ಬಿಗ್‌ಬಾಸ್‌ ಖ್ಯಾತಿಯ ಗಾಯಕಿ ಶ್ರುತಿ ಪ್ರಕಾಶ್‌ ಈಗ ‘ಕಡಲ ತೀರದ ಭಾರ್ಗವ’ ಹೆಸರಿನ ಚಿತ್ರದಲ್ಲಿ ಅಭಿನಯಿಸಿದ್ದು, ಆ ಚಿತ್ರವೀಗ ಟ್ರೇಲರ್‌ ಮೂಲಕ ಸದ್ದು ಮಾಡುತ್ತಿದೆ. 

ಎರಡೂವರೆ ನಿಮಿಷದ ಆ ಟ್ರೇಲರ್‌ನಲ್ಲಿನ ಸಂಭಾಷಣೆ ಮತ್ತು ದೃಶ್ಯಾವಳಿ ತೀವ್ರ ಕುತೂಹಲ ಹುಟ್ಟಿಸುತ್ತಿವೆ. ಟ್ರೇಲರ್‌ ಈಗಾಗಲೇ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ನಟ

ಶ್ರೀ ಮುರಳಿ ಟ್ರೇಲರ್‌ ಲಾಂಚ್‌ ಮಾಡಿ ಚಿತ ತಂಡಕ್ಕೆ ಶುಭ ಹಾರೈಸಿದ್ದಾರೆ. ಹಾಗೆಯೇ ಚಿತ್ರದ ಪ್ರಚಾರಕ್ಕೂ ಸಾಥ್‌ ನೀಡಿದ್ದಾರೆ. ಇದು ಚಿತ್ರತಂಡಕ್ಕೆ ಖುಷಿ ಕೊಟ್ಟಿದೆ.

ಬಾಹುಬಲಿ ಚಿತ್ರದಲ್ಲಿ ಬಿಗ್‌ಬಾಸ್ ಸ್ಪರ್ಧಿ!

‘ಕನಸು ಬುದ್ಧಿವಂತರಿಗೆ ಜೀವನ ಆಗಿರುತ್ತೆ. ಅದೇ ಜೀವನ ದಡ್ಡರಿಗೆ ಕನಸಾಗಿ ಕಾಣುತ್ತೆ...’ಎನ್ನುವ ಸಂಭಾಷಣೆಯೊಂದಿಗೆ ಶುರುವಾಗುವ ಟ್ರೇಲರ್‌ನ ದೃಶ್ಯಾವಳಿ ಚಿತ್ರದ ಒಟ್ಟು ಕತೆ ಮತ್ತು ನಾಯಕನ ಪಾತ್ರದ ಬಗ್ಗೆ ಇನ್ನಿಲ್ಲದ ಕೌತುಕ ಮೂಡಿಸುತ್ತದೆ. ನಶೆ ಒಂದಿದ್ರೆ ಸಾಕು ಎನ್ನುವ ನಾಯಕನ ಬಗ್ಗೆಯೂ ಕುತೂಹಲ ಮೂಡುತ್ತದೆ. ಸದ್ಯಕ್ಕೀಗ ‘ಕಡಲ ತೀರದ ಭಾರ್ಗವ’ ರಿಲೀಸ್‌ಗೆ ರೆಡಿ ಆಗಿದೆ. ಭರತ್‌ ಗೌಡ, ವರುಣ್‌ ಹಾಗೂ ಶ್ರುತಿ ಪ್ರಕಾಶ್‌ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಪಣಗ ಸೋಮಶೇಖರ್‌ ನಿರ್ದೇಶನ ಈ ಚಿತ್ರಕ್ಕೆ ಅನಿಲ್‌ ಸಂಗೀತ ಹಾಗೂ ಕೀರ್ತನ್‌ ಪೂಜಾರಿ ಛಾಯಾಗ್ರಹಣವಿದೆ. ‘ಇದೊಂದು ತ್ರಿಕೋನ ಪ್ರೇಮ ಕತೆಯ ಜತೆಗೆ ಸಸ್ಪೆನ್ಸ್‌ ಥ್ರಿಲ್ಲರ್‌ ಜಾನರ್‌ ಸಿನಿಮಾ. ಇಬ್ಬರು ನಾಯಕರು ಹಾಗೂ ಓರ್ವ ನಾಯಕಿ ಸುತ್ತ ನಡೆಯುವ ಕತೆ. ಚಿತ್ರದ ಕತೆ ಮತ್ತು ನಿರೂಪಣೆ ಹೊಸ ಬಗೆಯಲ್ಲಿರುತ್ತದೆ’ ಎನ್ನುತ್ತಾರೆ ನಿರ್ದೇಶಕ ಸೋಮಶೇಖರ್‌.