗೆ ಬಹಳಷ್ಟು ಹೊತ್ತು ಚರ್ಚೆ ಮಾಡಬಹುದು. ಆದರೆ, ಎಕ್ಸಿಡೇಟ್ ಫ್ರಿಕ್ಷನ್ ಆಫ್ ಸೆಕೆಂಡ್‌ನಲ್ಲಿ ನಡೆದುಬಿಡುತ್ತದೆ. ಹೀಗಿರುವಾಗ ಆವತ್ತು ಅಲ್ಲಿ ನಿಜವಾಗಿಯೂ ಏನಾಯ್ತು ಅಂತ ಜನಸಾಮಾನ್ಯರಿಗೆ ಸತ್ಯವಾಗಿಯೂ ಹೇಳೋರು ಯಾರು? ಆದರೆ ಸಂದೇಹ ಪಡಲು ಕೆಲವರಿಗೆ ಕೆಲವು ಕಾರಣಗಳಂತೂ ಇವೆ!

Latest Videos
Follow Us:
Download App:
  • android
  • ios