Asianet Suvarna News Asianet Suvarna News

ಕೊರೋನಾ ಜಾಗೃತಿಗೆ ಸಿನಿಮಾ ಡೈಲಾಗ್, ಹಾಡಿನ ಮೊರೆ ಹೋದ ಖಾಕಿ ಟೀಂ

ಇತ್ತೀಚಿಗೆ ತೆರೆ ಕಂಡ ಲವ್‌ಮಾಕ್ಟೇಲ್ ಸಿನಿಮಾ ಭಾರೀ ಸದ್ದು ಮಾಡಿತ್ತು. ಈ ಸಿನಿಮಾದಲ್ಲಿ ಅದಿತಿ ಹೇಳುವ 'ಹೆಂಗೆ ನಾವು'? ಡೈಲಾಗ್ ಬಳಸಿಕೊಂಡು ಕೊರೋನಾ ಜಾಗೃತಿ ಮೂಡಿಸಲಾಗಿದೆ. ಅದಿತಿ ಫೋಟೋ ಬಳಸಿಕೊಂಡು, 'ಕೊರೋನಾ ಹೊಡೆದೋಡಿಸಲು ನಾವು ಮನೆಯಲ್ಲಿಯೇ ಇರುತ್ತೇವೆ. ಹೆಂಗೆ ನಾವು? ಎಂದು ಬರೆಯಲಾಗಿದೆ. 
 

Bengaluru city police creating a covid 19 awareness by using song and dialogues
Author
Bengaluru, First Published Apr 11, 2020, 9:59 AM IST

ಇಡೀ ಜಗತ್ತಿಗೆ ಕಂಟಕವಾಗಿರುವ ಕೊರೋನಾ ವೈರಸನ್ನು ನಿರ್ಮೂಲನೆ ಮಾಡಲು ಇಡೀ ವಿಶ್ವವೇ ಕಟಿ ಬದ್ಧವಾಗಿದೆ. ಎಲ್ಲಾ ದೇಶಗಳು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿವೆ. ನಮ್ಮ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಲಾಕ್‌ಡೌನ್ ಘೋಷಿಸಿದ್ದಾರೆ. ಇದು ಇನ್ನೂ 15 ದಿನ ಮುಂದುವರೆಯುವ ಸುಳಿವನ್ನೂ ಪ್ರಧಾನಿ ಕೊಟ್ಟಿದ್ದಾರೆ. 

ಲಾಕ್‌ಡೌನ್ ಘೋಷಣೆ ಮಾಡಿ, ಯಾರೂ ಮನೆಯಿಂದ ಹೊರ ಬರಬೇಡಿ ಎಂದು ಸರ್ಕಾರ, ಮಾಧ್ಯಮಗಳು ಎಷ್ಟೇ ಕೇಳಿಕೊಂಡರೂ ಜನ ಮಾತ್ರ ಕ್ಯಾರೇ ಎನ್ನುತ್ತಿಲ್ಲ.  ಲಾಠಿಗೂ ಬಗ್ಗದ ಜನರಿಗೆ ಪೊಲೀಸರು ಹಾಡಿನ ಮೂಲಕ, ಸಿನಿಮಾ ಡೈಲಾಗ್ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. 

ಪವನ್ ಕಲ್ಯಾಣ್‌ಗೆ ರಾಮ್ ಚರಣ್‌ ಸಾಥ್‌, ಕೋವಿಡ್‌-19 ವಿರುದ್ಧ ರವಿಚಂದ್ರನ್‌ ಸಮರ!

ಇತ್ತೀಚಿಗೆ ತೆರೆ ಕಂಡ ಲವ್‌ಮಾಕ್ಟೇಲ್ ಸಿನಿಮಾ ಭಾರೀ ಸದ್ದು ಮಾಡಿತ್ತು. ಈ ಸಿನಿಮಾದಲ್ಲಿ ಅದಿತಿ ಹೇಳುವ 'ಹೆಂಗೆ ನಾವು'? ಡೈಲಾಗ್ ಬಳಸಿಕೊಂಡು ಕೊರೋನಾ ಜಾಗೃತಿಇ ಮೂಡಿಸಲಾಗಿದೆ. ಅದಿತಿ ಫೋಟೋ ಬಳಸಿಕೊಂಡು, 'ಕೊರೋನಾ ಹೊಡೆದೋಡಿಸಲು ನಾವು ಮನೆಯಲ್ಲಿಯೇ ಇರುತ್ತೇವೆ. ಹೆಂಗೆ ನಾವು? ಎಂದು ಬರೆಯಲಾಗಿದೆ. 

 


ಇನ್ನೊಂದೆಡೆ ಕೊರೋನಾ ಜಾಗೃತಿ ಗೀತೆಯನ್ನು ಮಾಡಲಾಗಿದೆ. ಸರಿಗಮಪ ವೇದಿಕೆಯಲ್ಲಿ ಗಮನ ಸೆಳೆದಿರುವ ಸುಬ್ರಮಣಿ ಹಾಗೂ ಅವರ ತಂಡ 'ಕೈಯ ಮುಗಿದು ನಿಮ್ಮನ್ನು ಬೇಡಿಕೊಳ್ತೀವಿ...' ಎಂಬ ಹಾಡೊಂದನ್ನು ರಚಿಸಿದ್ದಾರೆ. 

Follow Us:
Download App:
  • android
  • ios