ಬಿಗ್‌ಬಾಸ್‌ ಲಾಯರ್‌ ಜಗದೀಶ್‌ ವಿಡಿಯೋ ಮಾಡಿ ವಿಜಯಲಕ್ಷ್ಮಿ ಅವರನ್ನು ಸಂಬೋಧಿಸಿ ದರ್ಶನ್‌ ಅವರಿಗೆ ವಾರ್ನಿಂಗ್‌ ಕೊಟ್ಟಿದ್ದಾರೆ. ಏನದು ನೋಡಿ... 

ಕೊಲೆ ಕೇಸ್‌ನಲ್ಲಿ ಸದ್ಯ ಜಾಮೀನಿನ ಮೇಲೆ ಹೊರಗಡೆ ಇರುವ ನಟ ದರ್ಶನ್‌ ಮತ್ತು ಬಿಗ್‌ಬಾಸ್ ಖ್ಯಾತಿಯ ಲಾಯರ್‌ ಜಗದೀಶ್‌ ನಡುವಿನ ಸಮರ ಹಲವು ತಿಂಗಳುಗಳಿಂದಲೇ ನಡೆಯುತ್ತಲೇ ಇದೆ. ದರ್ಶನ್‌ ವಿರುದ್ಧ ಜಗದೀಶ್‌ ಅವರು ಹೇಳಿಕೆ ನೀಡಿದ್ದರಿಂದ ದರ್ಶನ್‌ ಅವರ ಅಭಿಮಾನಿಗಳು ಜಗದೀಶ್‌ ವಿರುದ್ಧ ಕೆಲವೊಂದು ಕೆಟ್ಟ ಶಬ್ದಗಳನ್ನು ಬಳಸಿ ಟೀಕೆ ಮಾಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜಗದೀಶ್ ಅವರು ನಟ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ಕೋಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಕೆಲ ದಿನಗಳ ಹಿಂದೆ ದೂರು ದಾಖಲಿಸಿದ್ದಾರೆ. ದರ್ಶನ್‌ ಅಭಿಮಾನಿಗಳಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಕಳೆದ 2 ದಿನಗಳಲ್ಲಿ ಸಾವಿರಕ್ಕೂ ಅಧಿಕ ಸಲ ಬೆದರಿಕೆ ಕರೆಗಳು ಬಂದಿವೆ. ದರ್ಶನ್ ಅಭಿಮಾನಿ ರಿಷಿ ಎಂಬಾತ ನನಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ. ಇದಕ್ಕೆ ಕಾರಣ ಸದ್ಯ ಆಸ್ಪತ್ರೆಗೆ ದಾಖಲಾಗಿರುವ ನಟ ದರ್ಶನ್ ಸೂಚನೆ ಕಾರಣ. ದರ್ಶನ್​ಗೆ ರಾಜ್ಯದಾದ್ಯಂತ ಅಭಿಮಾನಿಗಳಿದ್ದು, ಅವರಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ಬೇಕಾಗಿದೆ. ನಮಗೆ ರಕ್ಷಣೆ ಕೊಡುವ ಜೊತೆಗೆ ದರ್ಶನ್​ ಹಾಗೂ ರಿಷಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಗದೀಶ್​ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅದರ ಬೆನ್ನಲ್ಲೇ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹರಿಬಿಟ್ಟಿರುವ ಲಾಯರ್‌ ಜಗದೀಶ್‌ ಅವರು ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರನ್ನು ಉದ್ದೇಶಿಸಿ ಹೇಳಿಕೆ ನೀಡಿದ್ದಾರೆ. ಆರಂಭದಲ್ಲಿ ಇದು ವಿಜಯಲಕ್ಷ್ಮಿ ಅವರಿಗೆ ಕ್ಷಮೆ ಕೋರಿರುವ ವಿಡಿಯೋ ಎಂದೆನಿಸಿದರೂ, ಅದರಲ್ಲಿ ಕ್ಷಮೆ ಎಂಬ ಮಾತೆಲ್ಲಾ ಜಗದೀಶ್‌ ಅವರು ಆಡಿಲ್ಲ. ಬದಲಿಗೆ ತಮ್ಮ ಮತ್ತು ಪತ್ನಿ-ಮಕ್ಕಳ ವಿಷಯಕ್ಕೆ ದರ್ಶನ್‌ ಅವರು ಬಂದ್ರೆ ಸುಮ್ಮನಿರಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ದರ್ಶನ್‌ ಅವರನ್ನು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿರುವ ಜಗದೀಶ್‌ ಅವರು, ತಮ್ಮನ್ನು ಪ್ರೀತಿಸಿದವರ ವಿಷಯಕ್ಕೆ ದರ್ಶನ್‌ ಬಂದರೆ ನಾನು ಬಾಹುಬಲಿ ಆಗಬೇಕಾಗುತ್ತದೆ ಎಂದಿದ್ದಾರೆ.

