ಭಾಗ್ಯಲಕ್ಷ್ಮಿ ಧಾರಾವಾಹಿಯ ಕುಸುಮಾ ಪಾತ್ರಧಾರಿ ಪದ್ಮಜಾ ರಾವ್, ಆರಂಭದಲ್ಲಿ ನಕಾರಾತ್ಮಕ ಟೀಕೆಗಳನ್ನು ಎದುರಿಸಿದರೂ ಈಗ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ಪಾತ್ರವು ತಮ್ಮ ನಿಜ ಜೀವನದ ದಿಟ್ಟತನವನ್ನು ಹೆಚ್ಚಿಸುತ್ತಿದೆ ಎನ್ನುತ್ತಾರೆ. ೩೫ ವರ್ಷಗಳಿಂದ ಒಂಟಿ ಜೀವನ ನಡೆಸುತ್ತಿರುವ ಪದ್ಮಜಾ, ಭಾಗ್ಯಳ ಕಷ್ಟಗಳನ್ನು ತಾವೂ ಅನುಭವಿಸಿರುವುದಾಗಿ ಹೇಳಿದ್ದಾರೆ. ಭಾಗ್ಯಳ ಪಾತ್ರವು ಮಹಿಳೆಯರಿಗೆ ಸ್ಫೂರ್ತಿಯಾಗಲಿ ಎಂದು ಆಶಿಸುತ್ತಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯ ಲಕ್ಷ್ಮಿ ಧಾರಾವಾಹಿಯಲ್ಲಿ ಕುಸುಮಾ ಪಾತ್ರದಲ್ಲಿ ಖಡಕ್ ಆಗಿ ಕಾಣಿಸಿಕೊಳ್ಳುತ್ತಿರುವುದು ಪದ್ಮಜಾ ರಾವ್. ಅಯ್ಯೋ ಅತ್ತೆ ಯಾವತ್ತೂ ಕುಸುಮಾ ತರ ಇರ್ಬಾರದು ಎಷ್ಟು ಜೋರ್ ಮಾಡ್ತಾಳೆ ಎಂದು ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದವರು ಈಗ ನಮಗೂ ಕುಸುಮಾ ತರ ಅತ್ತೆ ಬೇಕು ಎಂದು ಪಾಸಿಟಿವ್ ಕಾಮೆಂಟ್ ಮಾಡಲು ಶುರು ಮಾಡಿದ್ದಾರೆ. 

'ಕುಸುಮಾ ಪಾತ್ರ ನನಗೆ ತುಂಬಾ ಖುಷಿ ಕೊಟ್ಟಿದೆ ಏಕೆಂದರೆ ಹಲವು ಸಿನಿಮಾಗಳಲ್ಲಿ ನನಗೆ ಸಾಫ್ಟ್‌ ಪಾತ್ರ ಮಾಡಿರುವುದು. ಒಂದೆರಡು ಸಿನಿಮಾಗಳಲ್ಲಿ ಘಟವಾಣಿ ಪಾತ್ರ ಮಾಡಿರುವುದು. ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಕುಸುಮಾ ಘಟವಾಣಿಯಾಗಿರುತ್ತಾಳೆ ಎಲ್ಲರೂ ಆಕೆಗೆ ಹೆದರಿಕೊಳ್ಳುತ್ತಾರೆ ಎಂದು ಕಥೆ ಹೇಳಿದಾಗ ತುಂಬಾ ಇಷ್ಟ ಆಯ್ತು. ಕುಸುಮಾ ಪಾತ್ರದಲ್ಲಿ ತುಂಬಾ ಡಿಫರೆನ್ಸ್‌ ಇದೆ. ನಿಜ ಜೀವನದಲ್ಲಿ ನಾನು ಜೋರಾಗಬೇಕು ಯಾರು ಏನೇ ಹೇಳಿದ್ದರೂ ಜೋರಾಗಿ ನೇರವಾಗಿ ಉತ್ತರಿಸಬೇಕು ಅಂದುಕೊಳ್ಳುತ್ತಿದ್ದೆ ಆದರೆ ಆಗುತ್ತಿರಲಿಲ್ಲ. ಕುಸುಮಾ ಪಾತ್ರ ನನ್ನ ನಿಜ ಜೀವನವನ್ನು ಬದಲಾಯಿಸುತ್ತಿದೆ. ಒಂದು ಹೆಣ್ಣಾಗಿ ಪದ್ಮಜಾ ರಾವ್ ಆಗಿ ಕುಸುಮಾ ಆಗಿ ಒಂದು ತಾಯಿ ಆಗಿ ಒಂದು ಹೆಣ್ಣು ಆಗಿ....ಯಾವುದೇ ಆಂಗಲ್‌ನಲ್ಲಿ ತೆಗೆದುಕೊಂಡರೂ ಹೆಣ್ಣು ಮಗಳು ದಿಟ್ಟವಾಗಿ ನಿಲ್ಲುತ್ತಾರೆ ತಮ್ಮ ಸ್ಟ್ಯಾಂಡ್ ತೆಗೆದುಕೊಳ್ಳುತ್ತಾರೆ ಅಂದ್ರೆ ಖಂಡಿತಾ ಅದು ಗೆಲ್ಲುವೇ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಪದ್ಮಜಾ ರಾವ್ ಮಾತನಾಡಿದ್ದಾರೆ.

