Asianet Suvarna News Asianet Suvarna News

ರಾಜ್ಯದಲ್ಲಿ ಎಗ್ಗಿಲ್ಲದೆ ನಡೀತಿದ್ಯಂತೆ ಡ್ರಗ್ಸ್ ಮಾಫಿಯಾ: ದಾಖಲೆ ಕೊಡ್ತೀನಿ ಎಂದು ಸ್ಫೋಟಕ ಸತ್ಯ ಬಿಚ್ಚಿಟ್ಟ ದುನಿಯಾ ವಿಜಯ್

ಯುವ ಪೀಳಿಗೆ ಈಗ ಹೇಗೆ ಹಾದಿತಪ್ಪುತ್ತಾರೆ ಅನ್ನೋದನ್ನ ಆಳವಾಗಿ ದುನಿಯಾ ವಿಜಯ್ ಕತೆ ಮಾಡಿ ನಿರ್ದೇಶನ ಮಾಡಿರೋದು ಈಗಾಗಲೇ ತೆರೆ ಮೇಲೆ ಕಾಣಿಸಿದೆ. ಈ ಹೊತ್ತಲೇ ದುನಿಯಾ ವಿಜಯ್ ಸ್ಫೋಟಕ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. 

Bheema Movie Starrer Duniya Vijay revealed the explosive truth that she gave the drug mafia record gvd
Author
First Published Aug 9, 2024, 10:12 PM IST | Last Updated Aug 9, 2024, 10:12 PM IST

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಭೀಮ ಸಿನಿಮಾ ಭರ್ಜರಿಯಾಗಿ ರಾಜ್ಯಾದ್ಯಂತ ರಿಲೀಸ್ ಆಗಿದ್ದು ಮಾಸ್ ಆಡಿಯನ್ಸ್ ಫುಲ್ ಖುಷ್ ಆಗಿದ್ದಾರೆ. ಯುವ ಪೀಳಿಗೆ ಈಗ ಹೇಗೆ ಹಾದಿತಪ್ಪುತ್ತಾರೆ ಅನ್ನೋದನ್ನ ಆಳವಾಗಿ ದುನಿಯಾ ವಿಜಯ್ ಕತೆ ಮಾಡಿ ನಿರ್ದೇಶನ ಮಾಡಿರೋದು ಈಗಾಗಲೇ ತೆರೆ ಮೇಲೆ ಕಾಣಿಸಿದೆ. ಈ ಹೊತ್ತಲೇ ದುನಿಯಾ ವಿಜಯ್ ಸ್ಫೋಟಕ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. 

ಹೌದು! ಭೀಮ ಸಿನಿಮಾ ಮೂಲಕ ಡ್ರಗ್ಸ್ ಬಗ್ಗೆ ದುನಿಯಾ ವಿಜಯ್ ದನಿ ಎತ್ತಿದ್ದಾರೆ. ರಾಜ್ಯದಲ್ಲಿ ಎಗ್ಗಿಲ್ಲದೆ ಡ್ರಗ್ಸ್ ಮಾಫಿಯಾ ನಡೀತಿದ್ಯಂತೆ, ಈ ಬಗ್ಗೆ ಸಿನಿಮಾ ಮೂಲಕ ಎಚ್ಚರಿಸಲು ದುನಿಯಾ ವಿಜಯ್ ಹೊರಟಿದ್ದಾರೆ. ಇದರ ಬಗ್ಗೆ ಎಲ್ಲಾ ದಾಖಲೆ ಇದೆ. ಯಾರೂ ಇದರ ಬಗ್ಗೆ ಮಾತಾಡ್ತಿಲ್ಲ. ಇದರ ವಿರುದ್ಧ ಯಾರೂ ಕ್ರಮ ಕೈಗೊಳ್ತಾ ಇಲ್ಲ. ಕೊನೆಗೆ ಸಿನಿಮಾ ಮೂಲಕ ಜಾಗೃತಿ ಮೂಡಿಸೋಕೆ ಬಂದೆ ಎಂದು ದುನಿಯಾ ವಿಜಯ್ ಹೇಳಿದ್ದಾರೆ.  ಈ ಇಂಟರ್ ವ್ಯೂವ್ ಬಳಿಕ ಅವರೆಲ್ಲಾ ಎಚ್ಚೆತ್ತುಕೊಳ್ತಾರೆ. ಇನ್ನೊಂದು ವಾರ ಯಾವುದೂ ನಡೆಯೋಲ್ಲ. ಆದ್ರೆ ರೇಟ್ ಜಾಸ್ತಿ ಮಾಡ್ತಾರೆ. 10 ಇರೋ ಮಾತ್ರೆಗಳು 5 ಸಾವಿರಕ್ಕೆ ಸೇಲಾದ್ರೂ ಅಚ್ಚರಿ ಇಲ್ಲ. ಈ ಬಗ್ಗೆ ಪೊಲೀಸ್ ಡಿಪಾರ್ಟ್ಮೆಂಟ್ ಕೇಳಿದ್ರೆ ಎಲ್ಲಾ ದಾಖಲೆ ಕೊಡ್ತೀನಿ ಎಂದು ದುನಿಯಾ ವಿಜಯ್ ತಿಳಿಸಿದ್ದಾರೆ.