ನಾನೊಬ್ಬ ದೊಡ್ಡ ಕುಡುಕ ಎನ್ನುತ್ತಲೇ ಡ್ರಿಂಕ್ಸ್‌ ಮಿಕ್ಸಿಂಗ್‌ ಬಗ್ಗೆ ರಿವೀಲ್‌ ಮಾಡಿದ ಶಿವರಾಜ್‌ಕುಮಾರ್‌: ವಿಡಿಯೋ ವೈರಲ್‌!

ಅವರ ಮಾತಿನಲ್ಲಿಯೇ ಹೇಳುವುದಾದರೆ, ನೋಡಮ್ಮಾ ವಿಜಯಲಕ್ಷ್ಮಿ... ಯಾರೋ ಶಿಷ್ಯಂದಿರಿಗೆ ಹೇಳಿ ವಿಡಿಯೋ ಮಾಡಿಸಿ ಹಾಕಿದ್ದಾನೆ ನಿನ್ನ ಗಂಡ ದರ್ಶನ್‌. ನಿನ್ನ ಬಗ್ಗೆ ನಾವು ಇಷ್ಟೆಲ್ಲಾ ಒಳ್ಳೆಯದು ಮಾತನಾಡಬೇಕಾದರೆ, ನನ್ನ ಹೆಂಡ್ತಿ- ಮಕ್ಕಳ ಬಗ್ಗೆ ನಿನ್ನ ಗಂಡ ಅವನ ಶಿಷ್ಯಂದಿರು ನೇಣು ಹಾಕ್ತೇನೆ, ಪಾಯ್ಸನ್‌ಹಾಕ್ತೇನೆ ಎಂದರೆ ಹೇಗೆ? ಆ ವಾಯ್ಸ್‌ಕೇಳಿದ್ರೇನೇ ಜಗದೀಶ್‌ಒಬ್ಬ ಬಾಹುಬಲಿ ಆಗಿ ಬಿಡ್ತಾನೆ. ಕಾರಣ ಯಾಕೆ ಅಂದ್ರೆ, ನನ್ನನ್ನು ಮುಟ್ಟಿದ್ರೂ ಪರವಾಗಿಲ್ಲ, ನಾನು ಪ್ರೀತಿ ಮಾಡೋರನ್ನು ಮುಟ್ಟಿದ್ರೆ ನಾನು ಜಗದೀಶ ಆಗಲ್ಲ, ಬಾಹುಬಲಿ ಆಗ್ತೇನೆ. ನಾನು ಪ್ರೀತಿ ಮಾಡುವ ವಿಚಾರ ಬಂದರೆ ನಾನು ಯಾರನ್ನೂ ಕೇರ್‌ಮಾಡಲ್ಲ, ಅದು ಮೇಲಿರುವ ಶಕ್ತಿಯಾದರೂ ಕೂಡ ನಾನು ನನ್ನ ಬಾಹುಬಲಿ ಶಕ್ತಿಯನ್ನು ತೋರಿಸಿಯೇ ತೋರಿಸ್ತೇನೆ ಎಂದು ಹೇಳಿದ್ದಾರೆ. 

ಕನ್ನಡ ಇಂಡಸ್ಟ್ರಿ ಬಾಸ್ ದರ್ಶನ್ ಅಂತೆ. ಮೆಡಿಕಲ್ ಬೇಲ್​ ಮೇಲೆ ಹೊರಗೆ ಇದ್ದಾನೆ ಅವನ ಹೆಸರು ಹೇಳಿಕೊಂಡು ನನಗೆ ಧಮ್ಕಿ ಹಾಕ್ತಿದ್ದಾರೆ. ದರ್ಶನ್​ ಬಗ್ಗೆ ಯಾಕ್​ ಏಕವಚನದಲ್ಲಿ ಮಾತಾಡ್ತೀಯಾ, ಮರ್ಡರ್ ಆಗ್ತೀಯಾ ಎಂದೆಲ್ಲಾ ಮೆಸೇಜ್​ಗಳು ಬರ್ತಿವೆ ಎಂದು ಲಾಯರ್ ಜಗದೀಶ್ ಇದಾಗಲೇ ಆರೋಪಿಸಿದ್ದಾರೆ. ನನಗೆ ನಿತ್ಯ ಸಾವಿರಾರು ಫೋನ್​ಗಳು ಬರ್ತಿವೆ. ದರ್ಶನ್ ಹಾಗೂ ರಚಿತಾ ರಾಮ್​ ಬಗ್ಗೆ ಮಾತಾಡ್ತೀಯಾ, ಕನ್ನಡ ಸಿನಿಮಾ ಇಂಡಸ್ಟ್ರಿಗೆ ಹೇಗೆ ಕಾಲಿಡ್ತೀಯಾ ನೋಡೋಣ ಅಂತೆಲ್ಲಾ ಬೆದರಿಕೆ ಹಾಕ್ತಿದ್ದಾರೆ ಎಂದಿದ್ದಾರೆ. 

ಪುಟ್ಟಕ್ಕನ ಮಗಳು ಸ್ನೇಹಾಳನ್ನು ಚಿತೆಗೇರಿಸೋ ಮುನ್ನ ಶೂಟಿಂಗ್​ ಸೆಟ್​ನಲ್ಲಿ ಆಗಿದ್ದೇನು? ವಿಡಿಯೋ ವೈರಲ್