Asianet Suvarna News Asianet Suvarna News

ಪ್ರಜ್ವಲ್ ದೇವರಾಜ್‌ ಹೊಸ ಚಿತ್ರದಲ್ಲಿ ಬಾಲಿವುಡ್ ನಟ ಗೋವಿಂದ?

ಮೊದಲ ಬಾರಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಬಾಲಿವುಡ್ ನಟ ಗೋವಿಂದ. ಮಾತುಕತೆ ಫೈನಲ್ ಹಂತದಲ್ಲಿ...

Bollywood actor Govinda to join Prajwal devaraj new film project vcs
Author
Bangalore, First Published Sep 6, 2021, 10:50 AM IST
  • Facebook
  • Twitter
  • Whatsapp

ಡೈನಾಮಿಕ್ ಸ್ಟಾರ್ ಪ್ರಜ್ವಲ್ ದೇವರಾಜ್‌ ಅವರಿಗೆ 2021 ಸಖತ್ ಲಕ್ಕಿ ವರ್ಷ ಅನ್ಸುತ್ತೆ. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಕಥೆಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದೀಗ ಪ್ರಜ್ವಲ್ ಹೊಸ ಚಿತ್ರವೊಂದರಲ್ಲಿ ಬಾಲಿವುಡ್ ನಟ ಗೋವಿಂದ ಅಭಿನಯಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. 

'ನಾವು ಗೋವಿಂದ ಅವರೊಂದಿಗೆ ಮಾತುಕತೆ ಮಾಡುತ್ತಿರುವುದು ನಿಜ. ನಮ್ಮ ನಿರ್ಮಾಪಕ ನವೀಕ್ ಕುಮಾರ್ ಅವರು ಈಗಾಗಲೇ ಹಲವು ಸುತ್ತಿನ ಚರ್ಚೆ ಮಾಡಿದ್ದಾರೆ. ಅಧಿಕೃತ ಒಪ್ಪಿಗೆ ಸಿಗುವುದು ಬಾಕಿ ಇದೆ. ಎಲ್ಲವೂ ಅಂತಿಮಗೊಂಡ ಮೇಲೆ ಅಧಿಕೃತವಾಗಿ ಘೋಷಣೆ ಮಾಡಲಿದ್ದೇವೆ' ಎಂದು ನಿರ್ದೇಶಕ ಕಿರಣ್ ಹೇಳಿದ್ದಾರೆ. 

'ಎಂದೆಂದೂ ನಿನ್ನನು ಮರೆತು' ಹಾಡಿ ಕನ್ನಡಿಗರ ಹೃದಯ ಗೆದ್ದ ಬಾಲಿವುಡ್‌ ನಟ!

35 ವರ್ಷಗಳ ಕಾಲ ಬಾಲಿವುಡ್, ತಮಿಳು ಹಾಗೂ ಬಂಗಾಳಿ ಸಿನಿಮಾಗಳಲ್ಲಿ ನಟಿಸಿರುವ ಗೋವಿಂದ ಅವರ ಮೊದಲ ಕನ್ನಡ ಚಿತ್ರ ಇದಾಗಲಿದೆ. ಡಾ. ರಾಜ್‌ಕುಮಾರ್ ಅಪ್ಪಟ ಅಭಿಮಾನಿ ಗೋವಿಂದ ಯಾವುದೇ ಖಾಸಗಿ ಕಾರ್ಯಕ್ರಮವಾಗಲಿ ಅಥವಾ ಕನ್ನಡಿಗರನ್ನು ಭೇಟಿ ಮಾಡಲಿ ಎರಡು ಕನಸು ಚಿತ್ರದ ಎಂದೆಂದೂ ನಿನ್ನನ್ನು ಮರೆತು ಬದುಕಿರಲಾರೆ ಹಾಡನ್ನು ಹಾಡುತ್ತಾರೆ. ಇತ್ತೀಚಿಗೆ ಗೋವಿಂದ ಅವರನ್ನು ಭೇಟಿ ಮಾಡಿದ ನಟಿ ಹರ್ಷಿಕಾ ಪೂಣಚ್ಚ ಕೂಡಾ ಇದೇ ಹಾಡನ್ನು ಹಾಡಿಸಿ ಕನ್ನಡಿಗರೊಂದಿಗೆ ಮಾತನಾಡಿಸಿದ್ದರು.

"

Follow Us:
Download App:
  • android
  • ios