ಸೂಕ್ಷ್ಮ ವಿಚಾರ ಹೇಳಿದ್ದೇನೆ: ಭೀಮ ಚಿತ್ರದ ಮೂಲಕ ಒಂದು ಸೂಕ್ಷ್ಮ ವಿಚಾರವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ಈ ಚಿತ್ರವನ್ನು ಎಲ್ಲರೂ ನೋಡಬೇಕು. ಅದರಲ್ಲೂ ಈ ಸಿನಿಮಾ ನೋಡಿದ ಮೇಲೆ ಈ ಚಿತ್ರದಲ್ಲಿ ನಾನು ಹೇಳಲು ಹೊರಟಿರುವ ವಿಚಾರದ ಮೇಲೆ ಮಾಧ್ಯಮಗಳು ಹೆಚ್ಚು ಬೆಳಕು ಚೆಲ್ಲುವ ಮೂಲಕ ಸರ್ಕಾರದ ಗಮನ ಸೆಳೆದು, ಮನೆ ಮನೆಗೂ ಬಂದು ಕೂತಿರುವ ಈ ಸೂಕ್ಷ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಸೆನ್ಸಾರ್‌ನಿಂದ ಎ ಸರ್ಟಿಫಿಕೇಟ್‌ ನೀಡಿದ್ದಾರೆ. ಆದರೂ ಎಲ್ಲಾ ವಯಸ್ಸಿನವರು ನೋಡಬೇಕಾದ ಕತೆ ಈ ಚಿತ್ರದಲ್ಲಿದೆ. ವಿದ್ಯಾರ್ಥಿಗಳು, ಹದಿಹರೆಯದವರು, ಅದರಲ್ಲೂ ಹೆಣ್ಣು ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾ ಇದು’ ಎಂದರು.

ಭೀಮ ಕತೆ ನಾನು ನೋಡಿದ್ದು, ಕೇಳಿದ್ದು, ಅನುಭವಿಸಿದ್ದು: ದುನಿಯಾ ವಿಜಯ್ Exclusive Interview

ಭೀಮ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್: ಇಂದು ತೆರೆ ಕಂಡ ದುನಿಯಾ ವಿಜಯ್ ಅಭಿನಯದ ಭೀಮಾ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮಾಸ್ ಜೊತೆ ಮೆಸೇಜ್ ಇರೋ ಸಿನಿಮಾ ಕೊಟ್ಟ ವಿಜಯ್, ಮಾದಕ ದ್ರವ್ಯಗಳ ಕುರಿತು ಸಿನಿಮಾದಲ್ಲಿ ಜಾಗೃತಿ ಮೂಡಿಸಿದ್ದಾರೆ. ಚಿತ್ರದಲ್ಲಿ ಲೇಡಿ ಆಫೀಸರ್ ಗಿರಿಜಾ ಆಗಿ ನಟಿ ಪ್ರಿಯಾ ನಟಿಸಿದ್ದು, ಡ್ರಗ್ಸ್ ಲೈಫ್ ಬಗ್ಗೆ ಕುರಿತ ನೈಜ ಘಟನೆ ಆಧಾರಿತ ಚಿತ್ರವಾಗಿದೆ. ಇನ್ನು ಸಲಗ ಬಳಿಕ ದುನಿಯಾ ವಿಜಯ್ ಆ್ಯಕ್ಷನ್ ಕಟ್ ಹೇಳಿರುವ ಎರಡನೇ ಸಿನಿಮಾ ಭೀಮ.  ಕೃಷ್ಣ ಸಾರ್ಥಕ್‌ ಮತ್ತು ಜಗದೀಶ್‌ ಗೌಡ ಚಿತ್ರವನ್ನು ನಿರ್ಮಿಸಿದ್ದಾರೆ. ಅಶ್ವಿನಿ, ಭೀಮ, ಅಚ್ಯುತ್‌ ಕುಮಾರ್‌, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಪ್ರಧಾನ ಪಾತ್ರಗಳಲ್ಲಿದ್ದಾರೆ.

Latest Videos
Follow Us:
Download App:
  • android
  • ios