ಮತ್ತೆ ಬರ್ತಿದ್ದಾರೆ 'ಅಧ್ಯಕ್ಷ' ನಟಿ ಹೆಬ್ಬಾ ಪಟೇಲ್; 10 ವರ್ಷಗಳ ಬದಲಾವಣೆ ನೋಡಿ ನೆಟ್ಟಿಗರು ಶಾಕ್

'ಸೀರಿಯಲ್‌ನಲ್ಲಿ ಭಾಗ್ಯ ಏನು ಎದುರಿಸುತ್ತಿದ್ದಾಳೆ ಅದನ್ನು ನಾನು ನಿಜ ಜೀವನದಲ್ಲಿ ಎದುರಿಸಿದ್ದೆ. ನನ್ನ ಮಗ ಕೇವಲ 2 ವರ್ಷ ಇದ್ದಾಗ ಮನೆಯಿಂದ ಹೊರ ಬಂದವಳು. ಈಗ ನನಗೆ 58 ವರ್ಷ....ಸುಮಾರು 35 ವರ್ಷಗಳಿಂದ ನಾನು ಒಂಟಿಯಾಗಿ ಜೀವನ ಮಾಡಿದ್ದೀನಿ. ಆರಂಭದಲ್ಲಿ ಜನರನ್ನು ಎದುರಿಸುವುದು ತುಂಬಾ ಕಷ್ಟ ಆಯ್ತು ಆದರೆ ಒಂದೆರಡು ವರ್ಷ ದಾಟಿದ ಮೇಲೆ ಮನಸ್ಸು ಗಟ್ಟಿಯಾಗುತ್ತದೆ ನಾವು ಧೈರ್ಯ ಮಾಡುತ್ತೀನಿ. ಭಾಗ್ಯ ಪಾತ್ರ ಅನೇಕರಿಗೆ ಸ್ಫೂರ್ತಿಯಾಗಬೇಕು..ಕುಟುಂಬವನ್ನು ಗಟ್ಟಿಯಾಗಿ ಇಟ್ಟುಕೊಳ್ಳಬೇಕು ಆದರೆ ಒಂದು ಹಂತ ಮುಟ್ಟಿದ ಮೇಲೆ ದೂರ ಬರಬೇಕು. ನನ್ನ ಜೀವನಕ್ಕೂ ಭಾಗ್ಯ ಕಥೆಗೂ ತುಂಬಾ ಕನೆಕ್ಟ್ ಆಗುತ್ತದೆ' ಎಂದು ಪದ್ಮಜಾ ರಾವ್ ಹೇಳಿದ್ದಾರೆ.

ಹತ್ತಿರದಿಂದ ನೋವು ಮತ್ತು ದೇಹದಲಾಗುವ ಬದಲಾವಣೆ ನೋಡಿದ್ದೀನಿ, ಹರಿಪ್ರಿಯಾಗಾಗಿ 2 ತಿಂಗಳು ರಜೆ ಹಾಕಿದ್ದೀನಿ; ವಸಿಷ್ಠ ಸಿಂಹ